ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಸಂಖ್ಯೆಯಲ್ಲಿ  ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ತ್ರಿಶಾ ಬಗ್ಗೆ ಮಾಡಲ್‌ ಕಮ್ ನಟಿ ಮೀರಾ ಮಿಥುನ್ ಕೊಟ್ಟ ಹೇಳಿಕೆ ತುಂಬಾನೇ ವೈರಲ್ ಅಗುತ್ತಿದೆ.

ಅಶ್ಲೀಲ ಪದ ಬಳಸಿ ರಜನಿಕಾಂತ್-ವಿಜಯ್ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್ ನಟಿ!

ಮೀರಾ ನಟಿಯಾಗಿ ಎಂಟ್ರಿ ಕೊಟ್ಟ ದಿನದಿಂದಲೂ ತ್ರಿಷಾ ಬಗ್ಗೆ ಒಂದಲ್ಲಾ ಒಂದು ವಿಚಾರಕ್ಕೆ ಆರೋಪ ಮಾಡುತ್ತಲ್ಲೇ ಇದ್ದಾರೆ. ಅದರಲ್ಲೂ ಇತ್ತೀಚಿಗೆ ತ್ರಿಶಾ ಸಿನಿ ಜರ್ನಿ ಪ್ರಾರಂಭಿಸಿದ ರೀತಿಯ ವಿಚಾರ ಟಾಕ್‌ ಆಫ್‌ ದಿ ಟೌನ್ ಆಗಿದೆ.

ಟ್ಟಿಟರ್‌ನಲ್ಲಿ ಸಕ್ರಿಯರಾಗಿರುವ ಮೀರಾ ಮೂರು ದಿನಗಳ ಹಿಂದೆ ತ್ರಿಷಾ ಬಗ್ಗೆ ಟ್ಟೀಟ್ ಮಾಡಿದ್ದಾರೆ. 'ಸಿನಿಮಾಗೆ ಎಂಟ್ರಿ ಕೊಟ್ಟಾಗ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ತ್ರಿಷಾ ಇದ್ದಕಿದ್ದಂತೆ ದೊಡ್ಡ ಸಿನಿಮಾ ಆಫರ್‌ ಪಡೆಯುವುದಕ್ಕೆ ಕಾರಣವಿದೆ. ಅವರಿವರ ಜೊತೆ ಮಲಗಿ ನಾಯಕಿಯಾದರು. ಆ ದಾರಿಯಿಂದಲೇ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು' ಎಂದು ಟ್ಟೀಟ್ ಮಾಡಿದ್ದಾರೆ.

 

ಅಷ್ಟೇ ಅಲ್ಲದೆ 'ಎನ್ನೈ ಅರಿಂದಾಳ್ ಸಿನಿಮಾದಲ್ಲಿ ನಾನು ಅಭಿನಯಿಸಿದ ಸೀನ್ ಕಟ್ ಮಾಡಿಸಿ ನನ್ನನ್ನು ಸಿನಿಮಾದಿಂದ ಹೊರ ಹಾಕಲು ತ್ರಿಷಾನೇ ಕಾರಣ' ಎಂದು ಗಂಭೀರ ಆರೋಪ ಮಾಡಿದ್ದಾರೆ. ತ್ರಿಷಾ ತಂದೆ ದೊಡ್ಡ ಸಮುದಾಯದಿಂದ ಬಂದವರು ಈ ಕಾರಣಕ್ಕೂ ಸಾಕಷ್ಟು ಅವಕಾಶ ಸಿಗುತ್ತಿದೆ, ಇದಕ್ಕೆಲ್ಲಾ ನನ್ನ ಬಳಿ ಸಾಕ್ಷಿ ಇದೆ ಎಂದು ಹೇಳಿದ್ದಾರೆ.