Asianet Suvarna News Asianet Suvarna News

ಗೋವಾದಲ್ಲಿ ಬಾಯ್‌ಫ್ರೆಂಡ್‌ಗಾಗಿ ಅಡುಗೆ ಮಾಡಿದ್ರು ಮಲೈಕಾ

ಗೋವಾದಲ್ಲಿ ವೆಕೇಷನ್ ಎಂಜಾಯ್ ಮಾಡ್ತಿರೋ ಬಾಲಿವುಡ್ ನಟಿ ಮಲೈಕಾ ಅರೋರಾ ಬಾಯ್‌ಫ್ರೆಂಡ್‌ಗೆ ಅಡುಗೆ ಮಾಡಿದ್ದಾರೆ. ಇದಕ್ಕೆ ಅರ್ಜುನ್ ರಿಯಾಕ್ಷನ್ ಹೇಗಿತ್ತು ನೋಡಿ

Malaika Arora Cooks For Boyfriend Arjun Kapoor dpl
Author
Bangalore, First Published Jan 4, 2021, 3:51 PM IST

ಗೋವಾದಲ್ಲಿ ಹೊಸ ವರ್ಷದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾನುವಾರ ಮಲೈಕಾ ಗೆಳೆಯ ಅರ್ಜುನ್ ಕಪೂರ್ ಅವರಿಗೆ ರುಚಿಕರವಾದ ಅಡುಗೆ ಮಾಡಿ ಬಡಿಸಿದ್ದಾರೆ.

ನಟನ ತನ್ನ ಖುಷಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅರ್ಜುನ್ ತನ್ನ ಗೆಳತಿ ತಯಾರಿಸಿದ ಯಮ್ಮೀ ಫುಡ್ ಒಳಗೊಂಡ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಅವಳು ಭಾನುವಾರ ನಿಮಗಾಗಿ ಅಡುಗೆ ಮಾಡುವಾಗ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

47 ಅಂದ್ರೆ ನಂಬಲ್ಲ: ಮಲೈಕಾ ಹಾಟ್ ವಾಟರ್ ಬೇಬಿ ಲುಕ್

Malaika Arora Cooks For Boyfriend Arjun Kapoor dpl

ಮಲೈಕಾ ಅರೋರಾ ತನ್ನ ಸೋಶಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ನಟನ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಡೇಟ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಈ ಬಾಲಿವುಡ್ ಸ್ಟಾರ್ ಕಪಲ್ ಸದ್ಯ ಗೋವಾದಲ್ಲಿದ್ದಾರೆ.

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಇಬ್ಬರೂ ತಮ್ಮ ಗೋವಾ ವೆಕೇಷನ್ ಫೋಟೋಸ್ ಶೇರ್ ಮಾಡುತ್ತಲೇ ಇದ್ದಾರೆ. ಭಾನುವಾರ, ಮಲೈಕಾ ಅರೋರಾ ಅವರು ತಮ್ಮ ಸ್ವಿಮ್ಮಿಂಗ್ ಪೂಲ್ ಫೋಟೋ ಶೇರ್ ಮಾಡಿದ್ದಾರೆ.

Follow Us:
Download App:
  • android
  • ios