ಅಕ್ಷಯ್ ಖನ್ನಾ ಹಾಗೂ ಅವರ ತಂಡವನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲಾಗಿದೆ. ಆದರೆ, ಅವರಿನ್ನೂ ನಿರ್ಮಾಪಕರ ಹೇಳಿಕೆಗೆ ಪ್ರತಿಕ್ರಿಯಿಸಿಲ್ಲ. 'ಅವರು ಕೇಳಿದ ಸಂಭಾವನೆ'ಯನ್ನು ನೀಡಲಾಗಿದೆ. ಆದರೂ ಕೂಡ ಅಕ್ಷಯ್ ಖನ್ನಾ ಅವರು ನಮ್ಮ ಚಿತ್ರದಿಂದ ಹಿಂದೆ ಸರಿದಿರುವುದು ನಮಗೆ ಶಾಕ್ ನೀಡಿದೆ
ಅಕ್ಷಯ್ ಖನ್ನಾಗೆ ಲೀಗಲ್ ನೋಟಿಸ್!
ಸದ್ಯಕ್ಕೆ ಭಾರತ ಸೇರಿದಂತೆ, ಪ್ರಪಂಚದಾದ್ಯಂತ ಬಾಲಿವುಡ್ ಸಿನಿಮಾ 'ಧುರಂದರ್' (Dhurandhar) ಧೂಳೆಬ್ಬಿಸಿದ್ದು, ಬರೋಬ್ಬರಿ 1000 ಕೋಟಿಗೂ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ವೀಕೆಂಡ್ ಮಾತ್ರವಲ್ಲ, ವೀಕ್ ಡೇಸ್‌ನಲ್ಲೂ ರಣವೀರ್ ಅಭಿನಯದ ಧುರಂದರ್ ಸಿನಿಮಾದ ಗಳಿಕೆ ಸ್ವಲ್ಪವೂ ಕುಗ್ಗಿಲ್ಲ. ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿರುವ ಧುರಂದರ್ ಸಿನಿಮಾದಲ್ಲಿ ಹಿರಿಯ ನಟ ಅಕ್ಷಯ್ ಖನ್ನಾ ಅವರು ಸಖತ್ ಮಿಂಚಿದ್ದಾರೆ. ಧುರಂಧರ್‌ನಲ್ಲಿ ನಾಯಕ ರಣವೀರ್ ಸಿಂಗ್ ಅವರಷ್ಟೇ ಖ್ಯಾತಿ ಗಳಿಸಿರುವ ಅಕ್ಷಯ್ ಖನ್ನಾ (Akshaye Khanna) ಅವರಿಗೆ ಇದೀಗ ಚಿಕ್ಕಪುಟ್ಟ ಪಾತ್ರ ಮಾಡುವ ಅನಿವಾರ್ಯತೆಯೇ ಹೊರಟುಹೋಗಿದೆ ಎನ್ನಲಾಗುತ್ತಿದೆ.
ಹೌದು, ಧುರಂಧರ್ ಚಿತ್ರದ ಸಕ್ಸಸ್ ಬಳಿಕ ನಟ ಅಕ್ಷಯ್ ಖನ್ನಾ ಅವರು ಯಾವುದೇ ಸಣ್ಣ ಪಾತ್ರವನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಮೊದಲು ಸಹಿ ಹಾಕಿದ್ದ ಅಜಯ್ ದೇವಗನ್ ನಾಯಕತ್ವದ 'ದೃಶ್ಯಂ 3' ಚಿತ್ರದಿಂದ ಕೂಡ ಅಕ್ಷಯ್ ಖನ್ನಾ ಹೊರಹೋಗಿದ್ದಾರೆ. ಈ ಕಾರಣಕ್ಕೆ ಇದೀಗ ದೃಶ್ಯಂ ಸಿನಿಮಾ ತಂಡ ನಟ ಅಕ್ಷಯ್ ಖನ್ನಾ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ನಿರ್ಮಾಪಕ ಮಂಗತ್ ಪಾಠಕ್ ಹೇಳಿದ್ದೇನು?
'ದೃಶ್ಯಂ 3' ಚಿತ್ರದ ಭಾಗವಾಗಲು ನಟ ನಿರಾಕರಿಸಿದ ನಂತರ, ಮುಂಬರುವ ಚಿತ್ರ 'ದೃಶ್ಯಂ 3' ಗಾಗಿ ಒಪ್ಪಂದ ಉಲ್ಲಂಘನೆಗಾಗಿ ಅಕ್ಷಯ್ ಖನ್ನಾ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಲಾಗಿದೆಈ ಸಂಗತಿಯನ್ನು ಚಲನಚಿತ್ರ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಶನಿವಾರ ತಿಳಿಸಿದ್ದಾರೆ. ದೃಶ್ಯಂ 3 ಚಿತ್ರಕ್ಕಾಗಿ ಕಳೆದ ತಿಂಗಳು ಖನ್ನಾ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಮತ್ತು ನಟನಿಗೆ ಮುಂಗಡ ಪಾವತಿಯನ್ನು ಸಹ ನೀಡಲಾಗಿದೆ ಎಂದು ಮಂಗತ್ ಪಾಠಕ್ ಹೇಳಿದ್ದಾರೆ. ಅಕ್ಷಯ್ ಖನ್ನಾರ ನಿರ್ಧಾರವು ಚಿತ್ರೀಕರಣದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಶುಕ್ರವಾರ ಜೈದೀಪ್ ಅಹ್ಲಾವತ್ ಅವರೊಂದಿಗೆ ಸಹಿ ಹಾಕಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
ಅಭಿಷೇಕ್ ಪಾಠಕ್ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸ್ಟಾರ್ ಸ್ಟುಡಿಯೋ 18 ಪ್ರಸ್ತುತಪಡಿಸಿದೆ. ಇದನ್ನು ಅಲೋಕ್ ಜೈನ್, ಅಜಿತ್ ಅಂಧಾರೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ನಿರ್ಮಿಸಿದ್ದಾರೆ. ನಾವು 'ದೃಶ್ಯಂ 3' ಚಿತ್ರಕ್ಕಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದೇವೆ, ಹಾಗೂ ಅಕ್ಷಯ್ ಖನ್ನಾಗೆ ಇದರ ಬಗ್ಗೆ ತಿಳಿದಿದೆ. ಅವರಿಗೆ ನಾವು ಸಂಪೂರ್ಣ ಸ್ಕ್ರಿಪ್ಟ್ ಅನ್ನು ವಿವರಿಸಿದ್ದೆವು ಮತ್ತು ಅವರು ಅದನ್ನು ಇಷ್ಟಪಟ್ಟಿದ್ದರು ಕೂಡ.
ಒಪ್ಪಂದಕ್ಕೆ ಸಹಿ ಹಾಕುವ ಮೊದಲು, ಅವರ ಸಂಭಾವನೆಯ ಬಗ್ಗೆ ಮೂರು ಬಾರಿ ಮಾತುಕತೆ ನಡೆಸಿಯೇ ಫೈನಲ್ ಮಾಡಿದ್ದೇವೆ. ನಂತರ ಅವರೂ ಸಹಿ ಹಾಕಿದ್ದಾರೆ, ಮುಂಗಡ ಹಣವನ್ನೂ ಪಡೆದಿದ್ದಾರೆ. ಆದರೆ ಧುರಂದರ್ ಸಕ್ಸಸ್ ಬಳಿಕ ಅವರು ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ. ಇದು ನಮ್ಮ ಚಿತ್ರತಂಡಕ್ಕೆ ಆದ ಹಿನ್ನಡೆ. ಜೊತೆಗೆ, ಇದು ಚಿತ್ರದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ನಾವೀಗ ಕಾನೂನಿನ ಮೊರೆ ಹೋಗಿದ್ದೇವೆ' ಎಂದಿದ್ದಾರೆ ಮಂಗತ್ ಪಾಠಕ್. ಅಂದಹಾಗೆ, ಈ ಮಂಗತ್ ಪಾಠಕ್ ಅವರು ಈ ಹಿಂದೆ ಓಂಕಾರ, ನೋ ಸ್ಟೋಕಿಂಗ್ ಮತ್ತು ಸೆಕ್ಷನ್ 375 ಚಿತ್ರಗಳಿಗೆ ಬೆಂಬಲ ನೀಡಿದ್ದರು.
ನಮ್ಮ ಲೀಗಲ್ ನೋಟಿಸ್ ಕೊಡುವ ನಿರ್ಧಾರದ ಬಗ್ಗೆ ಅಕ್ಷಯ್ ಖನ್ನಾ ಹಾಗೂ ಅವರ ತಂಡವನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲಾಗಿದೆ. ಆದರೆ, ಅವರಿನ್ನೂ ನಿರ್ಮಾಪಕರ ಹೇಳಿಕೆಗೆ ಪ್ರತಿಕ್ರಿಯಿಸಿಲ್ಲ. ಅವರು ಕೇಳಿದ ಸಂಭಾವನೆಯನ್ನು ನೀಡಲಾಗಿದೆ, ಇದು 'ದೃಶ್ಯಂ 2' ಗಿಂತ ಮೂರು ಪಟ್ಟು ಹೆಚ್ಚಿನದ್ದಾಗಿದೆ. ಆದರೂ ಕೂಡ ಅಕ್ಷಯ್ ಖನ್ನಾ ಅವರು ನಮ್ಮ ಚಿತ್ರದಿಂದ ಹಿಂದೆ ಸರಿದಿರುವುದು ನಮಗೆ ಶಾಕ್ ನೀಡಿದೆ' ಎಂದಿದ್ದಾರೆ ದೃಶ್ಯಂ 3 ಚಿತ್ರದ ನಿರ್ಮಾಪಕರು.
'ದೃಶ್ಯಂ 3' ಚಿತ್ರವನ್ನು 'ವಿಜಯ್ ಸಲ್ಲಾಂಟ್ಕರ್' ಪಾತ್ರವನ್ನು ನಿರ್ವಹಿಸುವ ಅಜಯ್ ದೇವಗನ್ ನಿರ್ದೇಶಿಸಿದ್ದಾರೆ. ನಟಿ ಟಬು ಅವರು ಮಾಜಿ ಪೊಲೀಸ್ ಅಧಿಕಾರಿ ಮೀರಾ ದೇಶಮುಖ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ದೃಶ್ಯಂ 2 ರಲ್ಲಿ, ಮೀರಾ ಅವರ ಮಗ ಸ್ಯಾಮ್ ಹತ್ಯೆಯನ್ನು ತನಿಖೆ ಮಾಡುವ ಐಜಿ ತರುಣ್ ಅಹ್ಲಾವತ್ ಪಾತ್ರವನ್ನು ಈ ಅಕ್ಷಯ್ ಖನ್ನಾ ನಿರ್ವಹಿಸಿದ್ದಾರೆ. ಆದರೀಗ ಆ ಪಾತ್ರಕ್ಕೆ ಬೇರೆಯವರು ಬರಬೇಕಿದೆ.
ವಿಗ್ ಕಾರಣಕ್ಕೆ ಹಿಂದೆ ಸರಿದ್ರಾ ಅಕ್ಷಯ್ ಖನ್ನಾ?
ನಾವು ಚಿತ್ರದಲ್ಲಿ ಅವರ ಲುಕ್‌ಗಾಗಿ ಸ್ವಲ್ಪ ರಾಜಿಯಾಗಲು ಒಪ್ಪಿದ್ದೆವು. ಆದರೆ, ಅವರು ವಿಗ್ ಧರಿಸಲು ಬಯಸಿದ್ದರಂತೆ, ಆದರೆ, ನಮ್ಮ ಪ್ರಕಾರ, ನಾವು ಇದ್ದಕ್ಕಿದ್ದಂತೆ ಅವರ ಪಾತ್ರಕ್ಕೆ ಹೊಸ ಲುಕ್ ನೀಡಿದರೆ ಅದನ್ನು ಪ್ರೇಕ್ಷಕರು ಒಪ್ಪಲಾಗದು. ಹೀಗಾಗಿ ನಾವು ವಿಗ್ ಹಾಕಿಸಲು ಒಪ್ಪಲಿಲ್ಲ. ಆಗ ಅದನ್ನು ಒಪ್ಪಿಕೊಂಡು ಸಹಿ ಮಾಡಿರುವ ನಟ ಅಕ್ಷಯ್ ಖನ್ನಾ ಅವರು ಅಂದು 'ಇದು ರೂ. 500 ಕೋಟಿ ಚಿತ್ರವಾಗಲಿದೆ' ಎಂದು ಹೇಳಿ ನಿರ್ದೇಶಕ ಅಭಿಷೇಕ್ ಅವರನ್ನು ಅಪ್ಪಿಕೊಂಡಿದ್ದರು. ಆದರೆ, ಈಗ ಮತ್ತೆ ಅದಕ್ಕೆ ವಿರೋಧ ವ್ಯಕ್ತಪಡಿಸಿ, ಈ ನಮ್ಮ ಚಿತ್ರದಿಂದಲೇ ಹಿಂದೆ ಸರಿದಿದ್ದಾರೆ..' ಎಂದು ಇದೀಗ 'ದೃಶ್ಯಂ' ಚಿತ್ರದ ನಿರ್ಮಾಪಕರು ಹೇಳಿದ್ದಾರೆ.
ಸದ್ಯ ಅಕ್ಷಯ್ ಖನ್ನಾ ಮಾಡಬೇಕಾಗಿದ್ದ ಪಾತ್ರವನ್ನು 'ಪಾತಾಳ್ ಲೋಕ್' ಸಿನಿಮಾದ ನಟ ಜೈದೀಪ್ ಅಹಲಾವತ್ (Jaideep Ahlawat) ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಈ ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ. ಈ ಮೊದಲು ಚಿತ್ರವೊಂದಕ್ಕೆ 2 ರಿಂದ 3 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟ ಅಕ್ಷಯ್ ಖನ್ನಾ ಅವರು ಇದೀಗ ಧುರಂಧರ್ ಸಕ್ಸಸ್ ಬಳಿಕ 20 ಕೋಟಿ ಸಂಭಾವನೆಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಅವರ ಈ ನಿರ್ಧಾರ ಸಹಜವಾಗಿಯೇ ನಮ್ಮ ನಿರ್ಧಾರವನ್ನೂ ಬದಲಾಯಿಸಿದೆ' ಎಂದಿದ್ದಾರೆ. ಒಟ್ಟಿನಲ್ಲಿ, ದೃಶ್ಯಂ ಸಿನಿಮಾದ ಅಭಿಮಾನಿಗಳು 'ದೃಶ್ಯಂ 3' ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರನ್ನು ನೋಡುವ ಅವಕಾಶ ಕೈತಪ್ಪಲಿರುವುದು ಆಲ್‌ಮೋಸ್ಟ್ ಕನ್ಫರ್ಮ್ಂ ಎನ್ನಲಾಗುತ್ತಿದೆ. ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ..!


