ಸಿದ್ಧಾರ್ಥ್ ಆನಂದ್ ಅವರ ಪಠಾಣ್ ಸಿನಿಮಾ ಸೆಟ್‌ನಲ್ಲಿ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ನಿರ್ದೇಶಕರ ಮೇಲೆಯೇ ಅಸಿಸ್ಟೆಂಟ್ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಸದ್ಯ ಎಲ್ಲರಿಗೂ ಶಾಕ್.

ನಟ ಶಾರುಖ್ ಖಾನ್‌ನ ಬಹುನಿರೀಕ್ಷಿತ ಸಿನಿಮಾ ಪಠಾನ್. ನಿರ್ದೇಶಕ ಸಿದ್ಧಾರ್ಥ್ ಕೋಪದ ಸ್ವಭಾವದ ಬಗ್ಗೆ ಅಸಿಸ್ಟೆಂಟ್‌ಗಳು ಮಾತನಾಡುತ್ತಿದ್ದರು. ಇದು ಸಿದ್ಧಾರ್ಥ್ ಕಿವಿಗೆ ಬಿದ್ದಿತ್ತು. ನಂತರದಲ್ಲಿ ಈ ವಿಚಾರವಾಗಿ ಪರಸ್ಪರ ವಾಗ್ವಾದ ನಡೆದು ಜಗಳದಲ್ಲಿ ಕೊನೆಯಾಗಿದೆ.

ದೀಪಿಕಾ ಪಡುಕೋಣೆ ಮ್ಯಾರೀಡ್‌ ಲೈಫ್‌ ಹೇಗೆ ಮ್ಯಾನೇಜ್‌ ಮಾಡ್ತಾರೆ ನೋಡಿ!

ಅಸಿಸ್ಟೆಂಟ್ ಮೇಲೆ ಸಿದ್ಧಾರ್ಥ್ ಹಲ್ಲೆ ಮಾಡಿದ್ದು, ತಿರುಗಿ ಸಿದ್ಧಾರ್ಥ್ ಮೇಲೆ ಅಸಿಸ್ಟೆಂಟ್ ಕೈ ಮಾಡಿದ್ದಾರೆ. ಜೂನಿಯರ್ ಆರ್ಟಿಸ್ಟ್ ಒಬ್ಬ ಸಿಕ್ಕಾಪಟ್ಟೆ ಗರಂ ಆಗಿದ್ದು, ನಂತರದಲ್ಲಿ ಸೆಕ್ಯುರಿಟಿಗಳು ಅತನನನ್ನು ಸೆಟ್‌ನಿಂದ ಹೊರಗೆ ಕಳುಹಿಸಿದ್ದಾರೆ.