Sanjay Dutt Birthday: ವಿಶೇಷ ವಿಡಿಯೋ ಮೂಲಕ 'ಮುನ್ನಾಭಾಯ್' ಹುಟ್ಟುಹಬ್ಬಕ್ಕೆ ಪತ್ನಿ ಮಾನ್ಯತಾ ವಿಶ್
ಬಾಲಿವುಡ್ ಸ್ಟಾರ್ ಸಂಜಯ್ ದತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪತಿಯ ಹುಟ್ಟುಹಬ್ಬಕ್ಕೆ ಪತ್ನಿ ಮಾನ್ಯತಾ ದತ್ ಪ್ರೀತಿಯ ವಿಶ್ ಮಾಡಿದ್ದಾರೆ.
ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರಿಗೆ ಇಂದು (ಜುಲೈ 29) ಹುಟ್ಟುಹಬ್ಬದ ಸಂಭ್ರಮ. 64ನೇ ವರ್ಷದ ಹುಟ್ಟುಹಬ್ಬವನ್ನು ಸಂಜಯ್ ದತ್ ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಮುನ್ನಾಭಾಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಸಿನಿಮಾ ಗಣ್ಯರು ವಿಶ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಸಂಜಯ್ ದತ್ ಬರ್ತಡೇಗೆ ಪ್ರೀತಿಯ ಮಡದಿ ಮಾನ್ಯತಾ ದತ್ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ವಿಡಿಯೋ ಶೇರ್ ಮಾಡಿ ಮಾನ್ಯತಾ ಶುಭಾಶಯ ತಿಳಿಸಿದ್ದಾರೆ. ವಿಡಿಯೋ ಶೇರ್ ಮಾಡಿ ಪ್ರೀತಿಯ ಸಾಲುಗಳನ್ನು ಹಂಚಿಕೊಂಡಿದ್ದಾರೆ.
'ಹುಟ್ಟುಹಬ್ಬದ ಶುಭಾಶಯಗಳು ನನ್ನ ಅತ್ಯುತ್ತಮ ಅರ್ಧಾಂಗಿ. ನೀವು ನನಗಾಗಿ ಮಾಡುವ ಎಲ್ಲಾ ಕೆಲಸಗಳನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ.ಈ ಅದ್ಭುತಕ್ಕಾಗಿ ಧನ್ಯವಾದಗಳು. ನೀವು ನೀವಾಗಿದ್ದಕ್ಕೆ ಧನ್ಯವಾದಗಳು. ಅತ್ಯುತ್ತಮವಾದ ವರ್ಷ ನಿಮ್ಮದಾಗಲಿ. ನೀವು ಇನ್ನೂ ಸ್ಫೂರ್ತಿದಾಯಿಕ ಕೆಲಸಗಳನ್ನು ಮಾಡಬೇಕು. ನಿಮ್ಮ ಸುಂದರ ಜೀವನದ ಭಾಗವಾಗಿದ್ದು ನನ್ನ ಪುಣ್ಯ' ಎಂದು ಪ್ರೀತಿಯ ಸಾಲುಗಳನ್ನು ಬರೆದು ಹಾರ್ಟ್ ಇಮೋಜಿ ಇರಿಸಿದ್ದಾರೆ. ಮಾನ್ಯತಾ ಪೋಸ್ಟ್‌ಗೆ ಇಬ್ಬರೂ ಮಕ್ಕಳಾದ ಇಕ್ರಾ ಮತ್ತು ಶಹರಾನ್ ಕೂಡ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಸಂಜಯ್ ಮತ್ತು ಪತ್ನಿ ಮಾನ್ಯತಾ ಬರ್ತಡೇ ಒಂದೇ ತಿಂಗಳಲ್ಲಿ. ಒಂದು ವಾರದ ಅಂತರದಲ್ಲಿ ಹುಟ್ಟುಹಬ್ಬ. ಕಳೆದ ವಾರ ಸಂಜಯ್ ದತ್ ಪತ್ನಿ ಮಾನ್ಯತಾ ದತ್‌ಗೆ ಪ್ರೀತಿಯ ಶುಭಾಶಯ ತಿಳಿಸಿದ್ದರು. ಭಾವುಕ ಪೋಸ್ಟ್ ಶೇರ್ ಮಾಡಿ ತನ್ನ ಶಕ್ತಿ ಮತ್ತು ಬೆಂಬಲ ಎಂದು ಹೇಳಿದ್ದರು.
ಸಂಜಯ್ ದತ್, ದೀಪಿಕಾ ಪಡುಕೋಣೆ ಸೇರಿ ಬಾಲಿವುಡ್ ಸ್ಟಾರ್ಸ್ ಬೆಂಬಿಡದ ಡ್ರಗ್ಸ್ ವಿವಾದ
ಸಂಜಯ್ ದತ್ ಮತ್ತು ಮಾನ್ಯತಾ ದತ್ ಇಬ್ಬರೂ 2008ರಲ್ಲಿ ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ 15 ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅಂದಹಾಗೆ ಮಾನ್ಯತಾ ದತ್ ಸಂಜಯ್ ದತ್ ಅವರ ಮೂರನೆ ಪತ್ನಿ.
ಚಾಮುಂಡಿ ಬೆಟ್ಟದಲ್ಲಿ ಸಂಜಯ್ ದತ್; ಗರ್ಭಗುಡಿ ದ್ವಾರಕ್ಕೆ ನಮಸ್ಕರಿಸಿದ 'ಕೆಡಿ'!
ಇನ್ನೂ ಸಂಜಯ್ ದತ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಸಂಜಯ್ ದತ್ ಸೌತ್ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ 'ಕೆಡಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ತಮಿಳಿನಲ್ಲಿ ವಿಜಯ್ ಜೊತೆ 'ಲಿಯೋ' ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ತೆಲುಗಿನಲ್ಲಿ ಪುರಿ ಜಗನ್ನಾಥ್ ನಿರ್ದೇಶನದ 'ಡಬಲ್ ಇಸ್ಮಾರ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದು ಇಂದು ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ರಿಲೀಸ್ ಆಗಿದೆ. ಇನ್ನೂ ಹಿಂದಿಯಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂಜಯ್ ದತ್ ಅವರಿಗೆ ಕೆಜ್ಎಫ್-2 ಸಿನಿಮಾ ದೊಡ್ಡ ಮಲೇಜ್ ತಂದುಕೊಟ್ಟಿತು.