Asianet Suvarna News Asianet Suvarna News

ನಾನು ನಿನ್ನ ಇಟ್ಕೋತೀನಿ: ನಟಿ ಮಾಳವಿಕಾ ಮತ್ತು ನಿರ್ದೇಶಕರ ನಡುವಿನ ಮಾತುಕತೆ ವೈರಲ್

ನಾನು ನಿನ್ನ ಇಟ್ಕೋತೀನಿ ಎಂದು ನಟಿ ಮಾಳವಿಕಾ ಯುವ ನಿರ್ದೇಶಕರಿಗೆ ಹೇಳಿದ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. 

malavika nair says innu Unchukunta Abbayi to Director Anudeep sgk
Author
First Published May 6, 2023, 11:20 AM IST | Last Updated May 6, 2023, 11:20 AM IST

ನಟಿ ಮಾಳವಿಕಾ ನಾಯರ್ ಮತ್ತು ಯುವ ನಿರ್ದೇಶಕ ಅನುದೀಪ್ ಇಬ್ಬರ ಮಾತುಕತೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರೂ ಮಾತನಾಡುತ್ತಿರುವಾಗ ನಿರ್ದೇಶಕ ಅನುದೀಪ್ ನಾಯಕಿ ಮಾಳವಿಕಾಗೆ ನಾನು ನಿನ್ನನ್ನು ಇಟ್ಕೋತೀನಿ ಎಂದು ಹೇಳಿದ್ದಾರೆ. ನಿರ್ದೇಶಕರ ಮಾತು ನಟಿಗೆ ಶಾಕ್ ನೀಡಿದೆ. ಅಂದಹಾಗೆ ಇದು ರಿಯಲ್ ಮಾತುಕತೆ ಅಂತ ಅಂದ್ಕೋಬೇಡಿ. ಇದು ಸಿನಿಮಾದ ಪ್ರಮೋಷನ್. ಹೌದು ಹೀಗೂ ಪ್ರಮೋಷನ್ ಮಾಡಬಹುದಾ ಅಂತ ಅಚ್ಚರಿ ಆಗುತ್ತಿದಿಯಾ. ಚಿತ್ರರಂಗದಲ್ಲಿ ನಡೆಯುವ ಕಹಿ ಘಟನೆಯನ್ನು ಇಟ್ಟುಕೊಂಡೇ ಪ್ರಮೋಷನ್ ಮಾಡುತ್ತಿದೆ ‘ಅನ್ನಿ ಮಂಚಿ ಶಕುನಮುಲೆ’ ಸಿನಿಮಾತಂಡ. 

ಸಿನಿಮಾ ಪ್ರಮೋಷನ್​ಗೆ ಚಿತ್ರತಂಡದ ಸಾಕಷ್ಟು ತಂತ್ರಗಳನ್ನು ಉಪಯೋಗಿಸುತ್ತಾರೆ. ವಿವಿಧ ರೀತಿಯ ಪ್ರಮೋಷನಲ್ ವಿಡಿಯೋ ಮಾಡಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.  ‘ಅನ್ನಿ ಮಂಚಿ ಶಕುನಮುಲೆ’ ಸಿನಿಮಾತಂಡ  ವಿಭಿನ್ನವಾದ ರೀತಿಯಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ. ನಿರ್ದೇಶಕ ಅನುದೀಪ್ ಮತ್ತು ನಾಯಕಿ ಮಾಳವಿಕಾ ಇಬ್ಬರ ವಿಡಿಯೋ ವೈರಲ್ ಆಗಿದೆ.  ಹೀರೋಯಿನ್ ಮಾಳವಿಕಾ ನಿರ್ದೇಶಕನಿಗೆ ‘ನಾನು ನಿನ್ನನ್ನು ಇಟ್ಕೋತೀನಿ’ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ  ಹರಿದಾಡುತ್ತಿದ್ದು ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

'ಅನ್ನಿ ಮಂಚಿ ಶಕುನಮುಲೆ' ಸಿನಿಮಾದಲ್ಲಿ ಸಂತೋಷ್ ಶೋಭನ್, ಮಾಳವಿಕಾ ನಾಯರ್, ರಾಜೇಂದ್ರ ಪ್ರಸಾದ್ ಮೊದಲಾದವರು ನಟಿಸಿದ್ದಾರೆ. ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಸಿನಿಮಾ ಮೇ 18ಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಮೋಷನ್ ಕಾರ್ಯ ಗಮನ ಸೆಳೆಯುತ್ತಿದೆ. ‘ಜಾತಿರತ್ನಾಲು’ ಸಿನಿಮಾ ಖ್ಯಾತಿಯ ನಿರ್ದೇಶಕ ಅನುದೀಪ್ ಕೆ.ವಿ. ಜೊತೆ ನಟಿ ಮಾಳವಿಕಾ ಮೆಟ್ಟಿಲುಗಳಿಂದ ನಡೆದುಕೊಂಡು ಬರುತ್ತಿರುತ್ತಾರೆ. ಈ ವೇಳೆ, ‘ನಾನು ಒಂದು ವಿಷಯ ಹೇಳಬೇಕು ಎಂದುಕೊಂಡಿದ್ದೀನಿ. ಏನು ಅಂದುಕೊಳ್ಳಬಾರದು’ ಎಂದು ಮಾಳವಿಕಾ ನಾಯರ್ ಹೇಳುತ್ತಾರೆ. ಇದಕ್ಕೆ ಅನುದೀಪ್ ಅವರು, ‘ತೊಂದರೆ ಇಲ್ಲ, ಏನು ಅಂದುಕೊಳ್ಳುವುದಿಲ್ಲ ಹೇಳು’ ಎನ್ನುತ್ತಾರೆ. ‘ನಾನು ನಿನ್ನ ಇಟ್ಕೋತಿನಿ' ಎನ್ನುತ್ತಾರೆ ಮಾಳವಿಕಾ. ನಟಿಯ ಮಾತಿಗೆ ನಿರ್ದೇಶಕ ಅನುದೀಪ್ ಶಾಕ್ ಆಗುತ್ತಾರೆ. 

Bhumika Chawla: ಕಿಡ್ಸ್​ ಜೊತೆ ರೊಮ್ಯಾನ್ಸ್​ ಮಾಡಿದ್ರೆ ತಪ್ಪಾ ಎಂದು ನಟಿ ಕೇಳಿದ್ದೇಕೆ?

ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ರೆ ಇನ್ನು ಕೆಲವರು ನೆಗೆಟಿವ್ ಆಗಿ ಹೇಳುತ್ತಿದ್ದಾರೆ. ಇನ್ನು ಕೆಲವರು ಹೊಸ ಸಿನಿಮಾದ ಬಗ್ಗೆ ಪೋಸ್ಟ್ ಮಾಡಿ ಎಂದು ಹೇಳುತ್ತಿದ್ದಾರೆ. 2022ರಲ್ಲಿ ರಿಲೀಸ್ ಆದ ‘ಪ್ರಿನ್ಸ್’ ಚಿತ್ರದ ಬಳಿಕ ಅನುದೀಪ್ ಮತ್ತೆ ಸಿನಿಮಾ ಮಾಡಿಲ್ಲ. ಹಾಗಾಗಿ ಮುಂದಿನ ಸಿನಿಮಾ ಯಾವುದು ಹೇಳಿ ಎಂದು ಹೇಳುದ್ದಾರೆ. ಇದಾದ ಬಳಿಕ ಅನುದೀಪ್ ಅವರು ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಹಾಗಾಗಿ ಮುಂದಿನ ಸಿನಿಮಾದ ಬಗ್ಗೆ ಕೇಳುತ್ತಿದ್ದಾರೆ.

'ಬಾಹುಬಲಿ'ಯ ದೊಡ್ಡ ಸಕ್ಸಸ್ ಯಾರು ನಿರೀಕ್ಷಿಸಿರಲಿಲ್ಲ; ಸಮಂತಾ 'ಶಾಕುಂತಲಂ' ಸೋಲಿಗೆ ನಟಿ ಮಧೂ ರಿಯಾಕ್ಷನ್

ನಟಿ ಮಾಳವಿಕಾ ನಾಯರ್ ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಉಸ್ತಾದ್ ಹೋಟೆಲ್ ಸಿನಿಮಾ ಮೂಲಕ ಮೊದಲ ಬಾರಿಗೆ ಮಿಂಚಿದರು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ತಮಿಳು ಮತ್ತು ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸದ್ಯ 3 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

Latest Videos
Follow Us:
Download App:
  • android
  • ios