'ಹೂಂ ಅಂತೀಯ ಮಾವ' ಹಾಡಿನ ಬಗ್ಗೆ ಕೃತಿ ಶೆಟ್ಟಿ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಇದರಿಂದ ಸಮಂತಾ ಅಭಿಮಾನಿಗಳು ಅಸಮಾಧಾನ ಹೊರಹಾರಿದ್ದಾರೆ. 

ನಟಿ ಕೃತಿ ಶೆಟ್ಟಿ ಸದ್ಯ ನಾಗ ಚೈತನ್ಯ ಜೊತೆ ಕಸ್ಟಡಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕೃತಿ ಮತ್ತು ನಾಗ ಚೈತನ್ಯ ನಟನೆಯ ಕಸ್ಟಡಿ ಸಿನಿಮಾ ರಿಲೀಸ್ ಆಗಿದೆ. ಇಬ್ಬರೂ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಅನೇಕ ಸಂದರ್ಶನಗಳನ್ನು ನೀಡಿದ್ದಾರೆ. ಆ ವೇಳೆ ನಟಿ ಕೃತಿ, ಸಮಂತಾ ನಟನೆಯ ಸೂಪರ್ ಹಿಟ್ 'ಹೂಂ ಅಂತೀಯ ಮಾವ' ಹಾಡಿನ ಬಗ್ಗೆ ಕಾಮೆಂಟ್ ಮಾಡಿ ಸಮಂತಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟಿ ಕೃತಿ ಶೆಟ್ಟಿ ಹೇಳಿಕೆ ಸಮಂತಾ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 

ಪ್ರಚಾರದ ವೇಳೆ ಕೃತಿ ಶೆಟ್ಟಿಗೆ ಸಮಂತಾ ನಟನೆಯ 'ಹೂಂ ಅಂತೀಯ ಮಾವ' ಹಾಡಿನ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಹಾಡಿನ ನೃತ್ಯವನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಡಲಾಯಿತು. ಇದಕ್ಕೆ ಉತ್ತರಿಸಿದ ನಟಿ ಕೃತಿ ಶೆಟ್ಟಿ ಈ ಸಮಯದಲ್ಲಿ ಇಂಥ ಪಾತ್ರಗಳನ್ನು ಮಾಡಲ್ಲ ಎಂದು ತಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಅನುಭವದ ಪ್ರಕಾರ ನನಗೆ ಇಷ್ಟವಾಗದ ಪಾತ್ರಗಳಲ್ಲಿ ಆರಾಮದಾಯಕವಾಗುವುದು ಕಷ್ಟ. ಆದರೆ ಸಮಂತಾ ಅವರು ಅಭಿನಯ ಚೆನ್ನಾಗಿದೆ ಎಂದು ಹೇಳಿದ್ದಾರೆ. 

ಕೃತಿ ಅವರ ಮಾತುಗಳು ಸಮಂತಾ ಅಬಿಮಾನಿಗಳಿಗೆ ಇಷ್ಟವಾಗಿಲ್ಲ. ಅವರಿಗೆ ಇಂಥ ಹಾಡಿನಲ್ಲಿ ನಟಿಸಲು ಇಷ್ಟವಿರದಿದ್ದರೆ ಅವರು ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಅನೇಕರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ವಿಶೇಷ ಹಾಡುಗಳು ನಟಿಯರಿಗೆ ತುಂಬಾ ವಿಶೇಷ ಆಗಲಿದೆ. ಐಟಂ ಹಾಡುಗಳಿಂದ ನಟಿಯರು ಯಶಸ್ಸು ಮತ್ತಷ್ಟು ಹೆಚ್ಚಾಗಲಿದೆ. ಕಾಜಲ್, ಶ್ರೀಯಾ, ತಾಪ್ಸಿ, ತಮನ್ನಾ ಸೇರಿದಂತೆ ಅನೇಕರು ವಿಶೇಷ ಹಾಡಿನ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು ಎನ್ನುತ್ತಿದ್ದಾರೆ. 

ನಂಬಿಕೆ, ಭಯ ನಮ್ಮನ್ನು ಬೇರ್ಪಡಿಸಿದೆ: ನಾಗ ಚೈತನ್ಯಗೆ ಕೌಂಟರ್ ಕೊಟ್ರಾ ಸಮಂತಾ?

ಕೃತಿ ಶೆಟ್ಟಿ ಸದ್ಯ ನಾಗ ಚೈತನ್ಯ ಜೊತೆ ಸಿನಿಮಾ ಮಾಡುತ್ತಿರುವ ಈ ವೇಳೆ ಸಮಂತಾ ಹಾಡಿನ ಬಗ್ಗೆ ಕಾಮೆಂಟ್ ಮಾಡಿರುವುದು ಅಚ್ಚರಿ ಮೂಡಿಸಿದೆ. ಸಮಂತಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕೃತಿ ನೇರವಾಗಿ ಸಮಂತಾ ಹಾಡು ಇಷ್ಟವಾಗಿಲ್ಲ ಅಂತ ಹೇಳದೆ ನಾಜೂಕಾಗಿ ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ. 

ಸೀರೆಯಲ್ಲಿ ಮಸ್ತ್ ಪೋಸ್ ನೀಡಿದ ಕರಾವಳಿ ಸುಂದರಿ; ಕೃತಿ ಶೆಟ್ಟಿ ಫೋಟೋ ವೈರಲ್

ಸೂಪರ್ ಹಿಟ್ ಪುಷ್ಪ ಸಿನಿಮಾದಲ್ಲಿ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಸಮಂತಾ ಹಾಡಿನ ವಿರುದ್ಧ ಅನೇಕರು ಅಸಮಾಧಾನ ಹೊರಹಾಕಿದ್ದರು. ಸಾಹಿತ್ಯ ಮತ್ತು ಡಾನ್ಸ್ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಪುಷ್ಪ ಸಾಂಗ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದು ದೇಶ ವಿದೇಶದಲ್ಲಿ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು.