Asianet Suvarna News Asianet Suvarna News

ಮದುವೆಯಾದ ಹೊಸತರಲ್ಲಿ ಗಂಡನಿಂದಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ: ಆ ದಿನಗಳ ನೆನೆದು ಮಾಧುರಿ ಕಣ್ಣೀರು

ಮದುವೆಯಾದ ಹೊಸತರಲ್ಲಿ ಗಂಡನಿಂದಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎನ್ನುತ್ತಲೇ ಆ ದಿನಗಳ ನೆನೆದು ಮಾಧುರಿ ಕಣ್ಣೀರಾಗಿದ್ದಾರೆ. ನಟಿಯ ಹಳೆಯ ವಿಡಿಯೋ ವೈರಲ್​ ಆಗಿದೆ. ಏನಿದೆ ಅದರಲ್ಲಿ? 
 

Madhuri Dixit opens up about her newly wedded life in an old video gone viral suc
Author
First Published Aug 23, 2024, 10:45 PM IST | Last Updated Aug 23, 2024, 10:45 PM IST

ಧಕ್​  ಧಕ್​ ಬೆಡಗಿ ಎಂದೇ ಕರೆಯಲ್ಪಡುವ ಮಾಧುರಿ ದೀಕ್ಷಿತ್​ ಅವರಿಗೆ ಈಗ 57 ವರ್ಷ ವಯಸ್ಸು. ಆದರೂ ಈಗ 27ರ ಹರೆಯದ ಚೆಲುವು ಅವರದ್ದು.  ಮಾಧುರಿ ದೀಕ್ಷಿತ್ ತಮ್ಮ ಚೆಂದದ ನಗುವಿನಿಂದಲೇ ತಮ್ಮ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ನ್ಯಾಚುರಲ್ ನಟನೆ, ಸಖತ್ ಡ್ಯಾನ್ಸ್ ಮೂಲಕ ಮಾಧುರಿ ಅಭಿಮಾನಿಗಳನ್ನು ಸಹ ಕುಣಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ಚೆಲುವೆಗೆ ಆ ಕಾಲದಲ್ಲಿ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದರು. ಇವರು  12ನೇ ಕ್ಲಾಸ್ ಪರೀಕ್ಷೆ ಮುಗಿದ ನಂತರ ರಜೆಯಲ್ಲಿ ಏನೆಲ್ಲಾ ಹೊಸ ಕೆಲಸಗಳನ್ನು ಮಾಡಬಹುದು ಎಂದು ಯೋಚಿಸುತ್ತಿದ್ದರು. ರಾಜಶ್ರೀ ಪ್ರೊಡಕ್ಷನ್ಸ್ ತಮ್ಮ ‘ಅಬೋಧ್’ ಚಿತ್ರಕ್ಕಾಗಿ ಹೊಚ್ಚ ಹೊಸ ಹೊಸ ಮುಖವನ್ನು ಹುಡುಕುತ್ತಿದ್ದರು. ಆಗ ಕಣ್ಣಿಗೆ ಬಿದ್ದುದು ಮಾಧುರಿ. ಸಿನಿಮಾ ಆಫರ್ ಕೇಳಿದ ತಕ್ಷಣ ಮಾಧುರಿ ಕುಟುಂಬ ತಿರಸ್ಕರಿಸಿತ್ತಂತೆ. ಅದಾದ ನಂತರ ಹೇಗೋ ಮಾಧುರಿಯ ಮನವೊಲಿಸಿ ರಾಜಶ್ರೀ ಪ್ರೊಡಕ್ಷನ್ಸ್ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ನಟಿಗೆ ಕೆಲವು ಹಿಂದಿ ಡೈಲಾಗ್ ಕೊಟ್ರು. ಆಗ ಮಾಧುರಿಗೆ ಸ್ಕ್ರೀನ್ ಟೆಸ್ಟ್ ಮಾಡಿದ್ರು. ಸ್ಕ್ರೀನ್ ಟೆಸ್ಟ್ ನಂತರ ಅವರಿಗೆ ‘ಅಬೋಧ್’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಬಾಲಿವುಡ್​ನಲ್ಲಿ  ಭಾರಿ ಡಿಮಾಂಡ್​ನಲ್ಲಿ ಇರುವಾಗಲೇ ಇವರು ಡಾಕ್ಟರ್​ ಆಗಿರುವ  ಶ್ರೀರಾಮ್ ನೆನೆ ಅವರನ್ನು ಮಾಧುರಿ ದೀಕ್ಷಿತ್ ಮದುವೆಯಾದರು. 1999ರಲ್ಲಿ ಇವರ ಮದುವೆ ನಡೆಯಿತು. ಅಲ್ಲಿಂದ ಮಾಧುರಿ ದೀಕ್ಷಿತ್​ ಜೊತೆ ನೇನೆ ಕೂಡ ಸೇರಿಕೊಂಡಿತು. ಮದುವೆಗೂ ಮುನ್ನ ಮಾಧುರಿ ಅವರ ಹೆಸರು ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಮಿಥುನ್ ಚಕ್ರವರ್ತಿಯಂತಹ ನಟರೊಂದಿಗೆ ಸೇರಿಕೊಂಡಿತ್ತು. ಆದರೆ ಮಾಧುರಿ ಭಾರತೀಯ ಕ್ರಿಕೆಟಿಗ ಅಜಯ್ ಜಡೇಜಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಎಲ್ಲಾ ಗುಸುಗುಸು ಪಿಸುಪಿಸು ನಡುವೆಯೇ ಮಾಧುರಿ ಅವರ ಮದುವೆ ವೈದ್ಯರ ಜೊತೆ ನಡೆಯಿತು.  ಮದುವೆಯ ನಂತರ ಮಾಧುರಿ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟು ವಿದೇಶದಲ್ಲಿ ನೆಲೆಸಿದರು. 

36 ವರ್ಷದ ಬಳಿಕ ಏಕ್​, ದೋ, ತೀನ್​... ಎಂದ ಮಾಧುರಿ: ಅಮೆರಿಕದ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ನಟಿ!

ಇದೀಗ  ಮಾಧುರಿ ದೀಕ್ಷಿತ್ ಮದುವೆಯಾದ ಬಳಿಕ ತಮ್ಮ ದಾಂಪತ್ಯ ಜೀವನದ ಕೆಲವೊಂದು ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ.  ಇತ್ತೀಚೆಗೆ, ಅವರು  ತಮ್ಮ ಪತಿ ಶ್ರೀರಾಮ್ ನೆನೆ (Shreeram Nene) ಅವರ ಯೂಟ್ಯೂಬ್ ಚಾನೆಲ್​ನಲ್ಲಿ  ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದು ಹಳೆಯ ವಿಡಿಯೋ ಮತ್ತೊಮ್ಮೆ ವೈರಲ್​ ಆಗಿದೆ.  ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿ ಇದ್ದರೆ ಇಲ್ಲವೇ ಇಬ್ಬರಲ್ಲಿ ಒಬ್ಬರು ತುಂಬಾ ಹೊಣೆಗಾರಿಕೆ ಕೆಲಸದಲ್ಲಿ ಇದ್ದಾಗ ಸಾಮಾನ್ಯವಾಗಿ ಆಗುವ ತೊಂದರೆಗಳನ್ನು ತಾವು ಅನುಭವಿಸಿರುವ ಕುರಿತು ಅವರು ಮಾತನಾಡಿದ್ದಾರೆ. ಇವರ ಪತಿ ದೊಡ್ಡ ವೈದ್ಯರಾಗಿದ್ದ ಕಾರಣ, ತಮಗೆ ಮದುವೆಯಾದ ಮೇಲೆ  ಒಟ್ಟಿಗೆ ಇರಲು ಸಮಯವೇ ಸಿಗುತ್ತಿರಲಿಲ್ಲ ಎಂದು ಮಾಧುರಿ ದೀಕ್ಷಿತ್ ಹೇಳಿಕೊಂಡಿದ್ದಾರೆ. ಅವರು ಇಲ್ಲದೇ ನಾನು ಎಷ್ಟೋ ಸಮಯವನ್ನು ಒಂಟಿಯಾಗಿಯೇ ಕಳೆಯಬೇಕಿತ್ತು ಎಂದಿದ್ದಾರೆ.

ಇವರಿಗೆ ಇಬ್ಬರು ಮಕ್ಕಳು ಅರಿಯನ್​ ಮತ್ತು ರಿಯಾನ್​. ಮಕ್ಕಳು ಹುಟ್ಟಿದ  ಮೇಲೂ ಪತಿಯ ಜೊತೆ ಟೈಂ ಸ್ಪೆಂಡ್​ ಮಾಡುವುದು ಕಷ್ಟವೇ  ಆಯಿತು. ಅವರಿಗೆ ನಮಗೆ ಹೆಚ್ಚು ವೇಳೆ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ಎಲ್ಲಾ ಪ್ಲಾನ್ ಬದಲಾಗಿತ್ತು. ನಾನು ಇಡೀ ದಿನ ಫೋನ್​ನಲ್ಲಿ ಬ್ಯುಸಿಯಾಗಿ ಇರಬೇಕಿತ್ತು. ಆ ದಿನಗಳು ನನಗೆ ನಿಜವಾಗಿಯೂ ಕಷ್ಟಕರವಾಗಿತ್ತು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಜವಾಬ್ದಾರಿಯೂ ನನ್ನ ಮೇಲೆಯೇ ಇತ್ತು. ಅಷ್ಟೇ ಅಲ್ಲ... ನಮ್ಮ ಮನೆಯಲ್ಲಿ ಏನಾದರೂ ವಿಶೇಷವಿದ್ದರೂ,  ಹಬ್ಬದ ಸಮಯದಲ್ಲಿಯೂ ಅವರು ಜೊತೆಯಲ್ಲಿ ಇರುತ್ತಿರಲಿಲ್ಲ ಎಂದಿರುವ ಮಾಧುರಿ, ಒಂದು ಹಂತದಲ್ಲಿ ಕಣ್ಣೀರಿಟ್ಟಿದ್ದಾರೆ. 'ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ, ನೀವು ಬೇರೆಯವರನ್ನು ನೋಡಿಕೊಂಡಿದ್ದೀರಿ. ಇದೆಲ್ಲಾ ನನಗೆ ಕೆಲವೊಮ್ಮೆ ತುಂಬಾ ಕಷ್ಟಕರ ಅನಿಸಿದೆ. ಇದರ ಹೊರತಾಗಿಯೂ ನಾನು ಯಾವಾಗಲೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ನೀವು ಯಾವಾಗಲೂ ರೋಗಿಗಳ ಪರವಾಗಿ ನಿಂತಿದ್ದೀರಿ, ಅವರ ಜೀವಕ್ಕಾಗಿ ಶ್ರಮಿಸಿದ ರೀತಿ ನನ್ನ ಹೃದಯವನ್ನು ಗೆದ್ದಿವೆ' ಎಂದು ಪತಿಯನ್ನು ಉದ್ದೇಶಿಸಿ ನಟಿ ಹೇಳಿದ್ದಾರೆ. 

ಅತ್ಯಾಚಾರ ತಡೆಗೆ ಗಂಡಸರಿಗೆ ಹೀಗೆ ಸಲಹೆ ಕೊಟ್ಟ ನಟಿ ಶೆರ್ಲಿನ್‌ ಚೋಪ್ರಾ! ನೆಟ್ಟಿಗರು ಕೆಂಡಾಮಂಡಲ
 

Latest Videos
Follow Us:
Download App:
  • android
  • ios