ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲೆ ಟ್ರೋಲ್​ಗೆ ಒಳಗಾಗುತ್ತಿರುವ ನಟಿಯರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿದ್ದ ಇವರು ಟ್ರೋಲ್​ಗೆ ಒಳಗಾಗಿದ್ದಾರೆ. ಏನೀ ವಿಷಯ? 

ಮುಂಬೈ: ಬಾಲಿವುಡ್‌ನ ಫಿಟ್‌ನೆಸ್ ಕ್ವೀನ್ ಮಲೈಕಾ ಅರೋರಾ ಒಂದಲ್ಲ ಒಂದು ಕಾರಣಕ್ಕಾಗಿ ಜನಮನದಲ್ಲಿ ಉಳಿದಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಇವರು ಟ್ರೋಲ್​ ಆಗುತ್ತಿರುವುದೇ ಹೆಚ್ಚು. ಇತ್ತೀಚೆಗೆ ಅವರು ತಮ್ಮ ಮಾಜಿ ಪತಿಯನ್ನು ತಬ್ಬಿಕೊಂಡು ಸುದ್ದಿಯಾಗಿದ್ದರು. ಮಲೈಕಾ ಅರೋರಾ (Malaika Arora) ಮತ್ತು ಅವರ ಮಾಜಿ ಪತಿ ಅರ್ಬಾಜ್ ಖಾನ್ (Arbaz Khan) ತಮ್ಮ ಮಗ ಅರ್ಹಾನ್‌ಗಾಗಿ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಇಬ್ಬರೂ ಆಗಾಗ್ಗೆ ತಮ್ಮ ಮಗನನ್ನು ವಿಮಾನ ನಿಲ್ದಾಣದಲ್ಲಿ ಬಿಡಲು ಬರುತ್ತಾರೆ. ಇತ್ತೀಚೆಗೆ ಮಗನನ್ನು ಬಿಡಲು ಬಂದಾಗ ಅರ್ಹಾನ್ (Ahran) ಜೊತೆ ಮಲೈಕಾ ಮತ್ತು ಅರ್ಬಾಜ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದರು. ಇದರ ವಿಡಿಯೋ ವೈರಲ್​ (vedio viral) ಆಗುತ್ತಿದ್ದಂತೆಯೇ ಭಾರಿ ಟ್ರೋಲ್​ಗೆ ಒಳಗಾಗಿದ್ದರು.

ಸದ್ಯ ಮಲೈಕಾ ಅರ್ಬಾಜ್ ಖಾನ್‌ನಿಂದ ವಿಚ್ಛೇದನ (Divorce) ಪಡೆದ ನಂತರ ನಟ ಅರ್ಜುನ್ ಕಪೂರ್ (Arjun Kapoor) ಅವರ ಕೈ ಹಿಡಿದಿದ್ದಾರೆ. ಇಬ್ಬರ ನಡುವೆ ಬಹಳ ವಯಸ್ಸಿನ ಅಂತರವಿದೆ. ಈ ಕಾರಣಕ್ಕಾಗಿ, ಇಬ್ಬರೂ ಅನೇಕ ಬಾರಿ ಟ್ರೋಲಿಂಗ್ ಎದುರಿಸಬೇಕಾಗಿದೆ. ಅದೇ ರೀತಿ ವಯಸ್ಸು 49 ಆದರೂ ಗ್ಲಾಮರಸ್​ ಆಗಿ ಕಾಣಿಸಿಕೊಳ್ತಿರೋ ಮಲೈಕಾ ಸಾಧ್ಯವಾದಷ್ಟು ತುಂಡುಡುಗೆಯಲ್ಲಿ ಕಾಣಿಸಿಕೊಳ್ಳೋದೇ ಹೆಚ್ಚು. ಇತ್ತೀಚೆಗೆ ಫುಲ್​ ಡ್ರೆಸ್​ ಧರಿಸಿ ರಸ್ತೆಯಲ್ಲಿ ಕಾಣಿಸಿಕೊಂಡಾಗಲೂ ಟ್ರೋಲ್​ ಆಗಿದ್ದರು. ಒಟ್ಟಿನಲ್ಲಿ ನಟಿ ಎಲ್ಲಿಗೆ ಹೋದರೂ ಅವರನ್ನು ಕ್ಯಾಮೆರಾ ಕಣ್ಣು ಹಿಂಬಾಲಿಸುತ್ತಲೇ ಇರುತ್ತದೆ. 

ಕರೀನಾ ಕೆಲಸಕ್ಕೆ ಹೋಗಲಿ ಎಂದ ಸೈಫ್​ ಅಲಿ- ಅಮ್ಮ ಶರ್ಮಿಳಾ ಟ್ಯಾಗೋರ್​ ಹೇಳಿದ್ದೇನು?

ಇದೀಗ ಅವರು ತಮ್ಮ ಬ್ಯಾಗ್​ (Bag) ಅನ್ನು ಬಾಡಿಗಾರ್ಡ್​ ಕೈಗೆ ಕೊಟ್ಟು ಟ್ರೋಲ್​ ಆಗಿದ್ದಾರೆ. ಅಸಲಿಗೆ ಬಾಡಿಗಾರ್ಡ್​ ಇರುವುದು ಅಂಗರಕ್ಷಣೆ ಮಾಡುವುದಕ್ಕಾಗಿ. ನಟ ನಟಿಯರ ವಿಷಯಕ್ಕೆ ಬಂದರೆ ಅಭಿಮಾನಿಗಳು ಮುತ್ತಿಗೆ ಹಾಕುವ ಸಮಯದಲ್ಲಿ ಅವರನ್ನು ಸಮಾಧಾನ ಮಾಡುವುದು ಈ ಅಂಗರಕ್ಷಕರ ಕೆಲಸ. ಇನ್ನು ನಟ ನಟಿಯರ ಚಿಕ್ಕಪುಟ್ಟ ಕೆಲಸಗಳಾದ ಬ್ಯಾಗ್​ ಹಿಡಿದುಕೊಳ್ಳುವುದು, ಕೆಲವೊಮ್ಮೆ ನಟಿಯರು ಧರಿಸುವ ಭಾರಿ ತೂಕದ ಡ್ರೆಸ್​ ಹಿಡಿದುಕೊಳ್ಳುವಂಥ ಕೆಲಸ ಮಾಡುವುದು ಅವರ ಪರ್ಸನಲ್​ ಅಸಿಸ್ಟೆಂಟ್​ಗಳು. ಆದರೆ ಅದನ್ನು ಬಿಟ್ಟು ಮಲೈಕಾ ಅರೋರಾ ಬಾಡಿಗಾರ್ಡ್​ ಕೈಯಲ್ಲಿ ಬ್ಯಾಗ್​ ಹಿಡಿಸಿದ್ದು, ಇದರ ವಿಡಿಯೋ ವೈರಲ್​ ಆಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ (Airport) ನಟಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ಅವರು ಕೆಂಪು ಬಟ್ಟೆಯನ್ನು ಧರಿಸಿದ್ದರು, ಅದರಲ್ಲಿ ಅವರು ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ಈ ವೇಳೆ ವಿಡಿಯೋ ಇದೀಗ ಮುನ್ನೆಲೆಗೆ ಬಂದಿದೆ. ಈ ವಿಡಿಯೋ ನೋಡಿದವರು ನಟಿಯ ಸ್ಟೈಲ್​ ನೋಡಿ ಖುಷಿಪಡುತ್ತಿದ್ದರೆ, ಹಲವರು ಮಾತ್ರ ಬ್ಯಾಗ್​ಗಾಗಿ ಟ್ರೋಲ್​ ಮಾಡುತ್ತಿದ್ದಾರೆ. ಅಂಗರಕ್ಷಕನ ಕೈಯಲ್ಲಿ ಬ್ಯಾಗ್ ಇರುವುದನ್ನು ನೀವು ನೋಡಬಹುದು. ಅಂಗರಕ್ಷಕನು ಕಾರಿನಿಂದ ಸಾಮಾನುಗಳನ್ನು ತೆಗೆದುಹಾಕುತ್ತಿರುವಾಗ ಅವರ ಕೈಗೆ ಬ್ಯಾಗ್​ ನೀಡಿ ಖಾಲಿ ಕೈಯಲ್ಲಿ ನಡೆದಿರುವುದನ್ನು ನೋಡಬಹುದಾಗಿದೆ. 

ಈ ಬಾಲಿವುಡ್‌ ನಟಿಯರ ಬೋಲ್ಡ್‌ ದೃಶ್ಯ ನೋಡಲಾಗದೇ ಕಣ್ಮುಚ್ಚಿಕೊಂಡ ನೆಟ್ಟಿಗರು!

ಮಲೈಕಾ ಅರೋರಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಟಿ ಆಗಾಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇದೇ ವೇಳೆ ಅರ್ಜುನ್ ಕಪೂರ್ ಪತ್ನಿ ಜೊತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ, ಇದರಲ್ಲಿ ಇಬ್ಬರೂ ತುಂಬಾ ರೋಮ್ಯಾಂಟಿಕ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಮಲೈಕಾ ಪ್ರೇಮಿಗಳ ದಿನದಂದು ಇನ್​ಸ್ಟಾಗ್ರಾಮ್​ನಲ್ಲಿ(Instagram) ಅರ್ಜುನ್ ಕಪೂರ್​ಗಾಗಿ ಪೋಸ್ಟ್ ಶೇರ್​ ಮಾಡಿದ್ದರು. 

View post on Instagram