ಮಜಾ ಟಾಕೀಸ್ ರೋಮೋ ಖ್ಯಾತಿಯ ರೇಖಾ ಮಗಳು ಮೇಧಿನಿ ಈ ವರ್ಷ SSLC ಪರೀಕ್ಷೆಯಲ್ಲಿ ಶೇ.87 ಅಂಕ ಪಡೆಯುವ ಮೂಲಕ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾರೆ. ಈ ಬಗ್ಗೆ ರೇಖಾ ಮೋಹನ್ ಸಾಮಾಜಿಕ ಜಾಲತಾಣದ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಮಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರೇಖಾ, 'ನನ್ನ ಪ್ರೀತಿಯ ಮಗಳು, ನನ್ನ ವಜ್ರಾ' ಎಂದು ಬರೆದು ಪ್ರೀತಿಯ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2022 (SSLC Results 2022) ಪ್ರಕಟವಾಗಿದೆ. ಈ ಬಾರಿ ಶೇಕಡ 85.63 ರಷ್ಟು ಫಲಿತಾಂಶ ಬಂದಿದ್ದು, ಇದು ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆಯ ರಿಸಲ್ಟ್ ಆಗಿದೆ. ಅಂದಹಾಗೆ ಈ ವರ್ಷ 625ಕ್ಕೆ 625 ಅಂಕಗಳನ್ನು ಒಟ್ಟು 145 ವಿದ್ಯಾರ್ಥಿಗಳು ಪಡೆದಿದ್ದಾರೆ. ಈ ಬಾರಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇದರಲ್ಲಿ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಮಕ್ಕಳು ಸಹ ಉತ್ತಮ ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಗಟ್ಟಿಮೇಳ(Gattimela) ಧಾರಾವಾಹಿಯ ನಟಿ ಮಹತಿ ವೈಷ್ಣವಿ ಭಟ್ (Mahati Vaishnavi Bhat) SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಇದೀಗ ಮಜಾ ಟಾಕೀಸ್‌ನ ರೆಮೋ ಖ್ಯಾತಿಯ ರೇಖಾ ಮೋಹನ್(Rekha Mohan) ಮಗಳು ಸಹ ಉತ್ತಮ ಅಂಕ ಗಳಿಸಿರುವ ಬಗ್ಗೆ ಬಹಿರಂಗವಾಗಿದೆ.
ಮಜಾ ಟಾಕೀಸ್ ರೋಮೋ ಖ್ಯಾತಿಯ ರೇಖಾ ಮಗಳು ಮೇಧಿನಿ ಈ ವರ್ಷ SSLC ಪರೀಕ್ಷೆಯಲ್ಲಿ ಶೇ.87 ಅಂಕ ಪಡೆಯುವ ಮೂಲಕ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾರೆ. ಈ ಬಗ್ಗೆ ರೇಖಾ ಮೋಹನ್ ಸಾಮಾಜಿಕ ಜಾಲತಾಣದ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಮಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರೇಖಾ, 'ನನ್ನ ಪ್ರೀತಿಯ ಮಗಳು, ನನ್ನ ವಜ್ರಾ' ಎಂದು ಬರೆದು ಪ್ರೀತಿಯ ಸಾಲುಗಳನ್ನು ಹಂಚಿಕೊಂಡಿದ್ದಾರೆ.
'ನೀನು ತುಂಬಾ ಹೆಮ್ಮೆ ಪಡುವಂತೆ ಮಾಡಿದ್ದೀಯ. 10ನೇ ತರಗತಿಯಲ್ಲಿ ನೀನು ಶೇ.87ರಷ್ಟು ಅಂಕ ಗಳಿಸಿದ್ದೀಯ ಇದು ನನಗೆ ಜಗತ್ತಾಗಿದೆ. ಯಾರ ಜೀವನವೂ ಸುಲಭವಲ್ಲ. ನಮ್ಮದೂ ಆಗಿರಲ್ಲ. ಆದರೆ ನಿನ್ನ ಎಲ್ಲಾ ಕಠಿಣ ಪರಿಶ್ರಮ ಮತ್ತು ಬೆವರಿಗೆ ಫಲಸಿಕ್ಕಿದೆ. ಯಶಸ್ಸಿನ ಮೊದಲ ಮೆಟ್ಟಿಲು ಏರುತ್ತಿದ್ದೀಯ. ನಿನ್ನ ಕನಸುಗಳನ್ನು ಮುಟ್ಟಲು ನಿನಗೆ ಸ್ವಾಗತ ಕೋರುತ್ತೇನೆ. ನೀನು ಬಯಸಿದ್ದೆಲ್ಲಾ ಸಿಗಲಿ. ಹೋಗು ಎಲ್ಲಾವನ್ನು ಪಡೆದುಕೊ ನನ್ನ ಮದ್ದು ಹುಡುಗಿ' ಎಂದು ಹಾಡಿಹೊಗಳಿದ್ದಾರೆ.
ಹಿಜಾಬ್ ವಿವಾದ ಎದ್ದಿದ್ದ ಉಡುಪಿ ಕಾಲೇಜಿನ ವಿದ್ಯಾರ್ಥಿನಿ ಅಮೋಘ ಸಾಧನೆ
ರೇಖಾ ತನ್ನ ಮಗಳ SSLC ಫಲಿತಾಂಶದ ಸುದ್ದಿಯನ್ನು ಶೇರ್ ಮಾಡುತ್ತಿದ್ದಂತೆ ಮೇಧಿನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ. ನಟಿ ಶಾಲಿನಿ ಮೇಧಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
SSLCಯಲ್ಲಿ 625ಕ್ಕೆ 619 ಅಂಕ ಪಡೆದ 'ಗಟ್ಟಿಮೇಳ' ನಟಿ ಮಹತಿ; ಸಂತಸ ಹಂಚಿಕೊಂಡಿದ್ದು ಹೀಗೆ
'ಅಭಿನಂದನೆಗಳು ಮೇಧಿನಿ. ರೇಖಾ ನೀನು ಅದ್ಭುತ ತಾಯಿ' ಎಂದು ಹೇಳಿದ್ದಾರೆ. ಇನ್ನು ಮಜಾ ಟಾಕೀಸ್ ನಲ್ಲಿ ಜೊತೆಯಲ್ಲೇ ಕೆಲಸ ಮಾಡಿದ ನಟಿ ಶ್ವೇತಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ರೇಖಾ ಯಾವಾಗಲು ಅದ್ಭುತ ತಾಯಿ ಎಂದು ಹೊಗಳಿದ್ದಾರೆ.
ನಟಿ ಮಹತಿ ಸಾಧನೆ
ಇನ್ನು ನಟಿ ಮಹತಿ ವೈಷ್ಣವಿ ಭಟ್ SSLCಯಲ್ಲಿ 625ಕ್ಕೆ 619 ಅಂಕಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ ಮಹತಿ 125ಕ್ಕೆ 124 ಅಂಕ ಪಡೆದಿದ್ದಾರೆ. ಇಂಗ್ಲಿಷ್ ನಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 97 ಮತ್ತು ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ. ಅಂದಹಾಗೆ ಈ ಬಗ್ಗೆ ನಟಿ ಮಹತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದ ನಟಿ, ತಂದೆ-ತಾಯಿ, ವಾಹಿನಿ ಮತ್ತು ಶಿಕ್ಷಕರಿಗೆ ಧನ್ಯವಾದ ತಿಳಿಸಿದ್ದರು.
