ಮುಂಬೈನಲ್ಲಿ ನಟನಾ ತರಬೇತಿ ಆರಂಭಿಸಿದ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ! ಇಲ್ಲಿದೆ ವಿಡಿಯೋ ಝಲಕ್

ಕುಂಭಮೇಳದಲ್ಲಿ ಮಣಿ ಮಾಲೆಗಳನ್ನು ಮಾರುತ್ತಿದ್ದ ಮೋನಾಲಿಸಾ ಬೋಸ್ಲೆ ಈಗ ಬಾಲಿವುಡ್‌ ಸಿನಿಮಾದಲ್ಲಿ ನಟಿಸಲು ಮುಂಬೈನಲ್ಲಿ ನಟನಾ ತರಬೇತಿ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಅವರ ಜೀವನದಲ್ಲಿ ಈ ಬದಲಾವಣೆಗಳು ಆರಂಭವಾಗಿವೆ.

Mahakumbh Mela viral Girl Monalisa Begins Bollywood Acting Training in Mumbai sat

ಕುಂಭಮೇಳದಲ್ಲಿ ಮಣಿಗಳ ಮಾಲೆಗಳನ್ನು ಮಾರಾಟ ಮಾಡುತ್ತಿದ್ದಾಗ ಸಾಮಾಜಿಕ ಜಾಲತಾಣದ ಒಬ್ಬ ವಿಡಿಯೋ ಕಂಟೆಂಟ್‌ ಕ್ರಿಯೇಟರ್‌ನಿಂದ ಖ್ಯಾತಿ ಹೊಂದಿದ ವೈರಲ್ ಹೊಡುಗಿ ಮಹೇಶ್ವರದ ಮೋನಾಲಿಸಾ ಬೋಸ್ಲೆ ಇದೀಗ ಮುಂಬೈ ತಲುಪಿದ್ದಾರೆ. ಅಲ್ಲಿ ಬಾಲಿವುಡ್ ಸಿನಿಮಾದಲ್ಲಿ ನಟಿಸುವುದಕ್ಕಾಗಿ ನಟನಾ ತರಬೇತಿ ಪಡೆಯುವುದನ್ನೂ ಆರಂಭಿಸಿದ್ದಾರೆ.

ಕುಟುಂಬದ ಬಡತನಕ್ಕಾಗಿ ದೇಶದ ಯಾವುದೇ ಭಾಗದಲ್ಲಿ ದೊಡ್ಡ ಧಾರ್ಮಿಕ ಆಚರಣೆಗಳು ನಡೆದರೂ ಅಲ್ಲಿಗೆ ಹೋಗಿ ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದ ಹುಡುಗಿ ಮೊನಾಲಿಸಾ ಬೋಸ್ಲೆ ರಾತ್ರೋ ರಾತ್ರಿ ಭಾರೀ ವೈರಲ್ ಆಗಿದ್ದರು. ಅವರ ಆಕರ್ಷಕ ಕಣ್ಣುಗಳ ನೋಟ ಮತ್ತು ಸೌಂದರ್ಯದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬೆನ್ನಲ್ಲಿಯೇ ಅವರ ಅದೃಷ್ಟದ ಬಾಗಿಲು ಕೂಡ ತೆರೆದುಕೊಂಡಿತ್ತು. ಕೆಲವೇ ದಿನಗಳಲ್ಲಿ ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ವೈರಲ್ ಹುಡುಗಿ ಮೊನಾಲಿಸಾಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ಆದರೆ, ಸಿನಿಮಾ ನಟನೆಗಾಗಿ ತರಬೇತಿ ಪಡೆಯಬೇಕಿದ್ದು, ಇದಕ್ಕಾಗಿ ತಮ್ಮ ಕುಟುಂಬವನ್ನು ಬಾಲಿವುಡ್ ಅಂಗಳ ಮುಂಬೈನಲ್ಲಿ ನಟನಾ ತರಬೇತಿ ಪಡೆಯಲು ಬಂದಿದ್ದಾರೆ.

ಇದೀಗ ಮಣಿ ಮಾರಾಟವನ್ನು ಬಿಟ್ಟು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ. ಬಾಲಿವುಡ್ ನಾಯಕಿಯಾಗಲು ತರಬೇತಿ ಆರಂಭವಾಗುತ್ತಿದ್ದಂತೆ ಅವರ ಲುಕ್ ಕೂಡ ಸಂಪೂರ್ಣವಾಗಿ ಬದಲಾಗಿದೆ. ಇತ್ತೀಚೆಗೆ ಮೋನಾಲಿಸಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅವರನ್ನು ಗುರುತಿಸುವುದೇ ಕಷ್ಟವಾಗುತ್ತಿದೆ. ಯಾವುದೇ ಸಿನಿಮಾ ನಟಿಯರಿಗಿಂತಲೂ ಕಡಿಮೆ ಇಲ್ಲದಂತೆ ಹಾಟ್ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಎಲ್ಲಿಯೇ ಹೋದರೂ ಪಾಪರಾಜಿಗಳು ಕೂಡ ಅವರ ಫೋಟೋ ವಿಡಿಯೋಗೆ ಹಿಂದೆ ಬೀಳುತ್ತಿದ್ದಾರೆ.

ಮಹಾಕುಂಭದಿಂದ ಮುಂಬೈಗೆ: ಮೋನಾಲಿಸಾ ಮೊದಲ ಬಾರಿಗೆ ಮಹಾಕುಂಭದಲ್ಲಿ ತಮ್ಮ ನೀಲಿ ಕಣ್ಣುಗಳು ಮತ್ತು ಮುಗ್ಧತೆಯಿಂದಾಗಿ ಸುದ್ದಿಯಲ್ಲಿದ್ದರು. ಅವರು ಮಾಲೆ ಮಾರುವ ಕೆಲಸ ಮಾಡುತ್ತಿದ್ದರು. ಆದರೆ ಅದೃಷ್ಟ ಅವರನ್ನು ನೇರವಾಗಿ ಬಾಲಿವುಡ್‌ನ ಬಾಗಿಲಿಗೆ ಕರೆತಂದಿತು. ಅವರ ಜನಪ್ರಿಯತೆಯನ್ನು ಗಮನಿಸಿ ಅವರಿಗೆ 'ಡೈರಿ ಆಫ್ ಮಣಿಪುರ" ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈಗ ಮುಂಬೈ ತಲುಪಿ ತರಬೇತಿ ಆರಂಭಿಸಿದ್ದು, ಈ ವೇಳೆ ಅವರ ಲುಕ್ ಕೂಡ ಸಾಕಷ್ಟು ಮೆರುಗುಗೊಂಡಿದೆ.

ಇದನ್ನೂ ಓದಿ: ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಕನ್ನಡದ ಬಿಗ್ ಸ್ಟಾರ್‌ ಚಿತ್ರದಲ್ಲಿ 'ಮಹಾಕುಂಭ ಮೇಳ'ದ ಮೊನಾಲಿಸಾ!

ಸೋಮವಾರದಿಂದ ತರಬೇತಿ ಆರಂಭ: ಮುಂಬೈಯಲ್ಲಿ ಸೋಮವಾರದಿಂದ ಅವರ ತರಬೇತಿ ಆರಂಭವಾಗಿದೆ. ಬಾಲಿವುಡ್‌ನ ಅನುಭವಿ ತರಬೇತುದಾರರು ಅವರಿಗೆ ನಟನೆಯ ಸೂಕ್ಷ್ಮತೆಗಳನ್ನು ಕಲಿಸುತ್ತಿದ್ದಾರೆ. ತರಬೇತಿಯ ಮೊದಲ ದಿನ ಅವರು ಸುಂದರವಾದ ಮೇಕಪ್ ಲುಕ್ ಅನ್ನು ಅಳವಡಿಸಿಕೊಂಡಿದ್ದರು, ಇದರಲ್ಲಿ ಅವರು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದರು.

ಮುತ್ತಿನ ಹಾರ ಮಾರುವ ಹುಡುಗಿ ಮುಖದಲ್ಲಿ ಆತ್ಮವಿಶ್ವಾಸ: ಇತ್ತೀಚೆಗೆ X ನಲ್ಲಿ ಮೋನಾಲಿಸಾ ಹೆಸರಿನ ಖಾತೆಯಿಂದ ಒಂದು ಫೋಟೋ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಅವರು ಬಿಳಿ ಮುತ್ತಿನ ಹಾರ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟ್ ಜೊತೆಗೆ ಅವರು ಬರೆದಿದ್ದಾರೆ, ನನ್ನ ಸಿನಿಮಾಗೆ ನಟನಾ ತರಬೇತಿ ಆರಂಭವಾಗಿದೆ, ಶೀಘ್ರದಲ್ಲೇ ನನ್ನನ್ನು ನಿರೂಪಿಸಿಕೊಳ್ಳುತ್ತೇನೆ. ಆದಾಗ್ಯೂ, ಹೊಸ ಜಗತ್ತಿಗೆ ಹೊಂದಿಕೊಳ್ಳುವುದು ಅವರಿಗೆ ಸುಲಭವಲ್ಲ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ತರಬೇತಿ ಕ್ಯಾ ಇದರಲ್ಲಿ ಅವರು ಕೆಲವು ಜನರೊಂದಿಗೆ ರೀಲ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಜೊತೆಗೆ ಅವರು ಬರೆದಿದ್ದಾರೆ, “ಇನ್ನೂ ನನಗೆ ಅಸಹಜ ಅನಿಸುತ್ತಿದೆ, ಆದರೆ ಶೀಘ್ರದಲ್ಲೇ ನಾನು ಇಲ್ಲಿಗೆ ಹೊಂದಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ..

ಬಾಲಿವುಡ್‌ನಲ್ಲಿ ಗುರುತಿಸಿಕೊಳ್ಳುವ ಕನಸು: ಮಹೇಶ್ವರದ ಈ ಹುಡುಗಿಯ ಕಣ್ಣುಗಳಲ್ಲಿ ಈಗ ಬಾಲಿವುಡ್‌ನಲ್ಲಿ ರಾಜ್ಯಭಾರ ಮಾಡುವ ಕನಸು ಗೋಚರಿಸುತ್ತಿದೆ. ಚಲನಚಿತ್ರಗಳ ಜೊತೆಗೆ ಹಲವು ದೊಡ್ಡ ಬ್ರ್ಯಾಂಡ್‌ಗಳಿಂದ ಜಾಹೀರಾತು ಆಫರ್‌ಗಳು ಬರುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಈ ಆಫರ್‌ಗಳನ್ನು ಸ್ವೀಕರಿಸಿಲ್ಲ, ಏಕೆಂದರೆ ಅವರ ಪೂರ್ಣ ಗಮನ ತಮ್ಮ ನಟನಾ ವೃತ್ತಿಜೀವನದ ಮೇಲಿದೆ.

ಇದನ್ನೂ ಓದಿ: ಕುಂಭಮೇಳದ ವೈರಲ್ ಬೆಡಗಿ ಮೊನಾಲಿಸಾ ಮೊದಲ ಬಾಲಿವುಡ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು?

Latest Videos
Follow Us:
Download App:
  • android
  • ios