ಮೇ.27ಕ್ಕೆ ವೀಲ್‌ಚೇರ್‌ ರೋಮಿಯೋ ಬಿಡುಗಡೆ ಕಣ್ಣು ಕಾಣದ ವೇಶ್ಯೆ ಪಾತ್ರದಲ್ಲಿ ನಟಿಸುತ್ತಿರುವ ಮಯೂರಿ ನಟರಾಜ್‌ ಜಿ ನಿರ್ದೇಶನದ ವೀಲ್‌ಚೇರ್‌ ರೋಮಿಯೋ ಸಿನಿಮಾ

ಟ್ರೇಲರ್‌ನಿಂದಲೇ ಗಮನ ಸೆಳೆಯುತ್ತಿರುವ ‘ವೀಲ್‌ಚೇರ್‌ ರೋಮಿಯೋ’ ಇದೇ ಮೇ.27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ನಟರಾಜ್‌ ಜಿ (Nataraj)ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ ಚೇತನ್‌ (Ram Chetan) ಹಾಗೂ ಮಯೂರಿ ಜೋಡಿಯಾಗಿ ನಟಿಸಿದ್ದಾರೆ. ರಂಗಾಯಣ ರಘು (Rangayana Raghu), ಸುಚೇಂದ್ರ ಪ್ರಸಾದ್‌ (Suchindra Prasad), ತಬಲಾ ನಾಣಿ (Tabala Nani) ಹೀಗೆ ಹಲವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕ ವೀಲ್‌ಚೇರ್‌ನಲ್ಲೇ (wheelchair) ಕೂತಿರುತ್ತಾನೆ. ಅವರ ಪಾತ್ರ ಚಿತ್ರದ ಪೂರ್ತಿ ಹೀಗೆ ಸಾಗುತ್ತದೆ. ಈ ರೀತಿಯ ಪಾತ್ರ ಮಾಡುವುದೇ ದೊಡ್ಡ ಸವಾಲಾಗಿರುವ ಹೊತ್ತಿನಲ್ಲಿ, ಹೆಚ್ಚಾಗಿ ಸಾಫ್‌್ಟರೀತಿಯ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಮಯೂರಿ ಇಲ್ಲಿ ವೇಶ್ಯೆ (prostitute) ಪಾತ್ರ ಮಾಡಿರುವುದೇ ಒಂದು ರೋಚಕ ಎಂಬುದು ನಿರ್ದೇಶಕರ ಮಾತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಇಲ್ಲಿವರೆಗೂ ಚಿತ್ರದ ಟ್ರೇಲರ್‌ ನೋಡಿ ಎಲ್ಲರು ಕುತೂಹಲ ವ್ಯಕ್ತಪಡಿಸುತ್ತಿದ್ದರು. ಈಗ ಸಿನಿಮಾ ಬಿಡುಗಡೆಗೆ ಹತ್ತಿರ ಬಂದಿದೆ. ಕತೆ ವಿಶೇಷವಾಗಿದೆ. ನಮ್ಮ ನಡುವೆ ಇರುವ ಮತ್ತು ನಮ್ಮ ಅರಿವಿಗೆ ಬಾರದ, ಅಷ್ಟಾಗಿ ಗಮನ ಹರಿಸದ ಸೂಕ್ಷ್ಮ ಕತೆ ಇಲ್ಲಿದೆ. ಕಣ್ಣು ಕಾಣಿಸದ ವೇಶ್ಯೆ ಪಾತ್ರಕ್ಕಾಗಿ ನಾನು ಹಲವು ನಟಿಯರನ್ನು ಭೇಟಿ ಮಾಡಿದೆ. ಕತೆ ಹೇಳಿದೆ. ವೇಶ್ಯೆ ಪಾತ್ರ ಎಂದಾಕ್ಷಣ ಯಾರೂ ಒಪ್ಪುತ್ತಿರಲಿಲ್ಲ. ಈ ಹಂತದಲ್ಲಿ ನನಗೆ ಮಯೂರಿ ಅವರು ಪರಿಚಯ ಆದರು. ಕತೆ ಮತ್ತು ಅವರ ಪಾತ್ರದ ಬಗ್ಗೆ ಹೇಳಿದಾಗ ಅವರೂ ಕೂಡ ಮೊದಲಿಗೆ ಹಿಂದೇಟು ಹಾಕಿದರು.

Rangu Raate: ಜಾಮೀನು ಸಿಗದಂತೆ ಬಂಧಿಯಾದ ವೀಲ್ ಚೇರ್ ರೋಮಿಯೋ!

ಆದರೆ, ತೆರೆ ಮೇಲೆ ಅವರ ಪಾತ್ರ, ಅವರ ಡೈಲಾಗ್‌ ಡೆಲಿವರಿ ದಾಟಿ ಹೇಗಿರುತ್ತದೆ ಎಂಬುದನ್ನು ಪೂರ್ತಿ ವಿವರಿಸಿದ ಮೇಲೆ ಅವರಿಗೆ ಪಾತ್ರದ ಮಹತ್ವ ಅರ್ಥವಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಸಾಫ್ಟ್‌ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವ ಮಯೂರಿ (Mayuri) ಅವರು ವೇಶ್ಯೆ ಪಾತ್ರಕ್ಕೆ ಒಪ್ಪಿದ್ದೇ ನನ್ನ ಚಿತ್ರದ ರೋಚಕತೆ. ಈಗಾಗಲೇ ಬಿಡುಗಡೆ ಆಗಿರುವ ಹಾಡು ಮತ್ತು ಟ್ರೇಲರ್‌ನಲ್ಲಿ ಅವರ ಪಾತ್ರದ ಸುಳಿವು ಸಿಕ್ಕಿರುತ್ತದೆ. ನಾನು ಈ ರೀತಿಯ ಪಾತ್ರ ಮಾಡಿದ್ದು ನನ್ನ ಅದೃಷ್ಟಎನ್ನುವ ಮಟ್ಟಿಗೆ ಅವರು ತಮ್ಮ ಪಾತ್ರವನ್ನು ಪ್ರೀತಿಸಿ, ನಟಿಸಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ನಟರಾಜ್‌. ತಿಮ್ಮಪ್ಪ ವೆಂಕಟಚಲಯ್ಯ ನಿರ್ಮಾಣದ ಈ ಚಿತ್ರಕ್ಕೆ ಬಿ ಜೆ ಭರತ್‌ ಸಂಗೀತ ಇದೆ.

ಅಂತಿಂಥಾ ರೋಮಿಯೋ ಅಲ್ಲವೇ ಅಲ್ಲ! ವ್ಹೀಲ್ ಚೇರ್ನಲ್ಲೇ ಕೂತು ಪ್ರೀತಿಯಲ್ಲಿ ಬೀಳಿಸ್ತಾನೆ!