Asianet Suvarna News Asianet Suvarna News

ನನ್ನ ಜೊತೆ ಸಿನಿಮಾ ಮಾಡಿ; ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ಬಾಲಿವುಡ್ ನಟ ಅನಿಲ್ ಕಪೂರ್ ವಿಶೇಷ ಬೇಡಿಕೆ

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ಬಾಲಿವುಡ್ ಸ್ಟಾರ್ ಅನಿಲ್ ಕಪೂರ್ ಬೇಡಿಕೆ ಇಟ್ಟಿದ್ದಾರೆ. ಮುಂದಿನ ಸಿನಿಮಾ ನನ್ನ ಜೊತೆ ಮಾಡಿ ಎಂದು ಕೇಳಿಕೊಂಡಿದ್ದಾರೆ. 

Make your next film with me Anil Kapoor Demand for Kantara Star Rishab Shetty sgk
Author
First Published Dec 20, 2022, 12:40 PM IST

ಕಾಂತಾರ ಸಿನಿಮಾ ಬಳಿಕ ಕನ್ನಡ ಸ್ಟಾರ್ ರಿಷಬ್ ಶೆಟ್ಟ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ರಿಷಬ್‌ಗೆ ಬೇಡಿಕೆ ಹೆಚ್ಚಾಗಿದೆ. ರಿಷಬ್ ಜೊತೆ ನಟಿಸಲು ಅನೇಕ ಕಲಾವಿದರು ಕಾಯುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಕೂಡ ರಿಷಬ್ ಸಿನಿಮಾದಲ್ಲಿ ನಟಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಕೂಡ ಕನ್ನಡದ ಸ್ಟಾರ್ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ಅಷ್ಟೆಯಲ್ಲದೇ ಮುಂದಿನ ಸಿನಿಮಾ ನನ್ನ ಜೊತೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಇದೀಗ ಬಾಲಿವುಡ್‌ ಗಮನ ಸೆಳೆದಿದ್ದಾರೆ. 

ಬಾಲಿವುಡ್‌ನ ಅನೇಕ ಮಂದಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಹೃತಿಕ್ ರೋಷನ್, ಕಾರ್ತಿಕ್ ಆರ್ಯನ್, ಜಾನ್ವಿ ಕಪೂರ್, ಕಂಗನಾ ರಣಾವತ್, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ ಸೇರಿದಂತೆ ಅನೇಕರು ರಿಷಬ್ ಶೆಟ್ಟಿ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಅನಿಲ್ ಕಪೂರ್ ಕಾಂತಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುವ ಆಸೆ ಹೊರಹಾಕಿದ್ದಾರೆ. 

ಪಿಂಕ್‌ವಿಲ್ಲಾದ ರೌಂಡ್ ಟೇಬಲ್ ಸಂವಾದದಲ್ಲಿ ಮಾತನಾಡಿದ ಅನಿಲ್ ಕಪೂರ್, ರಿಷಬ್ ಶೆಟ್ಟಿಯನ್ನು ಹಾಡಿ ಹೊಗಳಿದರು. ರಿಷಬ್ ಶೆಟ್ಟಿ ಕೆಲಸವನ್ನು ಶ್ಲಾಘಿಸಿದ ಅನಿಲ್ ಕಪೂರ್, ಮುಂದಿನ ಸಿನಿಮಾವನ್ನು ನನ್ನೊಂದಿಗೆ ಮಾಡಿ' ಎಂದು ಕೇಳಿಕೊಂಡರು. ಅನಿಲ್ ಕಪೂರ್ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಕಾಂತಾರ ಸಕ್ಸಸ್ ನಲ್ಲಿರುವ ರಿಷಬ್ ಶೆಟ್ಟಿ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಕಾಂತಾರ-2 ಮಾಡ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ರಿಷಬ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಹಾಗಾಗಿ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. 

Kantara Effect: ಭೂತಕೋಲ ಕಣ್ಣಾರೆ ನೋಡಲು ಧರ್ಮಸ್ಥಳಕ್ಕೆ ಬರ್ತಾರಂತೆ ನಟ ವಿಶಾಲ್‌!

ಅಂದಹಾಗೆ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುವ ಆಸೆ ವ್ಯಕ್ತ ಪಡಿಸಿದವರಲ್ಲಿ ನಟ ನವಾಝುದ್ದೀನ್ ಸಿದ್ದಿಕ್ಕಿ ಕೂಡ ಒಬ್ಬರು. ಕಾಂತಾರ ಸಿನಿಮಾ ನೋಡಿ ಇಷ್ಟಪಟ್ಟಿದ್ದ ನವಾಜುದ್ದೀನ್ ರಿಷಬ್ ಶೆಟ್ಟಿ ನೋಡಿದ್ರೆ ಹೊಟ್ಟೆಕಿಚ್ಚು ಆಗುತ್ತೆ ಎಂದು ಹೇಳಿದ್ದರು. 'ಇಡೀ ದೇಶ ಇಂದು ರಿಷಬ್ ಶೆಟ್ಟಿ ನೋಡಿ ಶಾಕ್ ಆಗಿದೆ. ಅವರು ಯಾವುದನ್ನೂ ಪ್ರಚಾರ ಮಾಡದೆ ಸದ್ದಿಲ್ಲದ್ದೇ ಬಿಡುಗಡೆ ಮಾಡಿದರು. ಎಲ್ಲಾ ಬ್ರೇಕ್ ಮಾಡಿದರು. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅಸೂಯೆಯ ಭಾವನೆ ಬೆಳೆಯುತ್ತದೆ ಮತ್ತು ಅದೇ ಸಮಯದಕ್ಕೆ ಸ್ಪರ್ಧೆಗೂ ಪ್ರೇರೇಪಿಸುತ್ತದೆ' ಎಂದು ಹೇಳಿದರು. 'ಹೊಟ್ಟೆಕಿಚ್ಚು ಆಗುತ್ತದೆ ಯಾಕೆಂದರೆ ಅವರು ಅಷ್ಟು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಇದು ನಕಾರಾತ್ಮಕ ಕತೆಯ ಅಸೂಯೆ ಅಲ್ಲ' ಎಂದು ಹೇಳಿದರು. 

'ರಿಷಬ್ ಶೆಟ್ಟಿ ಮೇಲೆ ನನಗೆ ಹೊಟ್ಟೆಕಿಚ್ಚು' ಎಂದ ನವಾಝುದ್ದೀನ್ ಸಿದ್ದಿಕಿ; ಕಾಂತಾರ ಶಿವನ ರಿಯಾಕ್ಷನ್ ವೈರಲ್

ಅಂದಹಾಗೆ ರಿಷಬ್ ಶೆಟ್ಟಿ ಅವರ ನಿರ್ಮಾಣದಲ್ಲಿ ಬಾಲಿವುಡ್ ನಟ ನವಾಝುದ್ದೀನ್  ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿಯೂ ಇದೆ. ಒಂದು ರಿಷಬ್ ಮತ್ತು ನವಾಝುದ್ದೀನ್ ಕಾಂಬಿನೇಷನ್ ನಲ್ಲಿ ಸಿನಿಮಾ ಬಂದರೆ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ. ಈ ನಡುವೆ ಅನಿಲ್ ಕಪೂರ್ ಕೂಡ ಸಿನಿಮಾ ಮಾಡಿ ಎಂದು ಕೇಳಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಭಾರಿ ಬೇಡಿಕೆಯ ನಡುವೆ ರಿಷಬ್ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾದುನೋಡಬೇಕು.
 

Follow Us:
Download App:
  • android
  • ios