Tejaswini Pandit: ಮನೆ ಮಾಲೀಕ ಮಂಚಕ್ಕೆ ಕರೆದ ಕರಾಳ ಅನುಭವ ಬಿಚ್ಚಿಟ್ಟ ಆದಿಪುರುಷ್ 'ಶೂರ್ಪನಖಿ'
ಆದಿಪುರುಷ್ ಚಿತ್ರದಲ್ಲಿ ಶೂರ್ಪನಖಿಯಾಗಿ ನಟಿಸಿರುವ ನಟಿ ತೇಜಸ್ವಿನಿ ಈ ಹಿಂದೆ ಮೀ ಟೂ ಕೇಸ್ ಬಗ್ಗೆ ಕರಾಳ ಅನುಭವ ಹಂಚಿಕೊಂಡಿದ್ದರು.
ಓಂ ರಾವುತ್ ನಿರ್ದೇಶನದ 'ಆದಿಪುರುಷ' ಚಿತ್ರ ಸದ್ಯ ಸುದ್ದಿಯಲ್ಲಿದೆ. ಮೊದಲಿನಿಂದಲೂ ವಿವಾದಗಗಳ ಕೇಂದ್ರಬಿಂದುವಾಗಿದ್ದ ಆದಿಪುರುಷ್ ಸಿನಿಮಾ ಕೊನೆಗೂ ಬಿಡುಗಡೆಗೊಂಡಿದೆ. ಓಂ ರಾವತ್ (Om Raut) ನಿರ್ದೇಶನದ, ರಾಮಾಯಣವನ್ನು ಆಧರಿಸಿದ ‘ಆದಿಪುರುಷ್’ ಚಿತ್ರ 3ಡಿಯಲ್ಲಿ ಮೂಡಿಬಂದಿರೋ ಚಿತ್ರದಲ್ಲಿ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ ನಾಗ್ ಮುಂತಾದ ಪ್ರಬಲ ತಾರಾಗಣವಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ. ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಸಿನಿಮಾ ಇನ್ನೂ ವಿವಾದಗಳಿಂದ ಹೊರತಾಗಲಿಲ್ಲ. ಪರ-ವಿರೋಧ ನಿಲುವು ವ್ಯಕ್ತವಾಗುತ್ತಲೇ ಇದೆ. ಚಿತ್ರದ ಹಲವು ದೃಶ್ಯಗಳಲ್ಲಿ ತಲೆಬುಡವಿಲ್ಲದ ಸಂಭಾಷಣೆಗಳಿದ್ದರೆ, ಹಲವೆಡೆ ಕಾಲ್ಪನಿಕ ದೃಶ್ಯಗಳನ್ನು ರಚಿಸಲಾಗಿದೆ ಎಂದು ಕೆಲವರು ಹೇಳಿದರೆ, ವಿಎಫ್‌ಎಕ್ಸ್ ಎಫೆಕ್ಟ್‌ಗಳು ಇಷ್ಟವಾಗುತ್ತವೆ ಎಂದಿದ್ದಾರೆ ಕೆಲವರು.
ಇದರ ಜೊತೆ ಒಂದು ಹೆಸರು ಕೇಳಿಬರುತ್ತಿದೆ. ಅದುವೇ ಶೂರ್ಪನಖಾ (Shoorpanakha) ಪಾತ್ರಧಾರಿಯದ್ದು. ಈಕೆ ಯಾರೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಸುಂದರ ನಟಿಯ ಹೆಸರು ತೇಜಸ್ವಿನಿ ಪಂಡಿತ್. ತೇಜಸ್ವಿನಿ ಪಂಡಿತ್ ಮರಾಠಿ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ತೇಜಸ್ವಿನಿ ಅವರ ಶೂರ್ಪನಖಾ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ತೇಜಸ್ವಿನಿ 2004 ರಲ್ಲಿ ಮರಾಠಿ ಶೋ 'ಕೇದಾರ್ ಶಿಂಧೆ ಕಿ ಆಗಾ ಬಾಯಿ ಅರೆಚಾ' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಅನೇಕ ಮರಾಠಿ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ (Tv Serials) ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಹಲವು ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ. 2022 ರಲ್ಲಿ, ಅವರು 'ರಾನ್ ಬಜಾರ್' ವೆಬ್ ಸರಣಿಯಲ್ಲಿ ಆಯೇಶಾ ಸಿಂಗ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ನಟಿ ತನ್ನ ಅದ್ಭುತ ನಟನೆಗಾಗಿ ಅನೇಕ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
Adipurush Review: ಸಿನಿಮಾ ನೋಡಿ ಖ್ಯಾತ ಧಾರ್ಮಿಕ ವಿದ್ವಾಂಸರು ಹೇಳಿದ್ದೇನು?
ಇತ್ತೀಚಿಗೆ ಇವರು ಬಹಳ ಸುದ್ದಿ ಮಾಡಿದ್ದು, ಮೀ ಟೂ (Me too) ಆರೋಪದಡಿ. ಮರಾಠಿ ಸಿನಿಮಾ ನಟಿ ತೇಜಸ್ವಿನಿ ಪಂಡಿತ್ (Tejaswini Pandith) 10 ವರ್ಷಗಳ ನಂತರ ಚಿತ್ರರಂಗದಲ್ಲಿ ಉಂಟಾದ ನೋವಿನ ಸಂಗತಿಯನ್ನು ಕಳೆದ ಡಿಸೆಂಬರ್ನಲ್ಲಿ ಬಿಚ್ಚಿಟ್ಟಿದ್ದರು. ಸಂದರ್ಶನವೊಂದರಲ್ಲಿ ನಟಿ ತೇಜಸ್ವಿನಿ ಪಂಡಿತ್ ಮನಬಿಚ್ಚಿ ಮಾತನಾಡಿದ್ದರು. ನಾನು ಆಗ ತಾನೆ ಸಿನಿಮಾ ರಂಗಕ್ಕೆ ಬಂದ ದಿನಗಳವು. ಹಾಗಾಗಿ ನನ್ನ ಬಳಿ ತುಂಬಾ ಹಣ ಇರಲಿಲ್ಲ. ಒಂದು ರೀತಿಯಲ್ಲಿ ಕಡಿಮೆ ಹಣದಲ್ಲೇ ನಾನು ಬದುಕು ನಡೆಸುತ್ತಿದ್ದೆ .ಪುಣೆಯ ಅಪಾರ್ಟ್ಮೆಂಟ್ ನಲ್ಲಿ ನಾನು ವಾಸವಿದ್ದೆ. ಆ ಅಪಾರ್ಟ್ಮೆಂಟ್ ಕಾರ್ಪೋರೇಟ್ ಒಬ್ಬರಿಗೆ ಸೇರಿದ್ದಾಗಿತ್ತು. ಬಾಡಿಗೆ ಪಾವತಿಸಲು ಅವರ ಬಳಿ ಹೋದಾಗ, ನೇರವಾಗಿಯೇ ಅವನು ಮಂಚಕ್ಕೆ ಕರೆದಿದ್ದ ಎಂದು ತೇಜಸ್ವಿನಿ ಹೇಳಿಕೊಂಡಿದ್ದರು. ತೇಜಸ್ವಿನಿ ಅವರನ್ನು ಆ ವ್ಯಕ್ತಿ ನೇರವಾಗಿ ಮಂಚಕ್ಕೆ ಬರುತ್ತೀಯಾ ಎಂದು ಕೇಳಿದಾಗ ನನಗೆ ಶಾಕ್ ಆಗಿತ್ತು. ನನಗೆ ಈ ರೀತಿ ಮಾಡಿದವರು ಸಿನಿಮಾ ರಂಗದವರು ಆಗದಿದ್ದರೂ ಇದು ಗಂಭೀರವಾಗಿ ತೆಗೆದುಕೊಳ್ಳುವ ವಿಚಾರವಾಗಿದೆ ಎಂದಿದ್ದರು.
Adipurush Twitter Review: ರಾಮನಾಗಿ ಪ್ರಭಾಸ್ ಇಷ್ಟವಾದ್ರ? ಫಸ್ಟ್ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಹೇಳಿದ್ದೇನು?
ಇನ್ನು, ಇವರ ಮದುವೆಯ ವಿಷಯದ ಬಗ್ಗೆ ಮಾತನಾಡುವುದಾದರೆ, ನಟಿ ತಮ್ಮ ಬಾಲ್ಯದ ಸ್ನೇಹಿತ ಭೂಷಣ್ ಬೋಪ್ಚೆ (Bhosshan Bhopche) ಅವರನ್ನು 16 ಡಿಸೆಂಬರ್ 2012 ರಂದು ವಿವಾಹವಾದರು. ಪ್ರಸಿದ್ಧ ಕೈಗಾರಿಕೋದ್ಯಮಿ ರಾಮೇಶ್ವರ್ ರೂಪಚಂದ್ ಬೋಪ್ಚೆ ಅವರ ಸೊಸೆಯಾದರು, ಆದರೆ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಯಿತು. ಪತಿಯಿಂದ ಬೇರ್ಪಟ್ಟರು. 37 ವರ್ಷ ವಯಸ್ಸಿನ ತೇಜಸ್ವಿನಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಗ್ಲಾಮರಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟಿವ್ ಆಗಿದ್ದು, ಪ್ರತಿದಿನ ತಮ್ಮ ಚಿತ್ರಗಳು ಮತ್ತು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.