ಟಾಲಿವುಡ್ (Tollywood) ಪ್ರಿನ್ಸ್ ಮಹೇಶ್ ಬಾಬು (Mahesh Babu) ಕೇವಲ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಾರ್ಯಗಳಿಂದಲೂ ಜನಮನ್ನಣೆ ಗಳಿಸಿದ್ದಾರೆ. ಹೀಗಿರುವಾಗ ಮಹೇಶ್ ಬಾಬು ಸದ್ಯ 125 ಬಡ ಮಕ್ಕಳಿಗೆ ತಮ್ಮ ಫೌಂಡೇಷನ್‌ (Foundation)ನ ಮೂಲಕ ನೆರವು ನೀಡಲು ಮುಂದಾಗಿದ್ದಾರೆ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು (Mahesh Babu) ಸಾಮಾಜಿಕ ಕಳಕಳಿಯುಳ್ಳಿ ಸಿನಿಮಾಗಳನ್ನು ಮಾಡುವುದಲ್ಲದೆ, ಸಾಮಾಜಿಕ ಕಾರ್ಯಗಳಿಂದಲೂ ಫೇಮಸ್ ಆಗಿದ್ದಾರೆ. ಮಕ್ಕಳ ಹೃದಯದ ಸಮಸ್ಯೆಗಳಿಗೆ ಸಹಾಯ ಮಾಡಲು ಪ್ರತಿಷ್ಠಾನವನ್ನೇ ಪ್ರಾರಂಭಿಸಿದ್ದಾರೆ. ಈ ಮೂಲಕ ಸಾವಿರಾರು ಮಕ್ಕಳ ಹೃದಯ (Heart) ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಈಗ ನಟ ಮಹೇಶ್ ಬಾಬು ಮತ್ತೊಂದು ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಜನ್ಮಜಾತ ಹೃದ್ರೋಗ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಪ್ಯೂರ್ ಲಿಟಲ್ ಹಾರ್ಟ್ಸ್ ಫೌಂಡೇಶನ್ (PLHF) ಸಹ ಸಂಸ್ಥೆಯನ್ನು ನಟ ಮಹೇಶ್ ಬಾಬು ಆರಂಭಿಸಿದ್ದಾರೆ. 

ಪ್ಯೂರ್ ಲಿಟಲ್ ಹಾರ್ಟ್ಸ್ ಫೌಂಡೇಶನ್ (Pure Little Hearts Foundation), ಹೃದಯ ವೈಪರೀತ್ಯ ಹೊಂದಿರುವ ಮಕ್ಕಳ ಪೋಷಕರಿಗೆ ಚಿಕಿತ್ಸೆಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ. ಈ ಬಾರಿ ಪ್ರಿನ್ಸ್ 125 ಮಕ್ಕಳ ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹೈದರಾಬಾದ್ನ ರೇಂಬೋ ಚಿಲ್ಡ್ರನ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್ ಮೂಲಕ ಈ ನೆರವನ್ನು ನೀಡಲಾಗುತ್ತಿದೆ. ದೇಶಾದ್ಯಂತ ಸಮಾಜಕ್ಕೆ ಏನನ್ನಾದರೂ ಮರಳಿ ನೀಡಲು ಬಯಸುವ ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ಗಳ ದೇಣಿಗೆಗಳು ಇದಕ್ಕೆ ಕೈ ಜೋಡಿಸಬಹುದಾಗಿದೆ ಎಂದು ರೈನ್‌ಬೋ ಚಿಲ್ಡ್ರನ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Sarkaru Vaari Paata: ಅಪ್ಪನ 'ಕಲಾವತಿ' ಹಾಡಿಗೆ ಮಗಳ ಭರ್ಜರಿ ಡ್ಯಾನ್ಸ್..!

ಆರ್ಥಿಕವಾಗಿ ಹಿಂದುಳಿದ ಜನರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಅನುಕೂಲವಾಗುವಂತೆ ಮಹೇಶ್ ಬಾಬು ಫೌಂಡೇಶನ್ ಮೂಲಕ ವ್ಯವಸ್ಥೆ ಮಾಡಲಾಗುತ್ತಿದೆ. ಚಿಕಿತ್ಸೆಯ ಪ್ರಕರಣಗಳ ಆಯ್ಕೆಯನ್ನು ವೈದ್ಯರ ತಂಡವು ಮಾಡಲಿದೆ, ಅವರು ಕೇಸ್-ಟು-ಕೇಸ್ ಆಧಾರದ ಮೇಲೆ ಹಣಕಾಸಿನ ನೆರವನ್ನು ನಿರ್ಧರಿಸುತ್ತಾರೆ. ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವ 125 ಮಕ್ಕಳಿಗೆ ಬೆಂಬಲ ನೀಡುವುದಾಗಿ ನಟ ಮಹೇಶ್ ಬಾಬು ಘೋಷಿಸಿದ್ದಾರೆ.

ರೈನ್‌ಬೋ ಚಿಲ್ಡ್ರನ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಪ್ಯೂರ್ ಲಿಟಲ್ ಹಾರ್ಟ್ಸ್ ಫೌಂಡೇಶನ್ ಕಾರ್ಯಕ್ರಮದ ಉದ್ಘಾಟನೆಯನ್ನು ನಟ ಮಹೇಶ್ ಬಾಬು ಇತ್ತೀಚಿಗೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹೇಶ್ ಬಾಬು, ‘ಮಕ್ಕಳನ್ನು ನಾನು ಅತಿ ಹೆಚ್ಚು ಪ್ರೀತಿಸುತ್ತೇನೆ. ಮಕ್ಕಳು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತಾರೆ. ಮಕ್ಕಳ ಚಿಕಿತ್ಸೆಗೆ ನೆರವು ನೀಡುವ ಯಾವುದೇ ಕಾರ್ಯಕ್ಕೆ ನಾನು ಸದಾ ಸಿದ್ಧನಿದ್ದೇನೆ. ಮಕ್ಕಳ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ರೈನ್‌ಬೋ ಚಿಲ್ಡ್ರನ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್ ಮತ್ತು ಮಹೇಶ್ ಬಾಬು ಫೌಂಡೇಷನ್‌ಗೆ ನಾನು ಖುಷಿಯಿಂದ ನೆರವು ನೀಡುತ್ತೇನೆ’ ಎಂದರು.

Namrata shirodkar Personal Life: ತನಗಿಂತ ಕಿರಿಯ ನಟನ ಮದುವೆಯಾದ ನಮ್ರತಾ ಲೈಫ್‌ಸ್ಟೈಲ್‌ ಹೇಗಿದೆ ನೋಡಿ!

ಪಿಎಲ್‌ಎಚ್‌ಎಫ್‌ನ ಅಧ್ಯಕ್ಷ ಚಿನ್ನಸ್ವಾಮಿ ರೆಡ್ಡಿ ಮಾತನಾಡಿ, ಮಕ್ಕಳಲ್ಲಿ ಹೃದಯದ ಪ್ರಕ್ರಿಯೆಗಳು ಪ್ರಾಥಮಿಕವಾಗಿ ಒಂದು ಬಾರಿಯ ಪ್ರಯತ್ನವಾಗಿದ್ದು, ಇದು ಮಗುವಿಗೆ ಉತ್ಪಾದಕ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. "ಆದರೆ ಯುವ ಪೋಷಕರು ಚಿಕಿತ್ಸೆಗಾಗಿ ಹಣವನ್ನು ಹೊಂದಿಸಲು ಹೆಣಗಾಡುತ್ತಾರೆ. ಹಣಕಾಸಿನ ನೆರವು ಸಿಕ್ಕಾಗ ಇಂಥಾ ಸಮಸ್ಯೆಯನ್ನು ಸುಲಭವಾಗಿ ಗುಣಪಡಿಸಬಹುದು’ ಎಂದು ಹೇಳಿದರು.

ಮಕ್ಕಳ ಚಿಕಿತ್ಸೆಗೆ ನೆರವಾಗುವ ಫೌಂಡೇಶನ್ ಆರಂಭಿಸಿದ ಕಾರಣದ ಕುರಿತು ನಟ ಮಹೇಶ್ ಬಾಬು ಇತ್ತೀಚಿಗೆ ಟಾಕ್ ಶೋವೊಂದರಲ್ಲಿ ಮಾತನಾಡಿದ್ದರು. ‘ಮಗ ಗೌತಮ್ ಹುಟ್ಟಿದಾಗ ಅಂಗೈನಷ್ಟು ಉದ್ದವಿದ್ದ. ನಮ್ಮಲ್ಲಿ ದುಡ್ಡು ಇತ್ತು. ಅದೆಷ್ಟೋ ಆಸ್ಪತ್ರೆಗಳಿಗೆ ಅಲೆದಾಡಿ ಮಗನನ್ನು ಉಳಿಸಿಕೊಂಡೆವು. ಆದರೆ ದುಡ್ಡು ಇಲ್ಲದವರು ಇಂಥಾ ಸಂದರ್ಭದಲ್ಲಿ ಅಸಹಾಯಕರಾಗುತ್ತಾರೆ. ಹೀಗಾಗಿ ಬಡಮಕ್ಕಳ ಚಿಕಿತ್ಸೆಗೆ ನೆರವಾಗುವ ಯೋಚನೆ ಬಂತು’ ಎಂದು ಹೇಳಿದರು.

ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಮಹೇಶ್ ಬಾಬು ಮುಂದಿನ ಚಿತ್ರ ‘ಸರ್ಕಾರು ವಾರಿ ಪಾಟ’(Sarkaru Vaari Paata). ಈ ಚಿತ್ರವು ಮೇ 12ರಂದು ರಿಲೀಸ್ ಆಗಲಿದೆ. ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್ ಬಾಬು ಜತೆ ಕೀರ್ತಿ ಸುರೇಶ್ (Keerthy Suresh) ಅಭಿನಯಿಸಿದ್ದಾರೆ. ಚಿತ್ರದ ಕಲಾವತಿ ಹಾಡು ಇತ್ತೀಚಿಗಷ್ಟೇ ರಿಲೀಸ್ ಆಗಿದ್ದು, ಎಲ್ಲೆಡೆ ಕ್ರೇಜ್ ಹುಟ್ಟು ಹಾಕಿದೆ.