ಸೀರೆಯಲ್ಲಿ ಮಸ್ತ್ ಪೋಸ್ ನೀಡಿದ ಕರಾವಳಿ ಸುಂದರಿ; ಕೃತಿ ಶೆಟ್ಟಿ ಫೋಟೋ ವೈರಲ್
ಸಿನಿಮಾದ ಮುಹೂರ್ತದಲ್ಲಿ ನಟಿ ಕೃತಿ ಶೆಟ್ಟಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಕೃತಿಯ ಸೀರೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕರ್ನಾಟಕದ ಕರಾವಳಿ ಸುಂದರಿ ಕೃತಿ ಶೆಟ್ಟಿ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪೇನ ಸಿನಿಮಾ ಮೂಲಕ ಚಿತ್ರಮಾರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಕೃತಿ ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಯಶಸ್ಸುಗಳಿಸಿದರು. ಗ್ರ್ಯಾಂಡ್ ಆಗಿ ಚಿತ್ರರಂಗ ಪ್ರವೇಶ ಮಾಡಿದ ನಟಿ ಕೃತಿ ತೆಲುಗಿನಲ್ಲಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸದ್ಯ ಕೃತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ಈ ಸುಂದರಿ ಇದೀಗ ಮಲಯಾಳಂಗೂ ಎಂಟ್ರಿ ಕೊಟ್ಟಿದ್ದಾರೆ. ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಕೃತಿ ನಾಯಕಿಯಾಗಿ ಮಿಂಚಲಿದ್ದಾರೆ.
ಅಂದಹಾಗೆ ಟೊವಿನೋ ಥಾಮಸ್ ಮತ್ತು ಕೃತಿ ನಟನೆಯ ಹೊಸ ಸಿನಿಮಾಗೆ ಅಜಯಂತೆ ರಂದಮ್ ಮೊಷಮ್ ಎಂದು ಹೆಸರಿಡಲಾಗಿದೆ. ಇತ್ತೀಚಿಗಷ್ಟೆ ಈ ಸಿನಿಮಾ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.
ಸಿನಿಮಾದ ಮುಹೂರ್ತದಲ್ಲಿ ನಟಿ ಕೃತಿ ಸೀರೆ ಧರಿಸಿ ಕಂಗೊಳಿಸಿದ್ದಾರೆ. ಕೃತಿಯ ಸೀರೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಹೂರ್ತದಲ್ಲಿ ಮಸ್ತ್ ಪೋಸ್ ನೀಡಿರುವ ಫೋಟೋಗಳನ್ನು ಸ್ವತಃ ಕೃತಿ ಶೆಟ್ಟಿನೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಕೃತಿ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಕೃತಿ ತನ್ನ ಹೊಸ ಸಿನಿಮಾ ತಂಡದ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ಮಾತ್ರವಲ್ಲದೇ ಐಶ್ವರ್ಯಾ ರಾಜೇಶ್, ಸುರಭಿ ಲಕ್ಷ್ಮಿ ಕೂಡ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕೃತಿ ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.
Krithi Shetty
ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ ಉಪ್ಪೇನಾ ಸಿನಿಮಾ ಮೂಲಕ ನಾಯಕಿಯಾಗಿ ಮಿಂಚಿದ ಕೃತಿ ಬಳಿಕ ನಾನಿ ಜೊತೆ ಶ್ಯಾಮ ಸಿಂಗ ರಾಯ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಬಂಗರಾಜು, ದಿ ವಾರಿಯರ್ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ಮಿಂಚಿದರು.
ಅನೇಕ ಸಿನಿಮಾಗಳಲ್ಲಿ ಮಿಂಚಿದರೂ ಉಪ್ಪೇನಾ ತಂದುಕೊಟ್ಟ ಖ್ಯಾತಿ ಮತ್ತೆ ಸಿಕ್ಕಲ್ಲ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೃತಿ ಮತ್ತೊಂದು ಬಿಗ್ ಹಿಟ್ ಗಾಗಿ ಕಾಯುತ್ತಿದ್ದಾರೆ.