ಬ್ಯಾನ್ ಒತ್ತಡ ನಡುವೆ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯಪ್ರದೇಶ ಸರ್ಕಾರ!
ಕೇರಳ ಸ್ಟೋರಿ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಈಗಾಗಲೇ ಕೆಲ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಹೋರಾಟ, ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆ ಕೇರಳ ಸ್ಟೋರಿ ಚಿತ್ರಕ್ಕೆ ಮಧ್ಯಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ.
ಭೋಪಾಲ್(ಮೇ.06): ಲವ್ ಜಿಹಾದ್, ಐಸಿಸ್ ಉಗ್ರ ಸಂಘಟನೆಗೆ ಸೇರಿಕೊಂಡು ಭಾರತದ ವಿರುದ್ಧ ಕತ್ತಿ ಮಸೆಯುವ ಸತ್ಯ ಘಟನೆ ಆಧಾರಿತ ಕೇರಳ ಸ್ಟೋರಿ ಚಿತ್ರ ಭಾರಿ ವಿವಾದಕ್ಕೆ ಕಾರಣವಾಗಿದೆ. ಕೇರಳ ಸ್ಟೋರಿ ಪ್ರದರ್ಶನ ತಡೆ ನೀಡಬೇಕು ಎಂದು ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದೆ. ಮತ್ತೊಂದೆಡೆ ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ಹಲವು ಪ್ರದರ್ಶನಗಳು ರದ್ದಾಗಿದೆ. ಇದರ ನಡುವೆ ಮಧ್ಯ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇರಳ ಸ್ಟೋರಿ ಚಿತ್ರಕ್ಕೆ ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದೆ. ಈ ಮೂಲಕ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮೊದಲ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಈ ಘೋಷಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಶಿವರಾಜ್ ಸಿಂಗ್ ಚವ್ಹಾಣ್, ನಮ್ಮ ದೇಶಗ ಹೆಣ್ಣುಮಕ್ಕಳನ್ನು ವ್ಯವಸ್ಥಿತವಾಗಿ ಷಡ್ಯಂತ್ರದಲ್ಲಿ ಸಿಲುಕಿಸಿ ಲವ್ ಜಿಹಾದ್ ಮೂಲಕ ಉಗ್ರರನ್ನಾಗಿ ಮಾಡುವ ಕೃತ್ಯ ನಡೆಯುತ್ತಿದೆ. ಭಾರತದೊಳಗೆ ನಡೆಯುತ್ತಿರು ವ್ಯವಸ್ಥಿತಿ ಭಯೋತ್ಪಾದಕತೆಯನ್ನು ಈ ಚಿತ್ರ ತೋರಿಸುತ್ತದೆ. ಹೀಗಾಗಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದೇವೆ ಎಂದು ಚವ್ಹಾಣ್ ಹೇಳಿದ್ದಾರೆ.
ಮಧ್ಯ ಪ್ರದೇಶದಲ್ಲಿ ಮತಾಂತರ ವಿರುದ್ದ ಕಠಿಣ ಕಾನೂನು ತರಲಾಗಿದೆ.ಇದೇ ವಿಚಾರದ ಬಗ್ಗೆ ಕೇರಳ ಸ್ಟೋರಿ ಬೆಳಕು ಚೆಲ್ಲುತ್ತದೆ. ಮಧ್ಯ ಪ್ರದೇಶ ಸರ್ಕಾರ ತೆರಿಗೆ ವಿನಾಯಿತ ನೀಡಿದ್ದು ಯಾಕೆ ಅನ್ನೋದನ್ನು ಎಲ್ಲರೂ ಅರಿಯಬೇಕಿದೆ. ಹೀಗಾಗಿ ಈಚಿತ್ರವನ್ನು ಎಲ್ಲರು ನೋಡಿ ಎಂದು ಚವ್ಹಾಣ್ ಹೇಳಿದ್ದಾರೆ.
ಕೇರಳದಲ್ಲಿ ಕೇರಳ ಸ್ಟೋರಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದವರಿಗೆ ಹಿನ್ನಡೆಯಾಗಿತ್ತು. 32 ಸಾವಿರ ಮಹಿಳೆಯರು ಮತಾಂತರಗೊಂಡು ಐಸಿಸ್ ಉಗ್ರ ಸಂಘಟನೆ ಸೇರಿದ್ದಾರೆ’ ಎಂಬ ಅಂಶ ಹೊಂದಿದ ಕಾರಣಕ್ಕೆ ವಿವಾದದ ಬಿರುಗಾಳಿ ಎಬ್ಬಿಸಿರುವ ‘ದ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಗೆ ತಡೆ ನೀಡಲು ಕೇರಳ ಹೈಕೋರ್ಚ್ ನಿರಾಕರಿಸಿತ್ತು.
ಸಿನಿಮಾದ ಟ್ರೇಲರ್‌ನಲ್ಲಿ ಯಾವುದೇ ಸಮುದಾಯಕ್ಕೂ ಆಕ್ಷೇಪಾರ್ಹ ಎನ್ನುವ ಸಂಗತಿ ಕಂಡುಬಂದಿಲ್ಲ. ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಕೂಡ ಸಿನಿಮಾವನ್ನು ಪರಿಶೀಲಿಸಿದ್ದು, ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ‘ಈ ಸಿನಿಮಾ ಕಾಲ್ಪನಿಕವಾದುದಾಗಿದೆ. ಹಲವು ಘಟನೆಗಳ ನಾಟಕೀಯ ರೂಪವಾಗಿದೆ. ಈ ಸಿನಿಮಾ ನೈಜವಾದುದಲ್ಲ ಅಥವಾ ಐತಿಹಾಸಿಕ ಘಟನೆಗಳಿಗೆ ವಾಸ್ತವಿಕವಾದದಲ್ಲ ಎಂದು ನಿರ್ಮಾಪಕರು ಕೂಡ ಪ್ರಕಟಿಸಿದ್ದಾರೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ನೀಡುತ್ತಿಲ್ಲ ಎಂದು ಕೋರ್ಟ್ ಹೇಳಿತ್ತು.
ಉಗ್ರವಾದ ಪರ ನಿಂತಿದೆ ಕಾಂಗ್ರೆಸ್, ಕೇರಳ ಸ್ಟೋರಿ ಉಲ್ಲೇಖಿಸಿ ಮೋದಿ ವಾಗ್ದಾಳಿ!
ದಿ ಕೇರಳ ಸ್ಟೋರಿ’ ಚಿತ್ರ ಭಯೋತ್ಪಾದನೆಯ ವಿರುದ್ಧವಾಗಿದೆಯೇ ಹೊರತು ಯಾವುದೇ ಧರ್ಮದ ವಿರುದ್ಧ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಚಿತ್ರವನ್ನು ಸಮರ್ಥಿಸಿಕೊಂಡಿದ್ದು ಸಂತೋಷ ತಂದಿದೆ’ ಎಂದು ಚಿತ್ರ ನಿರ್ಮಾಪಕ ವಿಫುಲ್ ಶಾ ಹೇಳಿದ್ದಾರೆ. ಕರ್ನಾಟಕದ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಸಿನಿಮಾ ಕುರಿತು ಮಾತನಾಡಿದ ಮೋದಿ ‘ಕೇರಳ ಸ್ಟೋರಿ ಚಿತ್ರದಲ್ಲಿರುವ ಘಟನೆಗಳು ಬೇರೆ ರಾಜ್ಯದಲ್ಲೂ ನಡೆದಿರಬಹುದು. ಈ ಕುರಿತು ಎಚ್ಚರಿಕೆಯಿಂದ ಇರಬೇಕು’ ಎಂದಿದ್ದರು.