Asianet Suvarna News Asianet Suvarna News

Lata Mangeshkar in ICU: ಪ್ರತಿ ದಿನದ ದುಡಿಮೆ ಲತಾ ಚಿಕಿತ್ಸೆಗೆ ಮೀಸಲಿಟ್ಟ ಅಭಿಮಾನಿ

  • Lata Mangeshkar in ICU: ಐಸಿಯುನಲ್ಲಿದ್ದಾರೆ ಲತಾ ಮಂಗೇಷ್ಕರ್
  • ಖ್ಯಾತ ಗಾಯಕಿಯ ಆರೋಗ್ಯಕ್ಕಾಗಿ ಅಭಿಮಾನಿಗಳ ಹಾರೈಕೆ
  • ತನ್ನ ದುಡಿಮೆಯ ಹಣ ಲತಾ ಚಿಕಿತ್ಸೆಗೆ ನೀಡಲು ಆಟೋ ಚಾಲಕನ ನಿರ್ಧಾರ
Lata Mangeshkar in ICU Mumbai auto driver dedicates all his earnings for the legendary singers treatmen dpl
Author
Bangalore, First Published Jan 23, 2022, 10:27 AM IST

ಭಾರತದ ಖ್ಯಾತ ಗಾಯಕಿ ಲತಾ ಮಂಗೇಷ್ಕರ್(Lata Mangeshkar) ಅವರು ಕೊರೋನಾ ಪಾಸಿಟಿವ್(covid19 Positive) ದೃಢಪಟ್ಟ ಮೇಲೆ ಆರೋಗ್ಯ ಕಾರಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕಿ ಆರೋಗ್ಯಕ್ಕಾಗಿ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಹಾಗೆಯೇ ವಯಸ್ಸಾಗಿರುವುದರಿಂದ ಆರೋಗ್ಯ ಸುಧಾರಣೆ ಸ್ವಲ್ಪ ನಿಧಾನವಾಗಿದೆ ಎಂದೂ ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ಹೇಳಿದ್ದರು. ಇದೀಗ ಗಾಯಕಿ ಐಸಿಯುನಲ್ಲೇ ಚಿಕಿತ್ಸೆ ಪಡೆಯುವುದು ಮುಂದುವರಿದಿದ್ದು, ಮುಂಬೈನ ಆಟೋ ಚಾಲಕ ತನ್ನ ದುಡಿಮೆಯನ್ನು ಲತಾ ಚಿಕಿತ್ಸೆಗಾಗಿ ವಿನಿಯೋಗಿಸಲು ನಿರ್ಧರಿಸಿದ್ದಾನೆ.

ಮನರಂಜನಾ ಉದ್ಯಮದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರು COVID-19 ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು ರೋಗ ಪತ್ತೆಯಾದ ನಂತರ ಕಳೆದ 10 ದಿನಗಳಿಂದ ಮುಂಬೈನ(Mumbai) ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತ ರತ್ನ ಪುರಸ್ಕೃತರು ಪ್ರಸ್ತುತ ಐಸಿಯು(ICU) ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ICUನಲ್ಲಿದ್ದಾರೆ ಖ್ಯಾತ ಗಾಯಕಿ, ಪ್ರಾರ್ಥಿಸಿ ಎಂದ ವೈದ್ಯರು

ಗಾಯಕಿ ತನ್ನ ಮಧುರ ಧ್ವನಿಯಿಂದ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಲತಾ ಶ್ರೇಯೋಭಿವೃದ್ಧಿಗಾಗಿ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿರುವಾಗಲೇ ಮುಂಬೈನ ಸತ್ಯವಾನ್ ಗೀತೆ ಎಂಬ ಆಟೋ ಚಾಲಕ ತನ್ನ ದುಡಿಮೆಯನ್ನೆಲ್ಲಾ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಮೀಸಲಿಟ್ಟಿದ್ದಾನೆ. ಆಟೋ ಡ್ರೈವರ್ ತನ್ನ ವಾಹನವನ್ನು ಲತಾ ಮಂಗೇಶ್ಕರ್ ಅವರ ಎವರ್‌ಗ್ರೀನ್ ಹಾಡುಗಳ ಸಾಹಿತ್ಯದಿಂದ ಅಲಂಕರಿಸಿದ್ದಾರೆ. ಅವರ ದೊಡ್ಡ ಫೋಟೋವನ್ನು ಸಹ ಹಾಕಿದ್ದಾರೆ. ಅವರು ತಮ್ಮ ನೆಚ್ಚಿನ ಗಾಯಕಿ 'ಬೇಗನೆ ಗುಣವಾಗಲಿ' ಎಂಬ ಸಂದೇಶಗಳನ್ನು ಬರೆದಿದ್ದರು. ಗಾಯಕಿ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ದಿನದಿಂದ ಸತ್ಯವಾನ್ ಗೀತೆ ಲತಾ ಮಂಗೇಶ್ಕರ್ ಅವರಿಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದಾರೆ.

ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ತಿಳಿದ ನಂತರ, ಹಲವಾರು ಅಭಿಮಾನಿಗಳು ಮತ್ತು ಚಲನಚಿತ್ರ ಬಂಧುಗಳು ಮತ್ತು ಇತರ ಕ್ಷೇತ್ರಗಳ ಸದಸ್ಯರು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಾರೈಸಿದ್ದಾರೆ. ನಿಮ್ಮ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆಗಳು ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. ಗಾಯಕಿಯ ಆರೋಗ್ಯದ ಕುರಿತು ಮಾತನಾಡಿದ ಆರೋಗ್ಯ ಸಚಿವ ರಾಜೇಶ್ ಟೋಪೆ ಇತ್ತೀಚೆಗೆ ಜಾಲ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಲತಾ ಮಂಗೇಶ್ಕರ್ ಅವರ ಆರೋಗ್ಯ ಸುಧಾರಿಸುತ್ತಿದೆ. ನಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರ ಆರೋಗ್ಯದ ಬಗ್ಗೆ ನನಗೆ ತಿಳಿಸಿದ್ದಾರೆ ಎಂದಿದ್ದಾರೆ.

ಗಾನ ಕೋಗಿಲೆ ಕುರಿತು ಸುಳ್ಳು ಸುದ್ದಿ ಹರಡಬೇಡಿ, ಕುಟುಂಬದ ಮನವಿ!

ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಂಗೇಶ್ಕರ್ ಅವರು 1942 ರಲ್ಲಿ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹಲವಾರು ಭಾರತೀಯ ಭಾಷೆಗಳಲ್ಲಿ 30,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಪ್ರಸಿದ್ಧ ವೃತ್ತಿಜೀವನದಲ್ಲಿ, ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 15 ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು, ಎರಡು ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಗಳು, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಅನೇಕ ಪುರಸ್ಕಾರಗಳನ್ನು ಗೆದ್ದಿದ್ದಾರೆ.

Follow Us:
Download App:
  • android
  • ios