Asianet Suvarna News Asianet Suvarna News

ಅಬ್ಬಬ್ಬಾ... ಹೃತಿಕ್​ ರೋಷನ್​ ಜಿಮ್​ ತರಬೇತುದಾರನಿಗೆ ಈ ಪರಿ ಸಂಬಳನಾ?

ಹೃತಿಕ್​ ರೋಷನ್​ ತಮ್ಮ ಜಿಮ್​ ತರಬೇತುದಾರನಿಗೆ ನೀಡುವ ಸಂಬಳ ಕೇಳಿದರೆ ಅಬ್ಬಬ್ಬಾ ಎಂದು ಉದ್ಗಾರ ತೆಗೆಯಲೇಬೇಕು. ಒಂದು ತಿಂಗಳಿಗೆ ಇಷ್ಟೊಂದು ಸಂಬಳನಾ? 
 

Meet Indias highest paid gym trainer man behind Hrithik Roshan Ranveer suc
Author
First Published Oct 31, 2023, 12:07 PM IST

ಬಾಲಿವುಡ್ ಸೆಲೆಬ್ರಿಟಿಗಳಾದ ಹೃತಿಕ್ ರೋಷನ್, ರಣವೀರ್ ಸಿಂಗ್ ಮತ್ತು ಜಾನ್ ಅಬ್ರಹಾಂ ಅವರು ದೊಡ್ಡ ಪರದೆಯ ಮೇಲೆ ಸಿಕ್ಸ್​ ಪ್ಯಾಕ್​ ತೋರಿಸುತ್ತಲೇ ಇರುತ್ತಾರೆ. ಇವರು ಈ ರೀತಿ ದೇಹ ಬಲಪಡಿಸಿಕೊಳ್ಳಲು ಸಾಕಷ್ಟು ಶ್ರಮ ವಹಿಸಿ ದುಡಿಯುತ್ತರಾದರೂ, ಅದರ ಹಿಂದೆ ಇರುವುದು ಅವರ ಫಿಟ್​ನೆಸ್​ ತರಬೇತುದಾರರು. ಕೆಲವು ನಟರು ತಮ್ಮ ಚಿತ್ರಕ್ಕೆ ತಕ್ಕಂತೆ ಮೈ ದಪ್ಪ ಮಾಡಿಕೊಳ್ಳುವುದು, ತೆಳ್ಳಗೆ ಮಾಡಿಕೊಳ್ಳುವುದು, ಸಿಕ್ಸ್​ ಪ್ಯಾಕ್​ ಪ್ರದರ್ಶನ ಹೀಗೆ ದೇಹದ ಮೇಲೆ ಆಗಾಗ್ಗೆ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಇದರ ಸಂಪೂರ್ಣ  ಶ್ರೇಯಸ್ಸು ಅವರ ಫಿಟ್​ನೆಸ್​ ತರಬೇತುದಾರರಿಗೆ ಸಲ್ಲುತ್ತದೆ. ನಟರು ಏನು ಮಾಡಬೇಕು, ಹೇಗೆ ದೇಹ ಕಾಪಾಡಿಕೊಳ್ಳಬೇಕು, ಏನು ಡಯೆಟ್​ ಮಾಡಬೇಕು ಇತ್ಯಾದಿಗಳನ್ನು ಈ ಜಿಮ್​ ತರಬೇತುದಾರರು ನೋಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ನಟರ ಪ್ರಭಾವಶಾಲಿ ಮೈಕಟ್ಟುಗಳ ಹಿಂದೆ ಇರುವ ವ್ಯಕ್ತಿಗಳೇ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರ ಸಾಲಿಗೆ ಸೇರುತ್ತಾರೆ  ಎನ್ನುವ ಮಾಹಿತಿ ಹಲವರಿಗೆ ತಿಳಿದಿರಲಿಕ್ಕಿಲ್ಲ.
 
ನಟ ಹೃತಿಕ್ ರೋಷನ್ ಎಂದಾಕ್ಷಣ ಅವರ ಸಿಕ್ಸ್​ ಪ್ಯಾಕ್​ ಎಲ್ಲರ ಕಣ್ಣಮುಂದೆ ಬರುತ್ತದೆ. ಅವರ ಈ ಫಿಟ್‌ನೆಸ್ ಹಿಂದೆ ಇರುವುದು ಅವರ ಫಿಟ್​ನೆಸ್​ ತರಬೇತುದಾರ ಕ್ರಿಸ್ ಗೆಥಿನ್. ಸದ್ಯ ಇವರು  ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಜಿಮ್ ತರಬೇತುದಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಮತ್ತು ಅವರ ಹೆಚ್ಚಿನ ಶುಲ್ಕವು ದೇಶದ ಯಾವುದೇ ಫಿಟ್‌ನೆಸ್ ತರಬೇತುದಾರರಿಗಿಂತ ಹೆಚ್ಚು. ಅವರ ಶುಲ್ಕಗಳು ಮಾತ್ರವಲ್ಲ, ಅವರು ತಮ್ಮ ಗ್ರಾಹಕರಿಗೆ ಅತ್ಯಂತ ಕಷ್ಟಕರವಾದ ಮತ್ತು ಕಠಿಣವಾದ ಫಿಟ್‌ನೆಸ್ ದಿನಚರಿಗಳನ್ನು ಮಾಡಿಕೊಡುವಲ್ಲಿ ನಿಸ್ಸೀಮರು. ಕ್ರಿಸ್ ಗೆಥಿನ್ ಮೂಲತಃ ವೇಲ್ಸ್‌ನಿಂದ ಬಂದವರು ಮತ್ತು ಫಿಟ್‌ನೆಸ್ ತರಬೇತುದಾರರಾಗುವುದು ಯಾವಾಗಲೂ ಅವರ ಕನಸಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ, ಕ್ರಿಸ್ ಮೋಟಾರ್​ಸೈಕಲ್​  ಅಪಘಾತವಕ್ಕೆ ಈಡಾದರು.  ನಂತರ ವೈದ್ಯರು ಅವರ ದೇಹವು ಎಂದಿಗೂ ಚೇತರಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಆದಾಗ್ಯೂ, ಅವರು ಜಿಮ್‌ಗೆ ಹೋಗಲು ಪ್ರಾರಂಭಿಸಿದರು ಮತ್ತು ಶೀಘ್ರದಲ್ಲೇ ಫಿಟ್‌ನೆಸ್ ಮತ್ತು ಉತ್ತಮ ತರಬೇತಿ ಪಡೆದ ದೇಹಕ್ಕಾಗಿ ಒಲವು ಬೆಳೆಸಿಕೊಂಡರು.

ದೇಹ ಪ್ರದರ್ಶಿಸುತ್ತಾ ಎಕ್ಸ್​ಪೋಸ್​ ಮಾಡೋದು ಈಸಿ ಅಂದ್ಕೊಂಡ್ರಾ? ನೆಟ್ಟಿಗರ ವಿರುದ್ಧ ಕಿಡಿ ಕಾರಿದ 'ಪುಷ್ಪ' ನಟಿ

ಹೃತಿಕ್ ರೋಷನ್ ಗುಜಾರಿಶ್ ಚಿತ್ರೀಕರಣವನ್ನು ನಿಲ್ಲಿಸಿದಾಗ ಮತ್ತು ಕ್ರಿಶ್ 3 ಗಾಗಿ ತಯಾರಿ ನಡೆಸುತ್ತಿದ್ದಾಗ ಕ್ರಿಸ್ ಅವರನ್ನು ಭೇಟಿಯಾದರು. ಕ್ರಿಸ್ ಗೆಥಿನ್ ಅವರೊಂದಿಗೆ ಹೃತಿಕ್ ಅವರ ಫಿಟ್​ನೆಸ್​ ಪ್ರಯಾಣ  2010 ರಲ್ಲಿ ಪ್ರಾರಂಭವಾಯಿತು ಮತ್ತು ಇಬ್ಬರು ನಟನ ದೇಹವನ್ನು ಕೇವಲ 10 ವಾರಗಳಲ್ಲಿ ಪರಿವರ್ತಿಸಲು ಶ್ರಮಿಸಿದರು. ಹೃತಿಕ್ ರೋಷನ್ ಮಾತ್ರವಲ್ಲದೆ, ಕ್ರಿಸ್ ಭಾರತೀಯ ಚಲನಚಿತ್ರೋದ್ಯಮದ ಇತರ ಉನ್ನತ ನಟರಾದ ರಣವೀರ್ ಸಿಂಗ್, ಜಾನ್ ಅಬ್ರಹಾಂ, ಮಹೇಶ್ ಬಾಬು ಮತ್ತು ಇತರರೊಂದಿಗೆ ಕೆಲಸ ಮಾಡಿದ್ದಾರೆ. ಆದಾಗ್ಯೂ, ಹೃತಿಕ್ ಕ್ರಿಸ್‌ನ ಕಾಯಂ ಗ್ರಾಹಕರಾಗಿದ್ದಾರೆ  ಮತ್ತು ಇಬ್ಬರೂ ನಿಯಮಿತವಾಗಿ ಒಟ್ಟಿಗೆ ತರಬೇತಿ ನೀಡುತ್ತಾರೆ.

 ವರದಿಗಳ ಪ್ರಕಾರ, ಹೃತಿಕ್ ರೋಷನ್ ಕ್ರಿಸ್ ಗೆಥಿನ್ ಅವರ ಪರಿಣತಿ ಮತ್ತು ತರಬೇತಿ ತಂತ್ರಗಳಿಗಾಗಿ ತಿಂಗಳಿಗೆ ಸುಮಾರು 20 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ. ಕ್ರಿಸ್ ತಮ್ಮ ಸೆಲೆಬ್ರಿಟಿ ಮತ್ತು ಹೈ-ಪ್ರೊಫೈಲ್ ಕ್ಲೈಂಟ್‌ಗಳಿಂದ ತಿಂಗಳಿಗೆ ಪ್ರತಿಯೊಬ್ಬರಿಂದ 7 ಲಕ್ಷ ರೂಪಾಯಿಗಳಿಂದ 30 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುತ್ತಾರೆ ಎಂದು ತಿಳಿದಿದೆ. ಅಂದಹಾಗೆ ಕ್ರಿಸ್ ಗೆಥಿನ್ ಭಾರತ ಮತ್ತು ವೇಲ್ಸ್‌ನಾದ್ಯಂತ ತರಬೇತು ನೀಡಿದ್ದು ಅವರು ಸುಮಾರು 208 ಕೋಟಿಗಳಷ್ಟು (USD 25 ಮಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಪತಿಗಾಗಿ ಸಿನಿಮಾ ತೊರೆದು ಗೃಹಿಣಿಯಾದ ಬಾಲಿವುಡ್​ ನಟಿ! ಬ್ಲಾಕ್​ಬಸ್ಟರ್​ ಚಿತ್ರಗಳೀಗ ನೆನಪು ಮಾತ್ರ...

Follow Us:
Download App:
  • android
  • ios