Heera Mandi: ಬರೋಬ್ಬರಿ 25 ವರ್ಷದ ನಂತರ ಒಂದಾದ ಮನಿಷಾ-ಬನ್ಸಾಲಿ
- ಬರೋಬ್ಬರಿ 25 ವರ್ಷದ ನಂತರ ಒಂದಾಗುತ್ತಿದ್ದಾರೆ ಬನ್ಸಾಲಿ-ಮನಿಷಾ
- ಬಾಲಿವುಡ್‌ನಲ್ಲಿ ರೆಡಿಯಾಗ್ತಿದೆ ಮತ್ತೊಂದು ಹಿಟ್ ಸಿನಿಮಾ

ಸಂಜಯ್ ಲೀಲಾ ಬನ್ಸಾಲಿ(Sanjay Leela Bansali) ಹಾಗೂ ಮನಿಷಾ ಕೊಯಿರಾಲಾ(Manisha Koirala) ಕಾಂಬಿನೇಷನ್‌ನ ಖಾಮೋಷಿ ಸಿನಿಮಾ ಅಂದಿನ ಹಿಟ್‌ಗಳಲ್ಲಿ ಒಂದು. ಬೆಳ್ಳಿ ಪರದೆಯ ಮೇಲೆ ಜಾದೂ ಮಾಡಿದ್ದ ಅದ್ಭುತ ಸಿನಿಮಾದ ಜೋಡಿ ಬರೋಬ್ಬರಿ 25 ವರ್ಷಗಳ ನಂತರ ಮತ್ತೊಂದು ಪ್ರಾಜೆಕ್ಟ್ ಮೂಲಕ ಒಂದಾಗುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ಸಂಜಯ್ ಲೀಲಾ ಬನ್ಸಾಲಿಯವರ ಸಿನಿಮಾ ಹೀರಾಮಂಡಿಯಲ್ಲಿ ಪ್ರಮುಖ ಪಾತ್ರಕ್ಕಾಗಿ ಮನೀಶಾ ಕೊಯಿರಾಲಾ ಸಹಿ ಹಾಕಿದ್ದಾರೆ. ಅವರು ಈಗಾಗಲೇ ಹುಮಾ ಖುರೇಷಿ ಮತ್ತು ಸೋನಾಕ್ಷಿ ಸಿನ್ಹಾ ಅವರನ್ನು ಒಳಗೊಂಡಿರುವ ಪಾತ್ರವರ್ಗವನ್ನು ಸೇರಲಿದ್ದಾರೆ.
ಈಗ ಬನ್ಸಾಲಿ ಅವರು ತಮ್ಮ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅವರು ಹೀರಾಮಾಂಡಿಯ ಪ್ರಿ-ಪ್ರೊಡಕ್ಷನ್‌ನಲ್ಲಿ ಸಂಪೂರ್ಣವಾಗಿ ಹೂಡಿಕೆ ಮಾಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಸರಣಿಯ ಚಿತ್ರೀಕರಣ ಆರಂಭವಾಗಲಿದೆ. ನೆಟ್‌ಫ್ಲಿಕ್ಸ್‌ಗಾಗಿ ಪ್ರತ್ಯೇಕವಾಗಿ ನಿರ್ಮಿಸಲಾದ ಹೀರಾಮಂಡಿಯು ಬಹುಕಾಂತೀಯ ವೇಶ್ಯೆಯರ ಗ್ಯಾಲರಿಯ ಕಥೆಯಾಗಿದ್ದು, ಅವರ ಭವಿಷ್ಯವು ಹೆಣೆದುಕೊಂಡಿದೆ. ಚಿತ್ರರಂಗದ ಕೆಲವು ಟಾಪ್ ಹೀರೋಯಿನ್‌ಗಳು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಆರೋಪಿ ಜೊತೆ ರೊಮ್ಯಾನ್ಸ್, ಜಾಕಿ ಕುತ್ತಿಗೆಯಲ್ಲಿ ಲವ್ ಬೈಟ್
ಪ್ರಾಜೆಕ್ಟ್‌ಗಳಿಗೆ ಹತ್ತಿರವಿರುವ ಮೂಲವೊಂದು ನಿರ್ಮಾಣದ ವಿವರಗಳನ್ನು ಬಹಿರಂಗಪಡಿಸಿವೆ. ಹೀರಾ ಮಂಡಿ ಮೊದಲ ಸೀಸನ್‌ನಲ್ಲಿ ತಲಾ ಒಂದು ಗಂಟೆಯ 7 ಸಂಚಿಕೆಗಳನ್ನು ಹೊಂದಿರುತ್ತದೆ. ನಂತರ 2022 ರಲ್ಲಿ ಎರಡನೇ ಸೀಸನ್ ನಡೆಯಲಿದೆ. ಮೊದಲ ಸಂಚಿಕೆಯನ್ನು ಸ್ವತಃ ಸಂಜಯ್ ಬನ್ಸಾಲಿ ನಿರ್ದೇಶಿಸುತ್ತಿದ್ದಾರೆ. ಅವರು ಎರಡನೇ ಸಂಚಿಕೆಯನ್ನು ಸಹ ನಿರ್ದೇಶಿಸಬಹುದು ಎನ್ನಲಾಗಿದೆ. ಮುಕ್ತಾಯದ ಸಂಚಿಕೆಯನ್ನು ಸಹ ಬನ್ಸಾಲಿ ನಿರ್ದೇಶಿಸುತ್ತಾರೆ. ಉಳಿದ ಸಂಚಿಕೆಗಳನ್ನು ಬನ್ಸಾಲಿಗೆ ಸಹಾಯಕರಾಗಿದ್ದ ವಿಭು ಪುರಿ ನಿರ್ದೇಶಿಸಲಿದ್ದಾರೆ.
ಸೌದಾಗರ್, ದಿಲ್ ಸೆ, 1942 ಎ ಲವ್ ಸ್ಟೋರಿ, ಬಾಂಬೆ, ಖಮೋಶಿ, ಮನ್ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ನಟಿ ಮನೀಷಾ ಕೊಯಿರಾಲಾ. ತಮ್ಮ ವೃತ್ತಿ ಜೀವನದಲ್ಲಿ 29 ವರ್ಷಗಳ ಅವಧಿಯಲ್ಲಿ ಅನೇಕ ಬ್ಲಾಕ್‌ಬಸ್ಟರ್ ಫಿಲ್ಮ್‌ಗಳನ್ನು ನೀಡಿದ್ದಾರೆ ಈ ನೇಪಾಳಿ ಚೆಲುವೆ. ತಮ್ಮ ಚೊಚ್ಚಲ ಚಿತ್ರ ಸೌದಾಗರ್‌ನಲ್ಲಿ ದಿಲೀಪ್ ಕುಮಾರ್ ಮತ್ತು ರಾಜ್ ಕುಮಾರ್ ಅವರಂತಹ ಪ್ರಮುಖ ನಟರ ಜೊತೆ ಕೆಲಸ ಮಾಡಿದ್ದಾರೆ.
ತನ್ನ ಮೊದಲ ಚಿತ್ರ ಸೌದಾಗರ್ ಮೂಲಕ ಫೇಮಸ್ ಆದ ಮನೀಷಾ ಕೊಯಿರಾಲಾ 'ಇಲು ಇಲು ಗರ್ಲ್' ಎಂದು ಫೇಮಸ್ ಆದರು. ಮನಿಷಾಗೆ ತನ್ನ ವೃತ್ತಿ ಜೀವನದ ಆರಂಭದಲ್ಲಿ ದೊರೆತ ಸ್ಟಾರ್ಡಮ್ ಅನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಕೆಲವು ಫ್ಲಾಪ್ ಚಿತ್ರಗಳ ನಂತರ ಒತ್ತಡದಿಂದಾಗಿ, ಮನೀಷಾ ಡ್ರಗ್ಸ್ ಹಾಗೂ ಡ್ರಿಂಕ್ಸ್ ಚಟಕ್ಕೆ ಸಿಲುಕಿದರು. ಇದರಿಂದಾಗಿ ಚಲನಚಿತ್ರಗಳಲ್ಲಿ ನಟಿಸುವ ಅವಕಾಶವೂ ಕ್ರಮೇಣ ಕಡಿಮೆಯಾಯಿತು. ಆರೋಗ್ಯವೂ ಹದಗೆಟ್ಟಿತ್ತು.
ಇದರ ಮಧ್ಯೆ, ಅವರು ನೇಪಾಳದ ಉದ್ಯಮಿ ಸಾಮ್ರಾತ್ ದಹಲ್ ಅವರನ್ನು ಪ್ರೀತಿಸಿ 2010ರಲ್ಲಿ ವಿವಾಹವಾದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. 2 ವರ್ಷಗಳ ನಂತರ, 2012 ರಲ್ಲಿ, ಅವರ ಸಂಬಂಧ ಮುರಿದುಹೋಯಿತು ಮತ್ತು ಮನೀಷಾ ವಿಚ್ಛೇದನ ಪಡೆದರು. ವೃತ್ತಿ ಮತ್ತು ಜೀವನದ ಕಹಿ ಘಟನೆಗಳ ಕಾರಣದಿಂದ ಮನೀಷಾ ಕುಸಿಯಲು ಪ್ರಾರಂಭಿಸಿದರು. ದುಃಖವನ್ನು ಮರೆಯಲು, ಮತ್ತೊಮ್ಮೆ ಆಲ್ಕೊಹಾಲ್ ಮತ್ತು ಮಾದಕ ವಸ್ತುಗಳನ್ನು ಆಶ್ರಯಿಸಲು ಪ್ರಾರಂಭಿಸಿದರು.
2003ರವರೆಗೆ, ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದ ಮನೀಷಾರ ಕೆರಿಯರ್ ಗ್ರಾಫ್ ನಂತರ ಇಳಿಯಿತು. 2012 ರಲ್ಲಿ ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕ್ಯಾನ್ಸರ್ ವಿರುದ್ಧದ ಯುದ್ಧವನ್ನು ಗೆದ್ದ ನಂತರ, ಮತ್ತೆ ಲೈಫ್ ಟ್ರ್ಯಾಕ್‌ಗೆ ತರಲು ಅವರಿಗೆ ಬಹಳ ಸಮಯ ಹಿಡಿಯಿತು. 2018 ರಲ್ಲಿ ಮನೀಷಾ ಸಂಜು ಚಿತ್ರದಲ್ಲಿ ಕಾಣಿಸಿಕೊಂಡರು.