Asianet Suvarna News Asianet Suvarna News

ಇನ್‌ಕಮ್‌ ಟ್ಯಾಕ್ಸ್‌ ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಮೋಸದ ಬಲೆಗೆ ಬಿದ್ರಾ ನಟಿ ಜಯಪ್ರದಾ..!?

ನಟಿ ಜಯಪ್ರದಾಗೆ ಚಿತ್ರರಂಗದಲ್ಲಿ ಕೂಡ ಅವಕಾಶಗಳು ಕಡಿಮೆ ಆಗತೊಡಗಿದವು. ಮದುವೆಯಾಗಿರುವ ಕಾರಣಕ್ಕೆ ಸಹಜವಾಗಿಯೇ ಅವಕಾಶಗಳು ಕಡಿಮೆಯಾಗಿದ್ದು ಒಂದುಕಡೆಯಾದರೆ, ಸಂಸಾರ ಹಾಳು ಮಾಡಿದ ನಟಿಯೆಂಬ ಕೆಟ್ಟ ಹೆಸರು ಇನ್ನೊಂದು ಕಡೆ ಕೇಳುತ್ತ ಅವಕಾಶಗಳು ಇಲ್ಲವೇ ಇಲ್ಲ ಎಂಬ ಸ್ಥಿತಿಗೆ ಬಂದು ತಲುಪಿದರು ನಟಿ ಜಯಪ್ರದಾ.

Legend actress Jaya Prada has love and marriage with Shrikant Nahata in 1986 srb
Author
First Published Feb 5, 2024, 4:03 PM IST

ಬಾಲಿವುಡ್ ಸೇರಿದಂತೆ ಭಾರತದ ಬಹಳಷ್ಟು ಭಾಷೆಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಮೆರೆದಿದ್ದರು ಜಯಪ್ರದಾ. ಮುಖ್ಯವಾಗಿ 70 ಹಾಗೂ 80ರ ದಶಕದಲ್ಲಿ, ಜತೆಗೆ 90ರ ದಶಕದ ಪ್ರಾರಂಭದಲ್ಲಿ ಕೂಡ ನಟಿ ಜಯಪ್ರದಾ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದರು. 1985ರಲ್ಲಿ ಜಯಪ್ರದಾಗೆ ಇನ್‌ಕಮ್‌ ಟ್ಯಾಕ್ಸ್ ಪ್ರಾಬ್ಲಂ ಶುರುವಾಯ್ತು. ಆಗ ಅವರಿಗೆ ಸಹಾಯಕ್ಕೆ ನಿಂತವರು ಶ್ರೀಕಾಂತ್ ನಹತಾ. ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಟಿ ಜಯಪ್ರದಾಗೆ ಸಹಾಯ ಹಸ್ತ ಚಾಚುವ ನೆಪದಲ್ಲಿ ಶ್ರೀಕಾಂತ್ ನಹತಾ ಅವರು ಪ್ರೀತಿಯ ಬಲೆಯನ್ನೂ ಸಹ ಬೀಸಿ ಅದರಲ್ಲಿ ಯಶಸ್ವಿಯೂ ಆದರು ಎನ್ನಲಾಗುತ್ತದೆ. 

ಶ್ರೀಕಾಂತ್ ಅವರನ್ನು ಮನಸಾರೆ ಪ್ರೀತಿಸಿ ಸಂಪೂರ್ಣವಾಗಿ ನಂಬಿದ ಜಯಪ್ರದಾ 1986ರಲ್ಲಿ ಅವರನ್ನು ವಿವಾಹವಾದರು. ಆದರೆ, ಜಯಪ್ರದಾರನ್ನು ಮದುವೆಯಾಗಿದ್ದ ಶ್ರೀಕಾಂತ್ ಅವರಿಗೆ ಅದಾಗಲೇ ಮದುವೆಯಾಗಿ 3 ಮಕ್ಕಳು ಸಹ ಇದ್ದರು. ಆದರೂ ಕೂಡ ಅವರನ್ನು ನಂಬಿ ಸಂಸಾರ ಶುರು ಮಾಡಿದ ಜಯಪ್ರದಾಗೆ ಸ್ವಲ್ಪ ಕಾಲದಲ್ಲೇ ಕೆಟ್ಟ ಅನುಭವಗಳ ಜತೆ ಅನೈತಿಕ ಮದುವೆ ಬಿಸಿ ತಟ್ಟತೊಡಗಿತು. ಮೋಸದ ಮದುವೆ ಎಂದು ಮದುವೆ ಬಳಿಕ ಅರಿತ ಜಯಪ್ರದಾ ಮನಸ್ಸಿಗೆ ತುಂಬಾ ಬೇಸರವಾಗಿ ಖಿನ್ನತೆಗೆ ಕೂಡ ಜಾರಿದ್ದರು ಎನ್ನಲಾಗಿದೆ. 

ಶ್ರೀಕಾಂತ್ ನಹತಾ ಅವರು ತಮ್ಮ ಮೊದಲ ಹೆಂಡತಿಗೆ ಡಿವೋರ್ಸ್‌ ನೀಡದೇ ನಟಿ ಜಯಪ್ರದಾರನ್ನು ಮದುವೆಯಾಗಿದ್ದರು. ಈ ಕಾರಣಕ್ಕೆ ಅವರ ಫ್ಯಾಮಿಲಿಯಲ್ಲಿ ಗಲಾಟೆಗಳು ಆಗತೊಡಗಿದವು. ಬಳಿಕ ಕೂಡ ಶ್ರೀಕಾಂತ್ ಅವರು ತಮ್ಮ ಮೊದಲ ಹೆಂಡತಿಗೆ ವಿಚ್ಛೇದನ  ನೀಡದಿದ್ದಾಗ ಅನಿವಾರ್ಯವಾಗಿ ನಟಿ ಜಯಪ್ರದಾ ಅವರು ಶ್ರೀಕಾಂತ್ ನಹತಾ ಜತೆ ಸಂಬಂಧ ಕಡಿದುಕೊಂಡು ದೂರವಾಗಿ ಒಂಟಿ ಜೀವನ ನಡೆಸತೊಡಗಿದರು. ಬಳಿಕ ತಂಗಿಯ ಮಗನನ್ನು ದತ್ತು ಪಡೆದು ಅವನೊಟ್ಟಿಗೆ ಜೀವನ ನಡೆಸತೊಡಗಿದರು ಎನ್ನಲಾಗಿದೆ. ಅಷ್ಟರಲ್ಲಿ, ಶ್ರೀಕಾಂತ್ ಸಂಸಾರ ಹಾಳು ಮಾಡಿದ ಅಪಕೀರ್ತಿಗೆ ಪಾತ್ರರಾಗಿ ನಟಿ ಜಯಪ್ರದಾ ಸಾಕಷ್ಟು ನೋವು ಅನುಭವಿಸತೊಡಗಿದರು. 

ನಟ ಮೈಕೆಲ್ ಮಧು ಆಕಸ್ಮಿಕ ಸಾವಿನ ಬಳಿಕ ಕುಟುಂಬ ಎದುರಿಸಿದ್ದು ಅದೆಂಥಾ ಆರೋಪ...!?

ಅದೂ ಸಾಲದು ಎಂಬಂತೆ, ನಟಿ ಜಯಪ್ರದಾಗೆ ಚಿತ್ರರಂಗದಲ್ಲಿ ಕೂಡ ಅವಕಾಶಗಳು ಕಡಿಮೆ ಆಗತೊಡಗಿದವು. ಮದುವೆಯಾಗಿರುವ ಕಾರಣಕ್ಕೆ ಸಹಜವಾಗಿಯೇ ಅವಕಾಶಗಳು ಕಡಿಮೆಯಾಗಿದ್ದು ಒಂದುಕಡೆಯಾದರೆ, ಸಂಸಾರ ಹಾಳು ಮಾಡಿದ ನಟಿಯೆಂಬ ಕೆಟ್ಟ ಹೆಸರು ಇನ್ನೊಂದು ಕಡೆ ಕೇಳುತ್ತ ಅವಕಾಶಗಳು ಇಲ್ಲವೇ ಇಲ್ಲ ಎಂಬ ಸ್ಥಿತಿಗೆ ಬಂದು ತಲುಪಿದರು ನಟಿ ಜಯಪ್ರದಾ. ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ಚಿತ್ರರಂಗ ಬಿಟ್ಟು ರಾಜಕೀಯದತ್ತ ಹೊರಳಿದರು ಜಯಪ್ರದಾ. 

ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ, ಅಲ್ಲಿಯವರೆಗೆ ಯಾವುದನ್ನೂ ನಂಬಬೇಡಿ; 'ಡೆವಿಲ್' ಪ್ರಕಾಶ್ ವೀರ್ ಮನವಿ

ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, 1996ರಿಂದ 2002ರವರೆಗೆ ರಾಜ್ಯ ಸಭಾ Member of Rajya Sabha (1996–2002) ಸಂಸದರಾಗಿದ್ದರು ನಟಿ ಜಯಪ್ರದಾ. ಬಳಿಕ, 2004 ರಿಂದ 2014ರವರೆಗೆ ಲೋಕಸಭಾ ಸಂಸದರಾಗಿದ್ದರು Member of the Lok Sabha (2004–2014)ನಟಿ ಜಯಪ್ರದಾ ಕಾರ್ಯ ನಿರ್ವಹಿಸಿದ್ದಾರೆ.  ಈಗಲೂ ಕೂಡ ರಾಜಿಕೀಯವಾಗಿಯೇ ಸಕ್ರಿಯರಾಗಿರುವ ಜಯಪ್ರದಾ ಅವರು ಸದ್ಯ ಚಿತ್ರರಂಗದಿಂದ ದೂರವಾಗಿದ್ದರು. ಒಟ್ಟಿನಲ್ಲಿ ಪ್ರೀತಿ ಕುರುಡು ಎಂಬ ಹೇಳಿಕೆಯಂತೆ 'ಕುರುಡು ಪ್ರೀತಿ' ಬಲೆಗೆ ಬಿದ್ದು ನಟಿ ಜಯಪ್ರದಾ ತಮ್ಮ ಜೀವನವನ್ನು ಹಾಳು ಮಾಡಿಕೊಂಡರು ಎನ್ನಬಹುದೇನೋ!

'ಮಲೆನಾಡ ಗೊಂಬೆ'ಗೆ ಮನಸೋತ ಮನೆಹಾಳನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್..!

Follow Us:
Download App:
  • android
  • ios