Lata Mangeshkar Hospitalized: ಹಿರಿಯ ಗಾಯಕಿಗೆ ಕೊರೋನಾ ಪಾಸಿಟಿವ್

  • ಹಿರಿಯ ಗಾಯಕಿ ಲತಾ ಮಂಗೇಷ್ಕರ್‌ಗೆ ಕೊರೋನಾ ಪಾಸಿಟಿವ್
  • ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾದ ಹಿರಿಯ ಗಾಯಕಿ
Lata Mangeshkar Admitted to Hospital in Mumbai After Contracting Covid 19 dpl

ದೇಶಾದ್ಯಂತ ಬಹಳಷ್ಟು  ಸೆಲೆಬ್ರಿಟಿಗಳು, ಸಿನಿಮಾ ಸ್ಟಾರ್‌ಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಬಾಲಿವುಡ್ ಹಾಗೂ ಸೌತ್ ಸಿನಿ ಇಂಡಸ್ಟ್ರಿಯ ಗಣ್ಯರು ಸೇರಿ ಗಾಯಕ ಸೋನು ನಿಗಂ ಹಾಗೂ ಫ್ಯಾಮಿಲಿಗೂ ಕೊರೋನಾ ಪಾಸಿಟಿವ್ ಬಂದಿದೆ. ಇದೀಗ ಹಿರಿಯ ಗಾಯಕಿ ಲತಾ ಮಂಗೇಷ್ಕರ್ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಗಾಯಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಮಂಗಳವಾರ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಿರಿಯ ಗಾಯಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಭಾರತದ ನೈಟಿಂಗೇಲ್ ಎಂದೂ ಕರೆಯಲ್ಪಡುವ 92 ವರ್ಷದ ಗಾಯಕ ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ.

ಲತಾ ಅವರು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ. ವಯೋ ಸಹಜ ಸಮಸ್ಯೆಗಳೂ ಇವೆ ಎಂದು ವೈದ್ಯರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಂಗೇಶ್ಕರ್ ಅವರನ್ನು ನವೆಂಬರ್ 2019 ರಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ಗಾಯಕಿಗೆ ವೈರಲ್ ಸೋಂಕು ಇದೆ ಎಂದು ಮಂಗೇಶ್ಕರ್ ಅವರ ತಂಗಿ ಉಷಾ ಹೇಳಿದ್ದರು.

ಕೊರೋನಾ ರಿಲೀಫ್ ಫಂಡ್‌ಗೆ 7 ಲಕ್ಷ ನೀಡಿದ ಲತಾ ಮಂಗೇಶ್ಕರ್

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಮಂಗೇಶ್ಕರ್ ತನ್ನ ಹತ್ತಿರದ ಕುಟುಂಬ ಸದಸ್ಯರೊಂದಿಗೆ ತನ್ನ 92 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆಕೆಯ ಜನ್ಮದಿನವು ಆತ್ಮೀಯ ಆಚರಣೆಯಾಗಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಎಲ್ಲಾ ಭಾಗಗಳಿಂದ ಸಂಗೀತ ಐಕಾನ್‌ಗೆ ಬಹಳಷ್ಟು ಜನರು ಶುಭಾಶಯ ತಿಳಿಸಿದ್ದರು. ಮಂಗೇಶ್ಕರ್ ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.

ಗೌರವಾನ್ವಿತ ಲತಾ ದೀದಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವಳ ಮಧುರ ಧ್ವನಿ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ. ಭಾರತೀಯ ಸಂಸ್ಕೃತಿಯ ಬಗೆಗಿನ ಆಕೆಯ ನಮ್ರತೆ ಮತ್ತು ಉತ್ಸಾಹಕ್ಕಾಗಿ ಅವಳು ಗೌರವಿಸಲ್ಪಟ್ಟಿದ್ದಾಳೆ. ವೈಯಕ್ತಿಕವಾಗಿ, ಆಕೆಯ ಆಶೀರ್ವಾದವು ದೊಡ್ಡ ಶಕ್ತಿಯ ಮೂಲವಾಗಿದೆ. ಲತಾ ದೀದಿ ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದರು.

ಲತಾ ಮಂಗೇಶ್ಕರ್‌ ಹಾಗೂ ಎ.ಆರ್. ರೆಹಮಾನ್‌ ಕಾಂಬೀನೆಷನ್‌ನ ಟಾಪ್‌ ಹಾಡುಗಳು!

ಏಳು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಇಂದೋರ್ ಮೂಲದ ಮಂಗೇಶ್ಕರ್ ಅವರು 1,000 ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಮತ್ತು ವಿವಿಧ ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಆಕೆಯ ಕೊನೆಯ ಪೂರ್ಣ ಆಲ್ಬಂ ದಿವಂಗತ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ-ನಿರ್ದೇಶನ 2004 ರ ಚಲನಚಿತ್ರ 'ವೀರ್ ಝಾರಾ;'ಗಾಗಿ ಆಗಿತ್ತು. ಮಂಗೇಶ್ಕರ್ ಅವರ ಕೊನೆಯ ಹಾಡು “ಸೌಗಂಧ್ ಮುಜೆ ಈಸ್ ಮಿಟ್ಟಿ ಕಿ”, ಇದನ್ನು ಮಾರ್ಚ್ 30, 2021 ರಂದು ಭಾರತೀಯ ಸೇನೆಗೆ ಗೌರವವಾಗಿ ಬಿಡುಗಡೆ ಮಾಡಲಾಯಿತು. ಆಕೆಗೆ 2001 ರಲ್ಲಿ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಲಾಯಿತು.

ಲತಾ ಮಂಗೇಶ್ಕರ್ ಅವರು ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಅನೇಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.

ಕೊರೋನಾ ಹೋರಾಟಕ್ಕೆ ಕೈಜೋಡಿಸಿದ್ದ ಗಾಯಕಿ

ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಕೋವಿಡ್ -19 ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 7 ಲಕ್ಷ ರೂಪಾಯಿ ನೀಡಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗೇಶ್ಕರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ, ಭಾರತ್ ರತ್ನ ಲತಾ ಮಂಗೇಶ್ಕರ್ ಅವರಿಂದ 7 ಲಕ್ಷ ರೂ. ದೇಣಿಗೆ ನೀಡಿದ್ದನ್ನು ನಾವು ಕೃತಜ್ಞತೆಯಿಂದ ಸ್ವೀಕರಿಸುತ್ತೇವೆ. ಕೋವಿಡ್ -19 ವಿರುದ್ಧದ ನಮ್ಮ ಹೋರಾಟಕ್ಕೆ ಈ ಮೊತ್ತವನ್ನು ಬಳಸಲಾಗುತ್ತದೆ ಎಂದಿದ್ದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡಲು ಬಯಸುವ ಎಲ್ಲರಿಗೂ ರಾಜ್ಯವು ಸಿಎಂ ರಿಲೀಫ್ ಫಂಡ್ ಅನ್ನು ಸ್ಥಾಪಿಸಿದೆ. ನಿಧಿಗೆ ಕೊಡುಗೆ ನೀಡುವ ಮೂಲಕ ಜನರು ಮುಂದೆ ಬರಬೇಕೆಂದು ಸಿಎಂ ಒತ್ತಾಯಿಸಿದ್ದರು.

ಪ್ರಸ್ತುತ ತಮ್ಮ ಕುಟುಂಬದೊಂದಿಗೆ ದುಬೈನಲ್ಲಿರುವ ಗಾಯಕ ಸೋನು ನಿಗಮ್ ಅವರು ತಮ್ಮ ಪತ್ನಿ, ಮಗ ಮತ್ತು ಸೊಸೆಯೊಂದಿಗೆ ವೆಕೇಷನ್‌ನಲ್ಲಿದ್ದಾರೆ. ತಮ್ಮ ಕುಟುಂಬಕ್ಕೆ ಕೋವಿಡ್ -19 ಗೆ ಪಾಸಿಟಿವ್ ದೃಢಪಟ್ಟಿರುವುದಾಗಿ ಅವರು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಗಾಯಕ ತನ್ನ ಆರೋಗ್ಯ ಮತ್ತು ಹೆಚ್ಚಿನ ವಿವರಗಳ ಕುರಿತು ಮಾತನಾಡಲು Instagram ನಲ್ಲಿ ವ್ಲಾಗ್ ಅನ್ನು ಹಂಚಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios