ಮಲೆಯಾಳಂ ನಟ ನಿವಿನ್ ಪೌಲಿ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಮಹಿಳೆ, ಅಂದು ದುಬೈನಲ್ಲಿ ಏನೇನಾಯ್ತು ಎಂಬ ಘಟನೆಗಳನ್ನು ದೂರಿನಲ್ಲಿ ಬಿಚ್ಚಿಟ್ಟಿದ್ದು ಅದರ ಡಿಟೇಲ್ ಇಲ್ಲಿದೆ.

ಮಲೆಯಾಳಂ ನಟ ನಿವಿನ್ ಪೌಲಿ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಮಹಿಳೆ, ಅಂದು ದುಬೈನಲ್ಲಿ ಏನೇನಾಯ್ತು ಎಂಬ ಘಟನೆಗಳನ್ನು ದೂರಿನಲ್ಲಿ ಬಿಚ್ಚಿಟ್ಟಿದ್ದು ಅದರ ಡಿಟೇಲ್ ಇಲ್ಲಿದೆ. 

ನಿವಿನ್ ಪೌಲಿ ಹಾಗೂ ಇತರ ಐವರು ಯುರೋಪ್‌ನಲ್ಲಿ ಕೆಲಸ ಕೊಡುವುದಾಗಿ ತನ್ನಿಂದ ಹಣ ಪಡೆದಿದ್ದಾರೆ. ಬಳಿಕ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಮೊದಲಿಗೆ ಮಹಿಳೆ ನಟ ನಿವಿನ್ ಪೌಲಿ ಹಾಗೂ ಇತರ ಐವರನ್ನು ದುಬೈನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಆಕೆಯನ್ನು ಯುರೋಪ್‌ಗೆ ಕರೆದೊಯ್ಯುವುದಾಗಿ ಹೇಳಿದ ಈ ಐವರು ಆಕೆಯಿಂದ ಮೂರು ಲಕ್ಷ ಪೀಕಿಸಿದ್ದಾರೆ. ಈ ಹಣವನ್ನು ಆಕೆ ವಾಪಸ್ ಕೇಳಿದಾಗ ಅವಳನ್ನು ತಡೆದ ಅವರು ಆಕೆಯನ್ನು ಮತ್ತೊಬ್ಬ ಆರೋಪಿಯಾದ ನಿರ್ಮಾಪಕ ಎಕೆ ಸುನೀಲ್‌ಗೆ ಪರಿಚಯಿಸಿದ್ದಾರೆ. ಆತ ಈಕೆಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾನೆ. 

ಪ್ರೇಮಂ ಖ್ಯಾತಿಯ ನಿವಿನ್ ಪೌಲಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲು, ತಕ್ಷಣ ಪ್ರತಿಕ್ರಿಯಿಸಿದ ನಟ!

ಇದಾದ ನಂತರ ಸಂದರ್ಶನಕ್ಕಾಗಿ ಹೊಟೇಲ್‌ ರೂಮ್‌ಗೆ ಹೋದಾಗ ಅಲ್ಲಿ ನನಗೆ ದೈಹಿಕವಾಗಿ ಹಲ್ಲೆ ಮಾಡಿದರು. ನನ್ನನ್ನು ಅವರಿದ್ದ ರೂಮ್‌ನ ಪಕ್ಕದಲ್ಲೇ ರೂಮೊಂದರಲ್ಲಿ ಆಹಾರ ನೀರು ಕೊಡದೇ ಮೂರು ದಿನ ಕೂಡಿ ಹಾಕಿದರು. ಅವರು ಬರೀ ಡ್ರಗ್ ಮಿಶ್ರಿತ ನೀರನ್ನು ಮಾತ್ರ ನನಗೆ ನೀಡುತ್ತಿದ್ದರು. ಇದಾದ ನಂತರ ನನ್ನ ಮಗ ಹಾಗೂ ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದರು. ಅಲ್ಲದೇ ನಿವಿನ್ ಪೌಲಿ ಹಾಗೂ ಆತನ ತಂಡ ನನ್ನ ಕೈನಿಂದ ಒತ್ತಾಯಪೂರ್ವಕವಾಗಿ ನನ್ನ ಫೋನ್ ಅನ್ನು ಕಿತ್ತುಕೊಂಡರು. ಇದೇ ಕಾರಣಕ್ಕೆ ಅವರು ಈಗ ಸಾಕ್ಷ್ಯ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಮಹಿಳೆ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಈ ಘಟನೆ ನಡೆದ ನಂತರ ಮೊದಲ ಬಾರಿ ಪೊಲೀಸರನ್ನು ಭೇಟಿಯಾದಾಗ ನಿಮಗೆ ನಿಮ್ಮ ಆರೋಪದ ಬಗ್ಗೆ ಸಾಬೀತುಪಡಿಸಲು ನಿಮ್ಮ ಬಳಿ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿದರು. ಹಲವು ಬೆದರಿಕೆ ದಾಳಿ ಮಾಡುವ ಬೆದರಿಕೆಗಳ ನಂತರವೂ ನಾನು ದೂರು ನೀಡುವುದನ್ನು ಮುಂದುವರಿಸುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.

ಬೆಂಗ್ಳೂರು ಡೇಸ್‌ನ ಕ್ಲೈಮ್ಯಾಕ್ಸ್‌ನ ರಿಯಲ್‌ ಸ್ಟಂಟ್ ಮಾಡಿದ್ದು ಓರ್ವ ಕನ್ನಡಿಗ: ಈಗ ಸಿನಿಮಾ ಹೀರೋ