ಮಹಿಳೆಯ ಶೇಪ್ ಇರೋ ಟ್ರೋಫಿ ನೋಡಿದ್ರೆ ಟೆಂಪ್ಟ್ ಆಗತ್ತೆ ಎಂದ ನಟನ ಮನವಿ ಹೀಗಿದೆ ನೋಡಿ!
ಪ್ರಶಸ್ತಿ ಸಂದರ್ಭದಲ್ಲಿ ನೀಡುವ ಮಹಿಳೆಯ ಶೇಪ್ ಇರೋ ಟ್ರೋಫಿ ನೋಡಿದ್ರೂ ಟೆಂಪ್ಟ್ ಆಗತ್ತೆ, ಪುರುಷ ಟ್ರೋಫಿ ನೀಡಿ ಎಂದಿರೋ ಮಲಯಾಳಂ ನಟ ಹೇಳಿದ್ದೇನು?

ಹೆಚ್ಚಿನ ಪ್ರಶಸ್ತಿ ಸಮಾರಂಭಗಳಲ್ಲಿ ಅದರಲ್ಲಿಯೂ ಸಿನಿಮಾ ರಂಗದ ಪ್ರಶಸ್ತಿಗಳನ್ನು (award) ನೀಡುವಾಗ ಪ್ರಶಸ್ತಿ ಪತ್ರ, ಫಲಕದ ಜೊತೆ ಒಂದು ಟ್ರೋಫಿ (ಶಿಲ್ಪ) ನೀಡಲಾಗುತ್ತದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು ನೃತ್ಯ ಮಾಡುವ ಮಹಿಳೆಯ ಆಕಾರದ ಶಿಲ್ಪಗಳನ್ನು ಸ್ವೀಕರಿಸುತ್ತಾರೆ. ಎಲ್ಲಾ ಶಿಲ್ಪಗಳೂ ಹೆಚ್ಚಾಗಿ ಮಹಿಳಾ ಶಿಲ್ಪವೇ ಆಗಿರುತ್ತದೆ. ಇದೀಗ ಈ ಮಹಿಳಾ ಶಿಲ್ಪದ ಬಗ್ಗೆ ಸೆಕ್ಸಿಯಸ್ಟ್ ಕಮೆಂಟ್ ಮಾಡುವ ಮೂಲಕ ನಟನೊಬ್ಬ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು. ಹೀಗೆ ಕಮೆಂಟ್ ಮಾಡುವ ಮೂಲ ಸಕತ್ ಟ್ರೋಲ್ಗೆ ಒಳಗಾಗಿರುವ ನಟನೆಂದರೆ, ಮಲಯಾಳಂ ಚಲನಚಿತ್ರ ನಟ ಅಲೆನ್ಸಿಯರ್ ಲೇ ಲೋಪೆಜ್.
ಇವರಿಗೆ 'ಅಪ್ಪನ್' (Appan) ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದೆ. ಇದರ ಪ್ರಶಸ್ತಿ ಪ್ರದಾನದ ಸಮಾರಂಭದಲ್ಲಿ 25 ಸಾವಿರ ರೂಪಾಯಿಗಳ ನಗದಿನ ಜೊತೆಗೆ ಪ್ರಶಸ್ತಿ ಪತ್ರ ಹಾಗೂ ಶಿಲ್ಪವನ್ನು ನೀಡಲಾಗಿದೆ. ಈ ಶಿಲ್ಪವು ಮಹಿಳೆಯದ್ದಾಗಿದ್ದರಿಂದ ಅದನ್ನು ನೋಡಿದ ನಟ ಅಲೆನ್ಸಿಯರ್ (Alencier), 'ಈ ರೀತಿಯ ಸ್ತ್ರೀ ಶಿಲ್ಪದೊಂದಿಗೆ ನಮ್ಮನ್ನು ಪ್ರಚೋದಿಸಬೇಡಿ. ಪುರುಷ ಶಕ್ತಿಯನ್ನೂ ಪ್ರದರ್ಶಿಸಿ, ಕೇವಲ ಸ್ತ್ರೀಯ ಶಿಲ್ಪ ನೀಡುವುದು ಏಕೆ, ಹೀಗೆ ಮಾಡಿ ಟೆಂಪ್ಟ್ ಮಾಡಬೇಡಿ ಎಂದಿದ್ದಾರೆ. ಮಾತ್ರವಲ್ಲದೇ, ತಾವು ಪುರುಷ ಶಿಲ್ಪವನ್ನು ಸ್ವೀಕರಿಸಿದ ದಿನ ಅವರು ತಮ್ಮ ನಟನೆಯನ್ನು ನಿಲ್ಲಿಸುವುದಾಗಿಯೂ ಹೇಳಿದ್ದಾರೆ.
ಹಾಟ್ ಬ್ಯೂಟಿ ತ್ರಿಶಾ ಓಕೆ ಅಂದ್ರೂ ಲಿಪ್ಲಾಕ್ಗೆ ನಿರಾಕರಿಸಿದ ವಿಜಯ ಸೇತುಪತಿ: ಆಗಿದ್ದೇನು?
‘ಪುರುಷ ಶಕ್ತಿ’ಯನ್ನು ಪ್ರತಿನಿಧಿಸುವ ಶಿಲ್ಪವನ್ನು ನೀಡಿ. ಕೇರಳದಲ್ಲಿ ಬಲಿಷ್ಠ ಪುರುಷ ಮುಖ್ಯಮಂತ್ರಿ ಇದ್ದು, ಸ್ತ್ರೀ ಶಿಲ್ಪ ಏಕೆ, ಪುರುಷ ಶಿಲ್ಪ ಮಾತ್ರ ಸೂಕ್ತವಾಗಿದೆ ಎಂದಿರುವ ನಟ, 'ಪ್ರಶಸ್ತಿಯು ಹೆಚ್ಚಿನ ತೂಕವನ್ನು ಹೊಂದಿತ್ತು. ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಸ್ವೀಕರಿಸಲಾಗಿದೆ. ರೂ 25 ಸಾವಿರ ನೀಡಿ ನನ್ನನ್ನು ಮತ್ತು ಕುಂಚಾಕೊ ಬೋಬನ್ ಅವರನ್ನು ಅವಮಾನಿಸಬೇಡಿ. ದಯವಿಟ್ಟು ಮೊತ್ತವನ್ನು ಹೆಚ್ಚಿಸಿ' ಎಂದೂ ಅಲೆನ್ಸಿಯರ್ ಹೇಳಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಮ್ಮುಖದಲ್ಲಿ ಚಲನಚಿತ್ರ ಅಕಾಡೆಮಿಯು ಕೇರಳದ ನಿಶಾಗಂಧಿ ಆಡಿಟೋರಿಯಂನಲ್ಲಿ ನಿನ್ನೆ 53 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ 2022 ಪ್ರದಾನ ಮಾಡಿತ್ತು. ಅದರಲ್ಲಿ ಮಲಯಾಳಂ ಚಲನಚಿತ್ರ ನಟ ಅಲೆನ್ಸಿಯರ್ ಲೇ ಲೋಪೆಜ್ ಅವರಿಗೆ ಪ್ರಶಸ್ತಿ ಸಿಕ್ಕಿದೆ.
ಇವರ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ತಮ್ಮ ಮಾತನ್ನು ಸಮರ್ಥಿಸಿಕೊಂಡಿರುವ ನಟ, 'ನಾನು ಹೇಳಿದ್ದರಲ್ಲಿ ಆಕ್ಷೇಪಾರ್ಹ ಏನೂ ಇಲ್ಲ, ಅದು ಲೈಂಗಿಕತೆ ಅಲ್ಲ. ನಾನು ಒಬ್ಬ ಪುರುಷ ಎಂದು ಹೆಮ್ಮೆಪಡುತ್ತೇನೆ. ಮಹಿಳಾ ಒಕ್ಕೂಟವು ನನ್ನ ಉದ್ದೇಶವನ್ನು ಗ್ರಹಿಸುವಷ್ಟು ಬುದ್ಧಿವಂತರಾಗಿರಬೇಕು. ನಾನು ಪುರುಷನ ಪುರುಷತ್ವವನ್ನು ಚಿತ್ರಿಸುವ ಬಹುಮಾನವನ್ನು ಕೇಳಿದೆ. ಪ್ರತಿ ವರ್ಷ ಮಹಿಳಾ ಶಿಲ್ಪವನ್ನು ಏಕೆ ಪ್ರಸ್ತುತಪಡಿಸಲಾಗುತ್ತದೆ ಎಂದಿದ್ದಾರೆ ನಟ.
ವಿಲನ್ ಜೊತೆ ರೇಪ್ ಸೀನ್ ಮಾಡ್ವಾಗ ನಡೆದದ್ದೇ ಭಯಾನಕ: ಆ ದಿನ ನೆನೆದು ಹೆದರಿದ ಮಾಧುರಿ!