ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಫೋಟೋ ವೈರಲ್ | ಬರ್ತಡೇ ದಿನ ಪ್ರಗ್ನೆನ್ಸಿ ಫೋಟೋ ರಿವೀಲ್ | ಬರ್ತಡೇ ಗಿಫ್ಟ್ ಇದು!  

ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೀರ್ತಿ ಸುರೇಶ್ 'ಪೆಂಗ್ವೀನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಚಿತ್ರತಂಡ ಬರ್ತಡೇ ಗಿಫ್ಟಾಗಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ. 

ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಪ್ರಗ್ನೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನಲ್ಲಿ She is aggressive, yet gentle.. She is majestic, yet modest.. She is #Penguin ಎಂದು ಬರೆದುಕೊಂಡಿರುವುದು ಗಮನ ಸೆಳೆದಿದೆ. 

Scroll to load tweet…


ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್- ಮೇಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದು, ಸಂತೋಷ್ ನಾರಾಯಣ್ ಸಂಗೀತವಿದೆ. ತಮಿಳು, ತೆಲುಗಿನಲ್ಲಿ ಸಿನಿಮಾ ಬರಲಿದೆ. ಸಿನಿಮಾ ತಾರಾಗಣದ ಬಗ್ಗೆ ಹೆಚ್ಚಿನ ಮಹಿತಿ ಹೊರ ಬಿದ್ದಿಲ್ಲ. 

ಇನ್ನು ಕೀರ್ತಿ ಸುರೇಶ್ ತೆಲುಗಿನಲ್ಲಿ 'ಮಿಸ್ ಇಂಡಿಯಾ' ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಮಿಸ್ ಇಂಡಿಯಾ ಆಗಲು ಕೀರ್ತಿ ಸುರೇಶ್ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. 

ಕೆಲವು ಮೂಲಗಳ ಪ್ರಕಾರ ಕೀರ್ತಿ ಸುರೇಶ್ ಮಾಡೆಲ್ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ನರೇಂದ್ರ ನಾಥ್ ಮಿಸ್ ಇಂಡಿಯಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಜಗಪತಿ ಬಾಬು, ನವೀನ್ ಚಂದ್ರ, ರಾಜೇಂದ್ರ ಪ್ರಸಾದ್, ನರೇಶ್, ಭಾನುಶ್ರೀ ಮೆಹ್ರಾ, ಸುಮಂತ್ ಎಸ್, ಪೂಜಿತಾ ಪೊನ್ನಡ, ಕಮಲ್ ಕಾಮರಾಜು ಈ ಚಿತ್ರದಲ್ಲಿ ನಟಿಸಲಿದ್ದಾರೆ.