Asianet Suvarna News Asianet Suvarna News

ಸ್ಟುಡಿಯೋದಲ್ಲಿ ಕಸ ಗುಡಿಸುತ್ತಿದ್ದ ಈತ ಸೂಪರ್‌ಸ್ಟಾರ್ ಆಗಿದ್ದು ಸುಮ್ಮನೆ ಅಲ್ಲ!

ಸ್ಟುಡಿಯೋದಲ್ಲಿ ಸ್ವೀಪರ್ ಆಗಿದ್ದಾತ ಸೂಪರ್‌ಸ್ಟಾರ್ ಕೂಡಾ ಆಗಬಹುದು ಎಂದರೆ ಆ ನಡುವಿನ ಆತನ ಪರಿಶ್ರಮ ಎಂಥದಿರಬೇಕು ಎಂದು ನೀವೇ ಊಹಿಸಿ. ಕ್ಲಾಪರ್ ಬಾಯ್ ಆಗಿ ಕಡಿಮೆ ಸಂಬಳ ಪಡೆಯುತ್ತಿದ್ದ ಹುಡುಗ ಮುಂದೊಂದು ದಿನ ಕೋಟಿ ಕೋಟಿ ಸಂಭಾವನೆ ಪಡೆವ ಸ್ಟಾರ್ ಆದ. ಯಾರೀತ?

Meet superstar who used to sweep floor in film studio skr
Author
First Published Jan 6, 2024, 1:36 PM IST

ರಗ್ಸ್ ಟು ರಿಚಸ್ ಕತೆಗಳು ಎಂಥವರಲ್ಲೂ ಭರವಸೆ ಹುಟ್ಟಿಸುತ್ತವೆ. ನಾವೂ ಭವಿಷ್ಯದಲ್ಲಿ ಕನಸನ್ನು ನನಸು ಮಾಡಿಕೊಳ್ಳಲೇಬೇಕಂಬ ಹಟ ಹುಟ್ಟಿಸುತ್ತವೆ. ಅಂಥದೇ ಒಂದು ಸ್ಪೂರ್ತಿದಾಯಕ ಕತೆ ಈ ಸೂಪರ್‌ಸ್ಟಾರ್ ಹಿಂದಿದೆ.

ಹೌದು, ಯಾವುದೇ ಕ್ಷೇತ್ರದಲ್ಲಿ ಹೆಸರು ಗಳಿಸಲು ಕಠಿಣ ಪರಿಶ್ರಮದ ಜೊತೆಗೆ ಯೋಜಿತ ತಂತ್ರಗಾರಿಕೆಯೂ ಬೇಕು. ಸರಿಯಾದ ಸಮಯದಲ್ಲಿ ತೆಗೆದುಕೊಂಡ ಸರಿಯಾದ ನಿರ್ಧಾರಗಳು ಲಾಭದಾಯಕವಾಗಿ ಪರಿಣಮಿಸುತ್ತವೆ. ಬಾಲಿವುಡ್‌ನ ಅಂತಹ ಒಬ್ಬ ನಟ ಮತ್ತು ನಿರ್ದೇಶಕರಿದ್ದರು, ಅವರು ಬಹಳ ಚಿಂತನಶೀಲವಾಗಿ ಚಲನಚಿತ್ರ ಜಗತ್ತಿಗೆ ಪ್ರವೇಶಿಸಿದರು ಮತ್ತು ಅದರ ಪರಿಣಾಮವಾಗಿ, ಎಂದಿಗೂ ತನ್ನನ್ನು ಜನರು ಮರೆಯದಂಥ ಸಾಮ್ರಾಜ್ಯ ಸೃಷ್ಟಿಸಲು ಅವಿರಿಗೆ ಸಾಧ್ಯವಾಯಿತು. 

ಹೌದು, ಸೂಪರ್‌ಸ್ಟಾರ್ ಪಟ್ಟ ಪಡೆವ ಮೊದಲು ಈ ನಟನಿಗಿದ್ದದ್ದು ಸ್ವೀಪರ್ ಪಟ್ಟ. ಈತ ಸ್ಟುಡಿಯೋದಲ್ಲಿ ಕಸ ಗುಡಿಸುತ್ತಿದ್ದ. ನಂತರ ಕ್ಲ್ಯಾಪರ್ ಬಾಯ್ ಆಗಿ ಕೆಲಸ ಮಾಡಿ ಸದಾ ಬೈಸಿಕೊಳ್ಳುತ್ತಿದ್ದ. ಅತಿ ಕಡಿಮೆ ಸಂಬಳ ಪಡೆಯುತ್ತಾ ತಾನು ಹೀರೋ ಆಗುವ ಕನಸು ಕಾಣುತ್ತಿದ್ದ. ತಂದೆ ಚಿತ್ರರಂಗದಲ್ಲಿದ್ದರೂ ಈ ನಟ  ಸಾಕಷ್ಟು ಒದ್ದಾಡಬೇಕಾಯಿತು. ಅಂತೂ ಅವಕಾಶಗಳ ಬಾಗಿಲು ತೆರೆಯಿತು. ನಟನ ಅದೃಷ್ಟ ಖುಲಾಯಿಸಿತು. ಯಾರಪ್ಪಾ ಈ ನಟ ಎಂದು ಯೋಚಿಸುತ್ತಿದ್ದೀರಾ? ಇವರೇ ಬಾಲಿವುಡ್ ಸೂಪರ್ ಸ್ಟಾರ್, ಭಾರತೀಯ ಚಿತ್ರರಂಗದ ಶೋಮ್ಯಾನ್ ರಾಜ್ ಕಪೂರ್. 

ಧರ್ಮಸ್ಥಳ ಮಂಜುನಾಥ, ಕೊರಗಜ್ಜನ ದೇಗುಲದಲ್ಲಿ ರಕ್ಷಿತಾ ಪ್ರೇಮ್; ಸೆಲ್ಫಿ ಕೊಡಲಿಲ್ಲ ಎಂದ ಫ್ಯಾನ್!

ಪೃಥ್ವಿರಾಜ್ ಕಪೂರ್ ಅವರ ಮಗ ರಾಜ್ ಕಪೂರ್ ಬಾಲಿವುಡ್ ನಲ್ಲಿ ಹೆಸರು ಗಳಿಸಲು ತುಂಬಾ ಕಷ್ಟಪಟ್ಟಿದ್ದಾರೆ. ಇದರ ಪರಿಣಾಮವೇ ಇಂದು ಕಪೂರ್ ಕುಟುಂಬ ಕೋಟ್ಯಂತರ ರೂಪಾಯಿ ಮೌಲ್ಯದ ಸಾಮ್ರಾಜ್ಯ ಹೊಂದಿರುವ ಮನರಂಜನಾ ಲೋಕದಲ್ಲಿ ದೊಡ್ಡ ಹೆಸರು ಪಡೆದಿದೆ.

ಪಾಕಿಸ್ತಾನದಲ್ಲಿ ಜನನ
ರಾಜ್ ಕಪೂರ್ ಡಿಸೆಂಬರ್ 14, 1929ರಂದು ಇಂದಿನ ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದರು. ಅವರ ತಂದೆ ಪೃಥ್ವಿರಾಜ್ ಕಪೂರ್ ಪ್ರಸಿದ್ಧ ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದರು. ಆದರೆ, ಅವರ ತಾಯಿ ರಾಮಸರಣಿ ದೇವಿ ಕಪೂರ್ ಗೃಹಿಣಿಯಾಗಿದ್ದರು. ರಾಜ್ ಕಪೂರ್ ಅವರ ಜನ್ಮ ಹೆಸರು ಸೃಷ್ಟಿ ನಾಥ್ ಕಪೂರ್. ರಾಜ್ ಕಪೂರ್ ಡೆಹ್ರಾಡೂನ್, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು.

ಆರಂಭಿಕ ದಿನಗಳಲ್ಲಿ, ಪೃಥ್ವಿರಾಜ್ ಕಪೂರ್ ತಮ್ಮ ಮಗ ರಾಜ್ ಕಪೂರ್ ಅವರಿಗೆ ಹೋರಾಟಕ್ಕೆ ಅವಕಾಶ ನೀಡಿದರು. ರಾಜ್ ಕಪೂರ್ ಅವರು ಪೃಥ್ವಿ ಥಿಯೇಟರ್ ಅನ್ನು ಗುಡಿಸುತ್ತಿದ್ದರು ಮತ್ತು ಇದಕ್ಕಾಗಿ ಅವರು 1 ರೂಪಾಯಿಯನ್ನು ಸಂಬಳವಾಗಿ ಪಡೆಯುತ್ತಿದ್ದರು. ಅವರು 10 ವರ್ಷ ವಯಸ್ಸಿನವರಾಗಿದ್ದಾಗ 1935 ರಲ್ಲಿ 'ಇಂಕ್ವಿಲಾಬ್' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು.

ಪೃಥ್ವಿರಾಜ್ ಕಪೂರ್ ಅವರ ಸಲಹೆಯ ಮೇರೆಗೆ ರಾಜ್ ಕಪೂರ್ ನಿರ್ದೇಶಕ ಕೇದಾರ್ ಶರ್ಮಾ ಅವರ ಚಿತ್ರಗಳಲ್ಲಿ ಕ್ಲಾಪರ್ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಒಮ್ಮೆ ಅವರು ತಪ್ಪಾಗಿ ಕ್ಲಾಪ್ ತಟ್ಟಿದ್ದಕ್ಕಾಗಿ ಕೇದಾರ್ ಶರ್ಮಾರಿಂದ ಹಿಗ್ಗಾಮುಗ್ಗ ಬೈಸಿಕೊಂಡಿದ್ದರು. ಇದಾದ ನಂತರ ‘ನೀಲ್ ಕಮಾಲ್’ ಚಿತ್ರದಲ್ಲಿ ರಾಜ್ ಕಪೂರ್ ಗೆ ನಟನಾಗಿ ಅವಕಾಶ ಕೊಟ್ಟವರು ಕೇದಾರ್.

‘ನೀಲ್ ಕಮಲ್’ ಚಿತ್ರದ ಮೂಲಕ ರಾಜ್ ಕಪೂರ್ ಬಾಲಿವುಡ್ ನಲ್ಲಿ ಹೊಸ ಗುರುತು ಪಡೆದರು. ಈ ಚಿತ್ರದಲ್ಲಿ ಅವರು ಮಧುಬಾಲಾ ಎದುರು ನಟಿಸಿದ್ದರು. ‘ನೀಲ್ ಕಮಲ್’ ಚಿತ್ರದ ಯಶಸ್ಸಿನ ನಂತರ ರಾಜ್ ಕಪೂರ್ ಅವರಿಗೆ ಹಲವು ಚಿತ್ರಗಳಿಗೆ ಆಫರ್ ಬರಲಾರಂಭಿಸಿತು.

ಕಟ್ಟಡದಿಂದ ಜಿಗಿಯುತ್ತಿದ್ದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ 'ಅನಿಮಲ್'​ ನಟ: ವಿಡಿಯೋ ವೈರಲ್​

24ನೇ ವಯಸ್ಸಿಗೇ ನಿರ್ಮಾಪನ, ನಿರ್ದೇಶನ
ರಾಜ್ ಕಪೂರ್ ದಾರ್ಶನಿಕರಾಗಿದ್ದರು ಮತ್ತು ಅವರು ಉದ್ಯಮದಲ್ಲಿ ಚಲನಚಿತ್ರ ನಿರ್ಮಾಪಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ನಿರ್ಧರಿಸಿದರು. ಹೀರೋ ಆಗಿ ಸಿನಿಮಾ ಮಾಡುತ್ತಿದ್ದ ಅವರು ಕೇವಲ 24ನೇ ವಯಸ್ಸಿನಲ್ಲಿ ನಿರ್ದೇಶನ ಲೋಕಕ್ಕೆ ಕಾಲಿಟ್ಟರು. ಅವರ ನಿರ್ದೇಶನದಲ್ಲಿ ತಯಾರಾದ ಮೊದಲ ಚಿತ್ರದ ಹೆಸರು ‘ಆಗ್’. ಈ ಚಿತ್ರವು 1948 ರಲ್ಲಿ ಬಿಡುಗಡೆಯಾಯಿತ. ಇದರಲ್ಲಿ ರಾಜ್ ಕಪೂರ್ ಜೊತೆಗೆ ನರ್ಗೀಸ್ ಮತ್ತು ಕಾಮಿನಿ ಕೌಶಲ್ ನಟಿಸಿದ್ದಾರೆ.

‘ಆಗ್’ ಚಿತ್ರಕ್ಕೆ ಹಿರಿತೆರೆಯಲ್ಲಿ ಅಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ, ರಾಜ್ ಕಪೂರ್ ಬಿಡಲಿಲ್ಲ ಮತ್ತು ಇದಾದ ನಂತರ 1949 ರಲ್ಲಿ ಮತ್ತೊಮ್ಮೆ ನರ್ಗೀಸ್ ಜೊತೆ 'ಬರ್ಸಾತ್' ಎಂಬ ಚಿತ್ರವನ್ನು ನಿರ್ದೇಶಿಸಿದರು ಮತ್ತು ಅದು ಬ್ಲಾಕ್ ಬಸ್ಟರ್ ಹಿಟ್ಟಾಯಿತು.

ನಿಮ್ಮ ಮನಸ್ಥಿತಿ ಎಂಥದ್ದು ಅಂತ ತೋರ್ಸುತ್ತೆ; ಕೊನೆಗೂ ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟ ನಿವಿ-ಚಂದು!

ರಾಜ್ ಕಪೂರ್ RK ಸ್ಟುಡಿಯೋಸ್ ಅನ್ನು ಸ್ಥಾಪಿಸಿದರು ಮತ್ತು ಅದರ ಬ್ಯಾನರ್ ಅಡಿಯಲ್ಲಿ ಅನೇಕ ಚಲನಚಿತ್ರಗಳನ್ನು ನಿರ್ಮಿಸಿದರು. ಒಂದರ ಹಿಂದೆ ಒಂದರಂತೆ ಹಲವು ಹಿಟ್ ಚಿತ್ರಗಳನ್ನು ನೀಡಿ ಹಲವು ಕಲಾವಿದರ ಭವಿಷ್ಯ ಬೆಳಗಿದರು. ಅವರಿಗೆ 'ಶೋಮ್ಯಾನ್ ಆಫ್ ದಿ ಮಿಲೇನಿಯಮ್' ಎಂಬ ಗೌರವವನ್ನು ನೀಡಲಾಯಿತು.

ರಾಜ್ ಕಪೂರ್ ತಮ್ಮ ನಂತರದ ವರ್ಷಗಳಲ್ಲಿ ಅಸ್ತಮಾದಿಂದ ಬಳಲುತ್ತಿದ್ದರು; ಅವರು 1988 ರಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದರು.

Follow Us:
Download App:
  • android
  • ios