Asianet Suvarna News Asianet Suvarna News

ಲೈಂಗಿಕ ಗುಲಾಮಳಂತೆ ಸತತವಾಗಿ ಬಳಸಿಕೊಂಡ, ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ಸೌಮ್ಯ!

ನನಗೆ 18 ತುಂಬಿದ ಬೆನ್ನಲ್ಲೇ ನಿರ್ದೇಶಕ ನನಗೆ ಅವಕಾಶ ನೀಡಲು ಮುಂದಾಗಿದ್ದ. ಆದರೆ ತಂದೆಯಂತೆ ಎಂದು ಹೇಳಿಕೊಂಡ ಲೈಂಗಿಕ ಗುಲಾಮರಾಗಿ ಬೆಳೆಸಿದ್ದ. ಬೇಕಾದಂತೆ ಬಳಸಿಕೊಂಡಿದ್ದಾನೆ ಎಂದು ಮಲೆಯಾಳಂ ಖ್ಯಾತ ನಟಿ ಸೌಮ್ಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

Malayalam actress Sowmya shocking allegation against Tamil director on sexual harassment ckm
Author
First Published Sep 5, 2024, 8:21 PM IST | Last Updated Sep 5, 2024, 8:21 PM IST

ತಿರುವಂತಪುರಂ(ಸೆ.05) ಮಲೆಯಾಳಂ ಸಿನಿಮಾದ ನಟಿಯರು, ಮಹಿಳಾ ಕಲಾವಿಧರ ಮೇಲಿನ ಲೈಂಗಿಕ ಕುರುಕುಳ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದೆ. ಹಲವರು ಪ್ರಮುಖರ ಕರಾಳ ಮುಖಗಳು ಕಳಚಿ ಬಿದ್ದಿದೆ. ನಟ, ನಿರ್ದೇಶಕರ ಲೈಂಗಿಕ ದೌರ್ಜನ್ಯಗಳ ವಿರುದ್ದ ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿದೆ. ಇದರ ನಡುವೆ ಮಲೆಯಾಳಂ ನಟಿ ಸೌಮ್ಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ತಂದೆ ಸ್ಥಾನದಲ್ಲಿ ನಿಂತು ಬೆಳೆಸುತ್ತೇನೆ ಎಂದ ನಿರ್ದೇಶಕ, ನನ್ನನ್ನು ಲೈಂಗಿಕ ಗುಲಾಮಳಂತೆ ಬೆಳೆಸಿದ. ತಂದೆ ಹೆಸರಿನಲ್ಲಿ ಮಾಡಬಾರದ್ದೆಲ್ಲಾ ಮಾಡಿದ್ದಾನೆ ಎಂದು ಖ್ಯಾತ ನಿರ್ದೇಶಕನ ಕರಾಳ ಮುಖವನ್ನು ನಟಿ ಬಿಚ್ಚಿಟ್ಟಿದ್ದಾರೆ. 

ಎನ್‌ಡಿಟಿವಿಗ ನೀಡಿದ ಸಂದರ್ಶನದಲ್ಲಿ ನಟಿ ಸೌಮ್ಯ ತನಗೆ ಸಿನಿಮಾ ಕ್ಷೇತ್ರದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಭಾವುಕರಾಗಿದ್ದಾರೆ. ನಿರ್ದೇಶಕನ ಹೆಸರನ್ನು ತನಿಖಾ ಸಮಿತಿ ಮುಂದೆ ಬಹಿರಂಗಪಡಿಸುವುದಾಗಿ ನಟಿ ಸೌಮ್ಯ ಹೇಳಿದ್ದಾರೆ. ನನಗೆ 18 ವರ್ಷ ತುಂಬಿತ್ತು. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಿರಲಿಲ್ಲ. ಇದೇ ವೇಳೆ ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಮನೆಗೆ ಆಗಮಿಸಿದ್ದರು. ನಿರ್ದೇಶಕ ಹಾಗೂ ಆತನ ಪತ್ನಿ ಜೊತೆಯಾಗಿ ಬಂದು ಬಣ್ಣದ ಆಸೆ ತೋರಿಸಿದ್ದರು ಎಂದು ನಟಿ ಹೇಳಿದ್ದಾರೆ. 

ಪ್ರೇಮಂ ಖ್ಯಾತಿಯ ನಿವಿನ್ ಪೌಲಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲು, ತಕ್ಷಣ ಪ್ರತಿಕ್ರಿಯಿಸಿದ ನಟ!

ಮೊದಲೇ ಆರ್ಥಿಕವಾಗಿ ಸಶಕ್ತರಾಗಬೇಕಾದ ಅನಿವಾರ್ಯ ಇದ್ದ ಕಾರಣ ನಿರ್ದೇಶಕರ ಮಾತಿಗೆ ಹೆಚ್ಚು ಯೋಚನೆ ಮಾಡದೇ ತಲೆದೂಗಿದ್ದೆ. ಇದೇ ವೇಳೆ ತಂದೆಯ ಸ್ಥಾನದಲ್ಲಿ ನಿಂತು ನಿನ್ನನ್ನು ಚಿತ್ರರಂಗದಲ್ಲಿ ಬೆಳೆಸುವುದಾಗಿ ನಿರ್ದೇಶಕರು ಹೇಳಿದ್ದರು. ನಿನ್ನನ್ನು ಮಗಳಾಗಿ ನೋಡುತ್ತಿದ್ದೇನೆ ಎಂದು ಹಲವು ಬಾರಿ ಹೇಳಿದ್ದರು. ಇದೇ ನಿರ್ದೇಶಕನ ಪುತ್ರಿ ಪೋಷಕರಿಂದ ದೂರವಾಗಿದ್ದಳು. ನಿರ್ದೇಶಕನ ವಿರುದ್ದ ಅತ್ಯಾಚಾರ ಆರೋಪ ಮಾಡಿ ದೂರವಾಗಿದ್ದಳು ಎಂದು ನಟಿ ಸೌಮ್ಯ ಹೇಳಿದ್ದಾರೆ.

ನಿರ್ದೇಶಕನ ಪತ್ನ ಮನೆಯಲ್ಲಿ ಇಲ್ಲ ದಿನ, ನನ್ನನ್ನು ರಿಹರ್ಸಲ್ ಎಂದು ಮನೆಗೆ ಕರೆಸಿಕೊಂಡಿದ್ದರು. ಮನಗೆ ತೆರಳಿದ ನನಗೆ ಆಘಾತವಾಗಿತ್ತು. ಮಗಳೆ ಎಂದು ಹೇಳುತ್ತಲೇ ನನಗೆ ಮುತ್ತಿಕ್ಕಿದ್ದರು. ತಬ್ಬಿಕೊಂಡು ಮುದ್ದಾಡಿದ್ದರು. ಈ ಘಟನೆ ಆಘಾತ ತಂದಿತ್ತು. ವಿರೋಧಿಸಲು ಸಾಧ್ಯವಾಗದೆ, ಸಹಕರಿಸಲು ಸಾಧ್ಯವಾಗದೆ ಮಾನಸಿಕವಾಗಿ ಕುಗ್ಗಿ ಹೋದೆ. ಆದರೆ ರಿಹರ್ಸ್ ಬಳಿಕ ಮನೆಗೆ ತೆರಳಲು ರೆಡಿಯಾದ ನನ್ನನ್ನು ಕೋಣೆಯಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದರು. 

ಇದು ಮುಂದುವರಿಯುತ್ತಲೇ ಹೋಯಿತು. ನಿರ್ದೇಶಕ ಸತತವಾಗಿ ಬಳಸಿಕೊಂಡ. ಲೈಂಗಿಕ ದೌರ್ಜನ್ಯದಲ್ಲಿ ಆ ನಿರ್ದೇಶಕ ಆನಂದ ಕಾಣುತ್ತಿದ್ದ. ರಾಡ್ ತುರುಕಿ ಆನಂದ ನೋಡುತ್ತಿದ್ದ. ಈ ಘಟನೆಗಳನ್ನು ದೈಹಿಕವಾಗಿ, ಮಾನಸಿಕವಾಗಿ ಆಘಾತಗೊಳಿಸಿತು. 90ರ ದಶಕದಲ್ಲಿ ಸಹ ನಟ ಕೂಡ ಲೈಂಗಿಕವಾಗಿ ಬಳಸಿಕೊಂಡ. ಇದೀಗ ಈ ನಟನ ಹೆಸರನ್ನು ಹೇಮಾ ಸಮಿತಿ ಉಲ್ಲೇಖಿಸಿದೆ ಎಂದು ನಟಿ ಸೌಮ್ಯ ಹೇಳಿದ್ದಾರೆ.

ಈ ಘಟನೆಯಿಂದ ಹೊರಬರಲು 30 ವರ್ಷ ತೆಗೆದುಕೊಂಡಿದ್ದೇನೆ. ಈಗಲೂ ಈ ಘಟನೆಗಳು ನನ್ನನ್ನು ಕಾಡುತ್ತವೆ. ಬಲಿಪಶುವಾಗಿದ್ದೇನೆ. ಆದರೆ ಈಗ ನಟಿಯರು ತಕ್ಷಣವೇ ದೂರು ನೀಡುವ ಧೈರ್ಯ ತೋರಬೇಕು ಎಂದು ಸೌಮ್ಯ ಹೇಳಿದ್ದಾರೆ. 90ರ ದಶಕದಲ್ಲಿ ಸೌಮ್ಯ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ಆದರೆ ಅಷ್ಟೇ ಕೆಚ್ಟದಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು ಎಂದು ಖುದ್ದು ಸೌಮ್ಯ ಬಹಿರಂಗಪಡಿಸಿದ್ದಾರೆ. ನಟಿ ಸೌಮ್ಯ ನೀಡಿದ ಹೇಳಿಕೆಯಿಂದ ಕೇರಳ ಮತ್ತೆ ಬೆಚ್ಚಿ ಬಿದ್ದಿದೆ. ಪ್ರತಿ ದಿನ ಒಂದೊಂದೆ ಕರಾಳ ಘಟನೆಗಳು ಬಯಲಾಗುತ್ತಿದೆ. 

ಹೇಮಾ ರಿಪೋರ್ಟ್‌ ಬಿರುಗಾಳಿಗೆ ತತ್ತರಿಸಿದ ಮಲಯಾಳಂ ಸಿನಿರಂಗ; ಕತ್ತಲ ಜಗತ್ತು ಬೆತ್ತಲಾಯ್ತಾ?

Latest Videos
Follow Us:
Download App:
  • android
  • ios