Asianet Suvarna News Asianet Suvarna News

ದುರಹಂಕಾರ ಮಿತಿಮೀರಿತಾ? ಪ್ರೆಸ್‌ಮೀಟ್‌ಲ್ಲಿ ವಿಜಯ್ ದೇವರಕೊಂಡ ಬೋಲ್ಡ್ ಪೋಸ್ ವೈರಲ್

ಹೈದರಾಬಾದ್ ಪ್ರೆಸ್‌ಮೀಟ್‌ನಲ್ಲಿ ವಿಜಯ್ ದೇವರಕೊಂಡ ಅವರ ಬೋಲ್ಡ್ ಪೋಸ್ ವೈರಲ್ ಆಗಿದೆ. ಪ್ರೆಸ್ ಮೀಟ್ ವೇಳೆ ವಿಜಯ್ ಮುಂದೆ ಇದ್ದ ಟೇಬಲ್ ಮೇಲೆ ಕಾಲು ಇಟ್ಟು ಕುಳಿತಿದ್ದರು. ಲಿಗರ್ ಸ್ಟಾರ್ ಈ ರೀತಿ ಮಾಡುವಾಗ ಒಂದು ಕ್ಷಣವೂ ಯೋಚಿಸದೆ ಹೀಗೆ ಮಾಡಿದ್ದಾರೆ.

Liger star Vijay Deverakondas disrespectful gesture in PressMeet photo viral sgk
Author
Bengaluru, First Published Aug 15, 2022, 5:46 PM IST

ಟಾಲಿವುಡ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಲಿಗರ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಲಿಗರ್ ಸಿನಿಮಾ ಪ್ಯಾನ್ ಇಂಡಿಯಾ ಪಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ವಿಜಯ್ ದೇವರಕೊಂಡ ದೇಶದಾದ್ಯಂತ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.  ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ಸ್ಟಾರ್ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅನನ್ಯಾ ಟಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮತ್ತು ಅನನ್ಯಾ ಇಬ್ಬರು ದೇಶದ ನಾನಾಭಾಗಳಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇಬ್ಬರ ಸಿನಿಮಾ ಪ್ರಚಾರದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚಿಗಷ್ಟೆ ಸಿನಿಮಾತಂಡ ಹೈದರಾಬಾದ್ ನಲ್ಲಿ ಪ್ರೆಸ್‌ಮೀಟ್ ಹಮ್ಮಿಕೊಂಡಿತ್ತು. 

ಹೈದರಾಬಾದ್ ಪ್ರೆಸ್‌ಮೀಟ್‌ನಲ್ಲಿ ವಿಜಯ್ ದೇವರಕೊಂಡ ಅವರ ಬೋಲ್ಡ್ ಪೋಸ್ ವೈರಲ್ ಆಗಿದೆ. ಪ್ರೆಸ್ ಮೀಟ್ ವೇಳೆ ವಿಜಯ್ ಮುಂದೆ ಇದ್ದ ಟೇಬಲ್ ಮೇಲೆ ಕಾಲು ಇಟ್ಟು ಕುಳಿತಿದ್ದರು. ಲಿಗರ್ ಸ್ಟಾರ್ ಈ ರೀತಿ ಮಾಡುವಾಗ ಒಂದು ಕ್ಷಣವೂ ಯೋಚಿಸದೆ ಹೀಗೆ ಮಾಡಿದ್ದಾರೆ.  ವಿಜಯ್ ಫೋಟೋ ನೋಡಿದ ನೆಟ್ಟಿಗರು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಇದು ಅಗೌರವ ತೋರಿಸುವ ಪೋಸ್, ಪ್ರೆಸ್ ಮೀಟ್ ನಲ್ಲಿ ವಿಜಯ್ ದೇವರಕೊಂಡ ಅಗೌರವ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ರೌಡಿ ವಿಜಯ್ ಪ್ರೆಸ್ ಮೀಟ್ ನಲ್ಲೂ ಹಾಗೆ ಕುಳಿತು ತನ್ನ ಅವತಾರ ತೋರಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ವಿಜಯ್ ಫ್ಯಾನ್ಸ್ ದೇವರಕೊಂಡ ಅವರನ್ನು ಹಾಡಿಹೊಗಳುತ್ತಿದ್ದಾರೆ. ಇನ್ನು ಅನೇಕರು ಕಾಮೆಂಟ್ ಮಾಡಿ ಕಿಂಗ್ ಎಂದು ಹೇಳುತ್ತಿದ್ದಾರೆ. 

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಂಬಂಧ: ಸತ್ಯ ಕೊನೆಗೂ ಬಹಿರಂಗ

ಅಂದಹಾಗೆ ವಿಜಯ್ ದೇವರಕೊಂಡ ಹೀಗೆ ಮಾಡಲು ಕಾರಣವಾಗಿದ್ದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆ. ಹೌದು, ವಿಜಯ್ ಅವರಿಗೆ ಪತ್ರಕರ್ತರೊಬ್ಬರು 'ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾದ ಮೇಲೆ ನಿಮಗೆ ಪ್ರಶ್ನೆ ಕೇಳಲು ಹಿಂಜರಿಕೆಯಾಗುತ್ತಿದೆ' ಎಂದು ಹೇಳಿದರು. ಆಗ ವಿಜಯ್ ದೇವರಕೊಂಡ ದಿಢೀರ್ ಆಗಿ ಫೀಲ್ ಫ್ರೀ ಮತ್ತು ಆರಾಮಾಗಿರಿ ಎನ್ನುತ್ತಾ ಕಾಲನ್ನು ಮುಂದೆ ಇದ್ದ ಟೇಬಲ್ ಮೇಲೆ ಇಟ್ಟರು. ಈ ಫೋಟೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅನೇಕರು ದುರಹಂಕಾರಿ ವಿಜಯ್ ದೇವರಕೊಂಡ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ವಿಜಯ್ ಹೀಗೆ ಮಾಡಿದ್ದು ಪತ್ರಕರ್ತ ಆರಾಮಾಗಿ ಪ್ರಶ್ನೆ ಕೇಳಲಿ ಎಂದು. 

ಟ್ರೋಲ್ ಆದ್ರೂ ವಿಜಯ್ ದೇವರಕೊಂಡ ಪದೇ ಪದೇ ಚಪ್ಪಲಿ ಧರಿಸೋದು ಯಾಕೆ?

ಆದರೆ ವಿಜಯ್ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಟ್ರೋಲ್ ವಿಜಯ್‌ಗೆ ಹೊಸದೇನಲ್ಲ. ಸೆಲೆಬ್ರಿಟಿಗಳು ಒಂದಲ್ಲೊಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಹಾಗಾಗಿ ವಿಜಯ್ ಕೂಡ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಜಾಸ್ತಿ ತಲೆಕೆಡಿಸಿಕೊಳ್ಳುವ ನಟನಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ. ವಿಜಯ್ ದೇವರಕೊಂಡ ಪಕ್ಕದಲ್ಲಿ ಅನನ್ಯಾ ಪಾಂಡೆ ಕುಳಿತಿದ್ದರು. ವಿಜಯ್ ಅವತಾರ ಕಂಡು ನಗುತ್ತಿದ್ದರು. ಪುರಿ ಜಗನ್ನಾಥ್ ನಿರ್ದೇಶನದ ಲಿಗರ್  ಸಿನಿಮಾ ಇದೇ ತಿಂಗಳು ಆಗಸ್ಟ್ 25 ರಂದು ರಿಲೀಸ್ ಆಗುತ್ತಿದೆ.

Follow Us:
Download App:
  • android
  • ios