Asianet Suvarna News Asianet Suvarna News

ಮಲೈಕಾ ಆರೋರಾಗೆ ಸಿಕ್ಕಿದ್ರು ಹೊಸ ಯೋಗ ಫ್ರೆಂಡ್..!

  • ಬಾಲಿವುಡ್‌ನ ಫಿಟ್ನೆಸ್ ಫ್ರೀಕ್‌ಗೆ ಸಿಕ್ಕಿದ್ರು ಹೊಸ ಫ್ರೆಂಡ್
  • ಮಲೈಕಾಗೆ ಜೋಡಿಯಾದ ಸೌತ್ ಸ್ಟಾರ್ ನಟನ ಪತ್ನಿ
Malaika Arora Finds A New Yoga Partner In Aishwaryaa Dhanush dpl
Author
Bangalore, First Published Sep 19, 2021, 10:13 AM IST
  • Facebook
  • Twitter
  • Whatsapp

ಮಲೈಕಾ ವೀಕೆಂಡ್‌ ಬಗ್ಗೆ ವೀಶೇಷ ಮಾತು ಬೇಕಾ ? ಅದು ಸಿಕ್ಕಾಪಟ್ಟೆ ಸ್ಪೆಷಲ್. ಬಾಯ್‌ಫ್ರೆಂಡ್ ಅರ್ಜುನ್ ಜೊತೆ ಡೇಟಿಂಗ್, ವೀಕೆಂಡ್ ಯೋಗ, ಕುಕ್ಕಿಂಗ್ ಎಂದು ನಟಿ ವೀಕೆಂಡ್ ಯಾವಾಗಲೂ ವಿಶೇಷವಾಗಿ ಕಳೆಯುತ್ತಾರೆ.

ಮಲೈಕಾ ಅಭಿಮಾನಿಗಳಿಗೆ ವೀಕೆಂಡ್ ಪ್ರೇರಣೆಯೊಂದು ಸಿಕ್ಕಿದೆ. ಇದು ಆರೋಗ್ಯಕರವಾದ ಫಿಟ್ನೆಸ್ ಮೋಟಿವೇಷನ್. ನಟಿ ಮಲೈಕಾ ಅರೋರಾ ಮತ್ತು ನಿರ್ದೇಶಕಿ ಐಶ್ವರ್ಯ ಧನುಷ್ ಜೋಡಿಯಾಗಿದ್ದಾರೆ. ಐಶ್ವರ್ಯಾ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಕೂಡ ಹೌದು. ಇಬ್ಬರು ಮಹಿಳೆಯರು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ಯೋಗದ ಕುರಿತು ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

47ರಲ್ಲೂ ಮಲೈಕಾ ಇಷ್ಟೊಂದು ಹಾಟ್ ಯಾಕೆ ? ಬ್ಯೂಟಿ ಸೀಕ್ರೆಟ್ ಹೇಳಿದ ನಟಿ

ಈ ಸಮಯದಲ್ಲಿ ಯೋಗಕ್ಕಾಗಿ ಉತ್ಸಾಹವನ್ನು ಒಟ್ಟುಗೂಡಿಸಿದೆ. ಇನ್‌ಸ್ಟಾಗ್ರಾಮ್ ಫೋಟೋವೊಂದರಲ್ಲಿ ಮಲೈಕಾ ಮತ್ತು ಐಶ್ವರ್ಯ ಧನುಷ್ ಅವರು ಯೋಗ ಉಡುಪು ಧರಿಸಿರುವುದನ್ನು ಕಾಣುತ್ತದೆ. ಇಬ್ಬರೂ ಯೋಗ ಮಾಡೋದನ್ನು ಕಾಣಬಹುದು.

ಮಲೈಕಾ ಅರೋರಾ ಫಿಟ್ನೆಸ್ ಫ್ರೀಕ್ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಟಿ ತನ್ನ ಯೋಗಾಭ್ಯಾಸಗಳಿಗೆ ಮೋಜನ್ನು ಸೇರಿಸಲು ಇಷ್ಟಪಡುತ್ತಾರೆ. ನಟಿ ತನ್ನ ವ್ಯಾಯಾಮದ ದಿನಚರಿಯನ್ನು ಸಾಕಷ್ಟು ಧನಾತ್ಮಕ ವೈಬ್‌ಗಳೊಂದಿಗೆ ಮುಂದುವರಿಸುತ್ತಾರೆ. 

Follow Us:
Download App:
  • android
  • ios