Asianet Suvarna News Asianet Suvarna News

ಪ್ರಕಾಶ್ ರೈ ಮಾಡಿದ ಸಂದರ್ಶನದಲ್ಲಿ ಹೇಮ ಮಾಲಿನ ಜೊತಗಿನ ಸ್ನೇಹ ತೆರೆದಿಟ್ಟ ಬಾಲಿವುಡ್ ಶ್ರೀದೇವಿ!

ಬಾಲಿವುಡ್ ನಟಿ ಶ್ರೀದೇವಿ ಈಗ ಜೀವಂತವಾಗಿಲ್ಲ, ಆದರೂ ಅವರ ಕಲಾ ಸೇವೆಯ ಜೊತೆ  ಅವರ ಹಳೆಯ ಸಂದರ್ಶನಗಳು ಆಗಾಗ ಇಂಟರ್‌ನೆಟ್‌ನಲ್ಲಿ ಸುರುಳಿ ಸುತ್ತುತ್ತಾ ಅವರನ್ನು ನೆನಪು ಮಾಡುವಂತೆ ಮಾಡುತ್ತದೆ.

Legend Actress Sridevi Old video goes viral in that she mimiking Hemamalini talking Style akb
Author
First Published Dec 5, 2023, 3:12 PM IST

ಬಾಲಿವುಡ್ ನಟಿ ಶ್ರೀದೇವಿ ಈಗ ಜೀವಂತವಾಗಿಲ್ಲ, ಆದರೂ ಅವರ ಕಲಾ ಸೇವೆಯ ಜೊತೆ  ಅವರ ಹಳೆಯ ಸಂದರ್ಶನಗಳು ಆಗಾಗ ಇಂಟರ್‌ನೆಟ್‌ನಲ್ಲಿ ಸುರುಳಿ ಸುತ್ತುತ್ತಾ ಅವರನ್ನು ನೆನಪು ಮಾಡುವಂತೆ ಮಾಡುತ್ತದೆ. ಅದೇ ರೀತಿ ಈಗ ತಮಿಳು ಚಾನೆಲ್‌ವೊಂದಕ್ಕೆ ಅವರು ನೀಡಿದ ಸಂದರ್ಶನದ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ, ಶ್ರೀದೇವಿ ನಟಿ ಹೇಮಮಾಲಿನಿ ಹೇಗೆ ಮಾತನಾಡುತ್ತಾರೆ ಎಂಬುದನ್ನು ಮಿಮಿಕ್ರಿ ಮಾಡಿದ್ದಾರೆ. ಈ ವೀಡಿಯೋ ನೋಡಿದಾಗ ಶ್ರೀದೇವಿ ಕೇವಲ ನಟಿ ಮಾತ್ರವಲ್ಲ ಅವರೊಬ್ಬ ಸೂಪರ್ ಆಗಿರುವ ಮಿಮಿಕ್ರಿ ಆರ್ಟಿಸ್ಟ್ ಕೂಡ ಆಗಬಹುದಿತ್ತು ಎನ್ನುವಷ್ಟು ಸೊಗಸಾಗಿದೆ ಈ ವೀಡಿಯೋ. 

ಈ ವೀಡಿಯೋದಲ್ಲಿ ನಟ ಪ್ರಕಾಶ್ ರೈ ಅವರು ಶ್ರೀದೇವಿ ಅವರ ಸಂದರ್ಶನ (Interview) ಮಾಡಿದ್ದಾರೆ. ಸಂದರ್ಶನದ ನಡುವೆ ಹೇಮಾಮಾಲಿನಿ ಜೊತೆಗಿನ ತಮ್ಮ ಸ್ನೇಹದ ಬಗ್ಗೆ ಕೇಳಿದ್ದಾರೆ. ಪ್ರಕಾಶ್ ರೈ, ಈ ವೇಳೆ ಶ್ರೀದೇವಿ ಹೇಮಮಾಲಿನಿ ಹೇಗೆ ಮಾತನಾಡುತ್ತಾರೋ ಹಾಗೆಯೇ ಅವರ ಮಾತನ್ನು ಅನುಕರಿಸಿದ್ದು, ಪ್ರಕಾಶ್ ರೈ ಜೋರಾಗಿ ನಗುತ್ತಾರೆ. ಹೇಮಾಮಾಲಿನಿ ಜೊತೆಗಿನ ನಿಮ್ಮ ಭೇಟಿಯ ಬಗ್ಗೆ ಹೇಳಿ ಎಂದಾಗ ನಾವು ಆಗಾಗ ಮದುವೆ ಮುಂತಾದ ಯಾವುದಾದರು ಸಮಾರಂಭಗಳಲ್ಲಿ ಭೇಟಿಯಾಗುತ್ತಿದ್ದೆವು. ಈ ವೇಳೆ ಊಟ ಆಯ್ತಾ ಎಂದು ಕೇಳಿದಾಗ ಎಂತಾ ಊಟ ಚೆನ್ನಾಗಿಯೇ ಇಲ್ಲ ನಾ ವೈಟ್ರೈಸ್ ತಿಂದೆ ಎಂದು ಹೇಳುತ್ತಿದ್ದರು. ಎಂದು ಹೇಮಾ ಮಾಲಿನಿ (Hemamalini)ಹೇಗೆ ಹೇಳುತ್ತಾರೋ ಹಾಗೆಯೇ ಅವರದೇ ಧ್ವನಿಯಲ್ಲಿ ಹೇಳಿದ್ದಾರೆ ಶ್ರೀದೇವಿ. 

ಇಂಥ ಪತ್ನಿಯರೂ ಇರ್ತಾರಾ? ಸವತಿ ಹೇಮಾ ಮಾಲಿನಿಯನ್ನೇ ಹಾಡಿ ಹೊಗಳಿದ್ದ ಧರ್ಮೇಂದ್ರ ಮೊದಲ ಪತ್ನಿ!

ಇದೇ ವೇಳೆ ನೀವಿಬ್ಬರೂ ಭೇಟಿಯಾದಾಗ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ ಎಂದು ಪ್ರಕಾಶ್ ರೈ ಕೇಳಿದ್ದು, ನಾವು ತಮಿಳು ಭಾಷೆಯಲ್ಲಿಯೇ ಮಾತನಾಡುತ್ತಿದ್ದೆವು ಎಂದು ಶ್ರೀದೇವಿ ಉತ್ತರಿಸಿದ್ದಾರೆ. ಹೇಮಮಾಲಿನಿ ಜೊತೆಗಿನ ಯಾವುದಾದರೂ ಸಂಭಾಷಣೆ ನೆನೆಪಿಕೊಳ್ಳಿ ಎಂದು ಪ್ರಕಾಶ್ ರೈ ಹೇಳಿದ್ದು, ಈ ವೇಳೆ ಪ್ರತಿಕ್ರಿಯಿಸಿದ ಶ್ರೀದೇವಿ ಏನ್ ನೀವು ಹೀಗೆ ಮಾತಾಡ್ತೀರಿ ನಂಗೆ ಸ್ವಲ್ಪವೂ ಇಷ್ಟವಾಗಲಿಲ್ಲ, ಇದೇನಿದು ಎಂದು ಹೇಮಾಜಿ ಸ್ಟೈಲ್‌ನಲ್ಲಿಯೇ ಹೇಳಿದ್ದಾರೆ. ಈ ವೇಳೆ ನಿಮ್ಮ ಸ್ನೇಹ ಹೇಗೆ ಎಂದು ಪ್ರಕಾಶ್ ರೈ ಕೇಳಿದ್ದು, ಆಕೆ ಇದನ್ನು ನೋಡಿ ಏನು ಅಂದುಕೊಳ್ಳುವುದಿಲ್ಲ ಎಂದು ಭಾವಿಸುವೆ ಎಂದು ಉತ್ತರಿಸಿದ್ದಾರೆ. ಈ ವೇಳೆ ಬಹುಶ ಆಕೆ ಇದನ್ನು ಇಷ್ಟಪಡಬಹುದು ಎಂದು ಪ್ರಕಾಶ್ ರೈ (Prakash Rai) ಹೇಳಿದ್ದಾರೆ. ಈ ವೇಳೆ ಶ್ರೀದೇವಿ ಅವರೊಬ್ಬರು ಶ್ರೇಷ್ಠ ಮಹಿಳೆ ಎಂದು ಹೇಮಾಮಾಲಿನಿ ಬಗ್ಗೆ ಕೊಂಡಾಡಿದ್ದಾರೆ. 

ಈ ವೀಡಿಯೋದಲ್ಲಿ ಹೇಮಮಾಲಿನಿ ಮಾತನಾಡಿದಂತೆ ಶ್ರೀದೇವಿ (Sridevi) ಅವರು ಮಾತನಾಡುತ್ತಿದ್ದು, ಇದನ್ನು ನೋಡಿ ಅಭಿಮಾನಿಗಳು ಆಕೆಯೊಬ್ಬ ಗ್ರೇಟ್ ಆರ್ಟಿಸ್ಟ್ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅನೇಕರು ಆಕೆಗೆ ಇಷ್ಟು ಚೆನ್ನಾಗಿ ತಮಿಳು ಬರುವುದೆಂದು ತಿಳಿದೇ ಇರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಹೇಮಮಾಲಿನಿ ಹಾಗೂ ಶ್ರೀದೇವಿ ಇಬ್ಬರೂ ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದ ಸಿನಿಮಾರಂಗವನ್ನು ಆಳಿದ ಈ ಇಬ್ಬರು ಖ್ಯಾತ ಅಭಿನೇತ್ರಿಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಶ್ರೀದೇವಿ ಜತೆ ಡಿಂಗ್ ಡಾಂಗ್; ಮಧ್ಯೆ ವಿಲನ್ ಆಗಿದ್ದವರ ಗುಟ್ಟು ಬಿಚ್ಚಿಟ್ಟ ನಟ ಮಿಥುನ್ ಚಕ್ರವರ್ತಿ
 

 

 

Follow Us:
Download App:
  • android
  • ios