Asianet Suvarna News Asianet Suvarna News

ಸಿನಿಮಾ ಸೋತರೆ 1BHK ಮನೆಗೆ ಶಿಫ್ಟ್‌ ಆಗಲು ಮುಂದಾದ ನಟ ಮಾಧವನ್ ಪತ್ನಿ; ತ್ಯಾಗ ಮೆಚ್ಚಿದ ನೆಟ್ಟಿಗರು!

ನಟ ಮಾಧವನ್ 53ನೇ ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ಸರಿತಾ ಮಾಡಲು ತಯಾರಿದ್ದ ಮಹಾ ತ್ಯಾಗದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

Madhavan celebrates 53rd birthday recalls wife Sarita sacrifies vcs
Author
First Published Jun 1, 2023, 1:53 PM IST

ಬಹುಭಾಷಾ ನಟ ಆರ್‌ ಮಾಧವನ್ ಜೂನ್‌ 1ರಂದು 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ ಹಾಗೂ ಒಳ್ಳೆ ತಂದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾಧವನ್ ಜನುಮ ದಿನದಂದು ಪತ್ನಿ ಸರಿತಾ ಮಾಡಲು ಸಿದ್ಧವಿದ್ದ ಮಹಾ ತ್ಯಾಗದ ಬಗ್ಗೆ ಎಲ್ಲೆಡೆ ವೈರಲ್ ಆಗುತ್ತಿದೆ. 

ಸಾಲಾ ಖದೂಸ್ ನಿಂದ ಕಷ್ಟ: 

ಎರಡು ವರ್ಷಗಳ ಕಾಲ ಸಾಲಾ ಖದೂಸ್ ಸಿನಿಮಾದಲ್ಲಿ ಮಾಧವನ್ ಬ್ಯುಸಿಯಾದರು. ತಮಿಳು ಭಾಷೆಯಲ್ಲಿ ಇರುಧಿ ಸುತ್ತು ಎಂದು ರಿಲೀಸ್ ಆಯ್ತು. ಈ ಸಿನಿಮಾ ಸಮಯದಲ್ಲಿ ನಿರ್ಮಾಪಕರನ್ನು ಹೊಂದಿಸುವುದು ತುಂಬಾನೇ ಕಷ್ಟವಾಯಿತ್ತು. ಈ ಚಿತ್ರಕ್ಕೆ ಮಹಿಳಾ ನಿರ್ದೇಶಕ ಸುಧಾ ಅನ್ನೋದು ಬಿಗ್ ಹೈಲೈಟ್ ಆಗುತ್ತು. ತಮ್ಮ 3 idiot ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಹಾಯ ಕೂಡ ಪಡೆದುಕೊಂಡು ಹಿಂದಿ ಭಾಷೆಯಲ್ಲಿ ಸಿನಿಮಾ ಮುಗಿಸಿದರು. ಈ ಸಿನಿಮಾ ಸೋತರೆ ನಾವು ಮನೆ ಕಾಲಿ ಮಾಡಿ ಸಿಂಗಲ್ ಬೆಡ್‌ ರೂಮ್‌ ಇರುವ ಮನೆಯಲ್ಲಿ ಇರುವುದಾಗಿ ನಿರ್ಧಾರ ಮಾಡಿಕೊಂಡರಂತೆ.

ತಂದೆಯ ನೆರಳಲ್ಲಿ ಬದುಕಲು ಇಷ್ಟವಿಲ್ಲ; ನಟ ಮಾಧವನ್ ಪುತ್ರ ವೇದಾಂತ್ ಮಾತು!

ಪತ್ನಿ ಬಿಗ್ ಸಪೋರ್ಟ್:

'ನನ್ನ ಪತ್ನಿ ಸರಿತಾ ನನಗೆ ಬಿಗ್ ಸಪೋರ್ಟ್ ಆಗಿ ನಿಂತರು. ಸಿನಿಮಾ ಸೋತರು ನಾವು ಸಿಂಗಲ್ ಬೆಡ್‌ರೂಮ್‌ ಮನೆಗೆ ಬಂದರೂ ಚಿಂತೆ ಇಲ್ಲ ನೆಮ್ಮದಿಯಿಂದ ಮನೆ ನಡೆಸುವೆ ಎಂದರು. ಈ ವಿಚಾರವನ್ನು ಸಿತಾರಾ ಮಗನಿಗೆ ಹೇಳಿರುವುದನ್ನು ಕೇಳಿಸಿಕೊಂಡಿದ್ದೀನಿ...ರಜೆಗೆ ಎಲ್ಲಾದರೂ ಹೋಗಬೇಕು ಎಂದು ಮಗ ಹಠ ಮಾಡುತ್ತಿದ್ದ ಆಗ ನನ್ನ ಪತ್ನಿ ಬೇಡ ಬೇಡ ನೀನು ಚೆನ್ನಾಗಿ ಓದಬೇಕು ಎನ್ನುತ್ತಿದ್ದಳು ಆದರೆ ಸತ್ಯ ಏನೆಂದರೆ ನನ್ನ ಬಳಿ ಹಣ ಇರಲಿಲ್ಲ ಸಂಪೂರ್ಣ ಹಣವನ್ನು ಸಿನಿಮಾ ಮೇಲೆ ಹಾಕಿದ್ದೆ' ಎಂದು ಮಾಧವನ್ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ. 

Madhavan celebrates 53rd birthday recalls wife Sarita sacrifies vcs

ಚಾಕಲೇಟ್‌ ಬಾಯ್ ಇಮೇಜ್ ಹೊಂದಿದ್ದ ಮಾಧವನ್ 2001ರಲ್ಲಿ ತೆರೆಕಂಡ ‘ರೆಹನಾ ಹೈ ತೇರೆ ದಿಲ್ ಮೇ’ ಸಿನಿಮಾದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಈ ಚಿತ್ರದಲ್ಲಿ ಅವರ ಎದುರು ದಿಯಾ ಮಿರ್ಜಾ ನಟಿಸಿದ್ದರು. ಈ ಚಿತ್ರಕ್ಕಾಗಿ ಅವರು ಸ್ಕ್ರೀನ್ ಪ್ರಶಸ್ತಿಯನ್ನು ಸಹ ಪಡೆದರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.ತನು ವೆಡ್ಸ್ ಮನು, ರಂಗ್ ದೇ ಬಸಂತಿ, 3 ಈಡಿಯಟ್ಸ್, ವಿಕ್ರಮ್ ವೇದಾ ಮುಂತಾದ ಚಿತ್ರಗಳಲ್ಲಿ ಅವರು ಉತ್ತಮ ನಟನೆಯನ್ನು ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಮಾಧವನ್ ಅವರ ನಿವ್ವಳ ಮೌಲ್ಯ ಸುಮಾರು 103 ಕೋಟಿ ರೂ.ಮುಂಬೈನ ಕೋಟ್ಯಂತರ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಮಾಧವನ್ ಈ ಮನೆಯನ್ನು ಸಾಂಪ್ರದಾಯಿಕ ಮತ್ತು ಆಧುನಿಕ ರೀತಿಯಲ್ಲಿ ಅಲಂಕರಿಸಿದ್ದಾರೆ. ಮಾಧವನ್ ಅವರ ಮನೆಯಲ್ಲಿ ದುಬಾರಿ ಪೀಠೋಪಕರಣಗಳ ಜೊತೆಗೆ ಸುಂದರವಾದ ಚಿತ್ರಗಳನ್ನು ಅಳವಡಿಸಲಾಗಿದೆ. ಆರ್ ಮಾಧವನ್ ಬೈಕ್ ಪ್ರೇಮಿ. ಇವರು BMW ನ 1500 GTL ಬೈಕ್‌ನ ಮಾಲೀಕರಾಗಿದ್ದಾರೆ, ಇದರ ಬೆಲೆ 24 ಲಕ್ಷ. ಇದಲ್ಲದೇ ಅವರ ಬೈಕ್ ಸಂಗ್ರಹದಲ್ಲಿ ಡುಕಾಟಿ ಡಯಾವಲ್ ಮತ್ತು ಯಮಹಾ ವಿ-ಮ್ಯಾಕ್ಸ್. ಇದಲ್ಲದೇ ಅವರ ಬಳಿ ಹಲವು ಐಷಾರಾಮಿ ಕಾರುಗಳೂ ಇವೆ.

Follow Us:
Download App:
  • android
  • ios