ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಮಲೈಕಾ ಬೇರೆ ಬೇರೆ ವಿಚಾರಗಳ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಮಲೈಕಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಅರ್ಜುನ್ ಕಪೂರ್ ಜೊತೆಗಿನ ಪ್ರೀತಿ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಹಾಟ್ ಉಡುಗೆಗಳ ಮೂಲಕವೇ ಹೆಚ್ಚು ಗಮನ ಸೆಳೆಯುವ ಮಲೈಕಾ ಮದುವೆ ವಿಚಾರ ವೈರಲ್ ಆಗಿದೆ.

ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ(Malaika Arora) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಮಲೈಕಾ ಬೇರೆ ಬೇರೆ ವಿಚಾರಗಳ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಮಲೈಕಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಅರ್ಜುನ್ ಕಪೂರ್(Arjun Kapoor) ಜೊತೆಗಿನ ಪ್ರೀತಿ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಹಾಟ್ ಉಡುಗೆಗಳ ಮೂಲಕವೇ ಹೆಚ್ಚು ಗಮನ ಸೆಳೆಯುವ ಮಲೈಕಾ ಮದುವೆ ವಿಚಾರ ವೈರಲ್ ಆಗಿದೆ. ಹೌದು, ಮಲೈಕಾ ಎರಡನೇ ಮದುವೆಗೆ ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಮಲೈಕಾ ತನ್ನ ಪ್ರಿಯತಮ ಅರ್ಜುನ್ ಕಪೂರ್ ಜೊತೆ ಈ ವರ್ಷವೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಅಂದಹಾಗೆ ಇಬ್ಬರ ಮದುವೆ ವಿಚಾರ ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಅನೇಕ ಬಾರಿ ಮಲೈಕಾ, ಅರ್ಜುನ್ ಮದುವೆಯಾಗಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಬಾರಿ ಇಬ್ಬರು ಹಸೆಮಣೆ ಏರುವುದು ಪಕ್ಕಾ ಎನ್ನಲಾಗುತ್ತಿದೆ. ಬಾಲಿವುಡ್ ಲೈಫ್ ವರದಿ ಮಾಡಿರುವ ಪ್ರಕಾರ ಮಲೈಕಾ ಮತ್ತು ಅರ್ಜುನ್ ಕಪೂರ್ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಅರ್ಜುನ್ ಮತ್ತು ಮಲೈಕಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರ ಪ್ರೀತಿ ವಿಚಾರ ಏನು ಗುಟ್ಟಾಗಿ ಉಳಿದಿಲ್ಲ. ಸದ್ಯ ಮದುವೆಯಾಗುವ ಮೂಲಕ ತಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.

ಆಕ್ಸಿಡೆಂಟ್ ನಂತರ ಹಾಟ್ ಆಗಿ ಟ್ರಾನ್ಸಪರೆಂಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಮಲೈಕಾ ಅರೋರಾ!

ಈ ವರ್ಷದ ಚಳಿಗಾಲದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಮದುವೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಇಬ್ಬರ ಮದುವೆಗೆ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಹತ್ತಿರದ ಮೂಲವೊಂದು ಹೇಳಿದ ಪ್ರಕಾರ ಅವರು ಸರಳವಾಗಿ ಮದುವೆಯಾಗಲಿದ್ದಾರೆ. ಇಬ್ಬರು ಸರಳ ಮದುವೆ ಇಷ್ಟಪಡುತ್ತಾರೆ. ಮದುವೆ ಬಳಿಕ ಚಿತ್ರರಂಗದವರಿಗೆ ಅದ್ದೂರಿ ಪಾರ್ಟಿ ಆಯೋಜನೆ ಮಾಡಲು ಪ್ಲಾನ್ ಮಾಡಿದ್ದಾರೆ ಎನ್ನುವ ಮಾಹಿತಿ ರಿವೀಲ್ ಮಾಡಿದ್ದಾರೆ. ಮದುವೆಯಲ್ಲಿ ಕುಟುಂಬದವರು ಮಾತ್ರ ಇರಲಿದ್ದಾರೆ.

12 ವರ್ಷ ಕಿರಿಯ Arjun Kapoor ಜೊತೆ ಡೇಟಿಂಗ್ ಬಗ್ಗೆ ಏನು ಹೇಳಿದ್ದಾರೆ ನೋಡಿ Malaika Arora

ಅಂದಹಾಗೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವಿನ ವಯಸ್ಸಿನ ಅಂತರ ಸಿಕ್ಕಾಪಟ್ಟೆ ಸ್ದದು ಮಾಡಿತ್ತು. ಮಲೈಕಾಗಿಂತ ಅರ್ಜುನ್ 12 ವರ್ಷಗಳ ಕಾಲ ಚಿಕ್ಕವರು. ಅರ್ಜುನ್ ಕಪೂರ್ ಅವರಿಗೆ 36 ವರ್ಷವಾದರೇ ಮಲೈಕಾ ಅರೋರಾ ಅವರಿಗೆ 48 ವರ್ಷ ವಯಸ್ಸಾಗಿದೆ. ಈ ಬಗ್ಗೆ ಮಲೈಕಾ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದರು. ಆದರೂ ಯಾವುದಕ್ಕೂ ತಲೆಕೆಡಿಕೊಳ್ಳಲದ ಮಲೈಕಾಅರ್ಜುನ್ ಜೊತೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಮಲೈಕಾ ಅರೋರಾ, ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಅರ್ಹಾನ್ ಎನ್ನುವ ಮಗ ಕೂಡ ಇದ್ದಾನೆ. ಅರ್ಹಾನ್ ಸದ್ಯ ವಿದೇಶದಲ್ಲಿ ಓದುತ್ತಿದ್ದಾರೆ. ಅಂದಹಾಗೆ ಮಲೈಕಾ ಈ ವರ್ಷವಾದರೂ ಮದುವೆಯಾಗುತ್ತಾರಾ ಎಂದು ಕಾದುನೋಡಬೇಡು.