Mammootty Tested Positive: ಮೆಗಾಸ್ಟಾರ್ ಮಮ್ಮುಟ್ಟಿಗೆ ಕೊರೋನಾ ಪಾಸಿಟಿವ್
- Mammootty Tested Positive: ಮಾಲಿವುಡ್ ಸ್ಟಾರ್ ನಟನಿಗೆ ಕೊರೋನಾ ಪಾಸಿಟಿವ್
- ದುಲ್ಖರ್ ಸಲ್ಮಾನ್ ತಂದೆ, ನಟ ಮಮ್ಮುಟ್ಟಿಗೆ ಕೊರೋನಾ ದೃಢ
ಇತ್ತೀಚಿನ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿಯ ಬಹಳಷ್ಟು ಸೆಲೆಬ್ರಿಟಿಗಳ ಕೊರೋನಾ ಪರೀಕ್ಷೆ ಪಾಸಿಟಿವ್ ಬಂದಿದ್ದು ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಬಾಲಿವುಡ್‌ನಲ್ಲಿಯೂ ಬಹಳಷ್ಟು ಮಂದಿ ಕೊರೋನಾಗೆ ತುತ್ತಾಗಿದ್ದು, ಇದೀಗ ಸ್ಟಾರ್‌ಗಳಲ್ಲಿಯೋ ವೈರಸ್ ಭೀತಿ ಕಾಣಿಸಿಕೊಂಡಿದೆ. ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ(Mammootty) ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಮಾಮಾಂಗಮ್ ನಟ ಟ್ವಿಟರ್(Twitter) ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟ, ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ನನಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಮಮ್ಮುಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಅವರ ಆರೋಗ್ಯ ಉತ್ತಮವಾಗಿದೆ. ಸ್ವಲ್ಪ ಜ್ವರವನ್ನು(Fever) ಹೊರತುಪಡಿಸಿ ಏನೂ ತೊಂದರೆ ಇಲ್ಲ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಸಣ್ಣ ಜ್ವರದ ಹೊರತಾಗಿ ನಾನು ಚೆನ್ನಾಗಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ದೇಶನದಂತೆ ನಾನು ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ. ನೀವೆಲ್ಲರೂ ಸುರಕ್ಷಿತವಾಗಿರಲು ನಾನು ಬಯಸುತ್ತೇನೆ. ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿ, ಕಾಳಜಿ ವಹಿಸಿ ಎಂದು ಸೂಪರ್‌ಸ್ಟಾರ್ ಮಮ್ಮುಟ್ಟಿ ಟ್ವೀಟ್ ಮಾಡಿದ್ದಾರೆ.
ICUನಲ್ಲಿದ್ದಾರೆ ಖ್ಯಾತ ಗಾಯಕಿ, ಪ್ರಾರ್ಥಿಸಿ ಎಂದ ವೈದ್ಯರು
ಮಹೇಶ್ ಬಾಬು, ತ್ರಿಶಾ, ಅರುಣ್ ವಿಜಯ್ ಮುಂತಾದ ಅನೇಕ ಸೆಲೆಬ್ರಿಟಿಗಳಿಗೆ ಇತ್ತೀಚೆಗೆ COVID-19 ಪಾಸಿಟಿವ್ ಬಂದಿತ್ತು. ಮಮ್ಮುಟ್ಟಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪ್ರಸ್ತುತ ಕೊಚ್ಚಿಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈ ಮಧ್ಯೆ, ಕೆ. ಮಧು ನಿರ್ದೇಶನದ ಅವರ ಮುಂಬರುವ ಚಿತ್ರ ಸಿಬಿಐ 5 ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.
ಸಿಬಿಐ ಹಿಟ್ ಫ್ರಾಂಚೈಸಿಯಲ್ಲಿ ಐದನೇ ಕಂತು ಬಹುನಿರೀಕ್ಷಿತ ಸೀಕ್ವೆಲ್‌ನಲ್ಲಿ ಮಮ್ಮುಟ್ಟಿ ಅವರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನಲ್ಲಿ ಅಧಿಕಾರಿಯಾಗಿರುವ ಸೇತುರಾಮ ಅಯ್ಯರ್ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
ಲತಾ ಮಂಗೇಶ್ಕರ್: 92 ವರ್ಷದ ಗಾಯಕಿ ರೋಗಲಕ್ಷಣಗಳೊಂದಿಗೆ ಕೊರೊನಾವೈರಸ್‌ಗೆ ಪಾಸಿಟಿವ್ ಬಂದಿದೆ. ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು ಎಂದು ಅವರ ಸೋದರ ಸೊಸೆ ರಚನಾ ಶಾ ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ. ಭಾನುವಾರ ಮುಂಜಾನೆ ಲತಾ ಮಂಗೇಶ್ಕರ್ ಅವರನ್ನು ದಾಖಲಿಸಲಾಯಿತು. ಅವರು ಕೋವಿಡ್ -19 ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಐಸಿಯುನಲ್ಲಿದ್ದಾರೆ. ಅವರು ಪ್ರತಿಕ್ರಿಯಿಸುತ್ತಿದ್ದಾರೆ, ಆದರೆ ನಾವು ಚಿಕಿತ್ಸೆ ಮುಂದುವರಿಸಬೇಕಾಗಿದೆ. ಸುಮಾರು 7-10 ದಿನಗಳ ಕಾಲ ಆಕೆಯನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.
ಸುಸೇನ್ ಖಾನ್: ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಅವರು ಕೊರೊನಾವೈರಸ್‌ನ ಓಮಿಕ್ರಾನ್ ರೂಪಾಂತರಕ್ಕೆ ತುತ್ತಾಗಿದ್ದಾರೆ ಎಂದು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡ ಅವರು, ಎರಡು ವರ್ಷಗಳ ಕಾಲ ಕೋವಿಡ್ -19 ಅನ್ನು ಎದುರಿಸಿದ ನಂತರವೂ 2022 ರ ಮೂರನೇ ವರ್ಷದಲ್ಲಿ ಓಮಿಕ್ರಾನ್ ರೂಪಾಂತರವು ನನ್ನ ಇಮ್ಯುನಿಟಿಯನ್ನು ದಾಟಿ ನನಗೆ ಸೋಂಕಿದೆ. ನನಗೆ ಕೊರೋನಾ ಪಾಸಿಟಿವ್. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಕಾಳಜಿ ವಹಿಸಿ ಎಂದು ಬರೆದಿದ್ದಾರೆ.
ಕೀರ್ತಿ ಸುರೇಶ್: ಎಲ್ಲರಿಗೂ ನಮಸ್ಕಾರ, ನನಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದೇನೆ. ದಯವಿಟ್ಟು ಎಲ್ಲಾ ಕೋವಿಡ್ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ. ನಾನು ಪ್ರಸ್ತುತ ಪ್ರತ್ಯೇಕವಾಗಿರುತ್ತೇನೆ. ಸುರಕ್ಷಿತ ಆರೈಕೆಯಲ್ಲಿದ್ದೇನೆ. ನನ್ನ ಜೊತೆ ಸಂಪರ್ಕದಲ್ಲಿದ್ದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದಿದ್ದಾರೆ.