ಬಾಲಿವುಡ್ ನಟಿ ಮಂದಿರ ಬೇಡಿ ಹೆಣ್ಣು ಮಗುವನ್ನು ದತ್ತು ಸ್ವೀಕರಿಸಿದ್ದಾರೆ. ಪರ್ಫೆಕ್ಟ್ ಫ್ಯಾಮಿಲಿ ಫೊಟೋ ಶೇರ್ ಮಾಡಿದ ನಟಿ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.

ನಟಿ ಹಾಗೂ ಆಕೆಯ ಪತಿ ರಾಜ್ ಕೌಶಲ್ 4 ವರ್ಷದ ಹೆಣ್ಣು ಮಗುವನ್ನು ದತ್ತು ಸ್ವೀಕರಿಸಿದ್ದು, ತಾರಾ ಬೇಡಿ ಕೌಶಲ್ ಎಂದು ಹೆಸರಿಟ್ಟಿದ್ದಾರೆ. ಮಂದಿರ ಈ ವಿಚಾರವನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

KGF2ನಲ್ಲಿ ಬಾಲಿವುಡ್ ನಟಿ: ರಮಿಕಾ ಕ್ಯಾರೆಕ್ಟರ್ ಫಸ್ಟ್ ಲುಕ್ ರಿವೀಲ್

ತಾರಾ ಮಂದಿರ ಮತ್ತು ರಾಜ್ ಮಧ್ಯೆ ಕುಳಿತಿದ್ದರೆ, ವೀರ್ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾನೆ. ದಂಪತಿ ಜುಲೈ 28ರಂದು ಮಗುವನ್ನು ದತ್ತು ಸ್ವೀಕರಿಸಿದ್ದಾರೆ. ತಮ್ಮ ಮಗನಿಗೆ ತಂಗಿಯನ್ನು ನೀಡಲು ಮತ್ತು ದಂಪತಿಯೂ 4 ವರ್ಷದೊಳಗಿನ ಹೆಣ್ಣು ಮಗುವನ್ನು ದತ್ತು ಪಡೆಯಲು ಮೊದಲೇ ನಿರ್ಧರಿಸಿದ್ದರು ಎನ್ನಲಾಗಿದೆ.