Asianet Suvarna News Asianet Suvarna News

Krishna Mukherjee: ಬಿಕಿನಿಗೆ ಫ್ಯಾನ್ಸ್​ ಗರಂ, ಹನಿಮೂನ್ ವಿಡಿಯೋನೂ ಶೇರ್​ ಮಾಡಿ ಎಂದು ಕಿಡಿ

ಇತ್ತೀಚೆಗಷ್ಟೇ ಮದುವೆಯಾಗಿರುವ ಕಿರುತೆರೆ ನಟಿ ಕೃಷ್ಣಾ ಮುಖರ್ಜಿಯವರು ಹನಿಮೂನ್​ನಲ್ಲಿದ್ದು, ಅಲ್ಲಿಂದ ಬಿಕಿನಿ ಫೋಟೋ ಶೇರ್​ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಗರಂ ಆಗಿದ್ದಾರೆ. 
 

Krishna Mukherjee trolled for sharing bikini photo from honeymoon netizens said bangali urfi javed
Author
First Published Mar 30, 2023, 4:01 PM IST | Last Updated Mar 30, 2023, 4:01 PM IST

ಹಿಂದಿ ಟಿವಿ ಧಾರಾವಾಹಿ ನೋಡುವವರಿಗೆ ಕೃಷ್ಣಾ ಮುಖರ್ಜಿ (Krishna Mukherjee) ಚಿರಪರಿಚಿತರು. ಅದರಲ್ಲಿಯೂ ಯೇ ಹೈ ಮೊಹಬ್ಬತೇನ್ ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿಯೀಕೆ.  ಅವರ ವೈಯಕ್ತಿಕ ಜೀವನದ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಅವರು ಬಹಳ ಚರ್ಚೆಯಲ್ಲಿದ್ದಾರೆ.  ಕೃಷ್ಣಾ ಅವರು ತಮ್ಮ  ಬಹುಕಾಲದ ಗೆಳೆಯ ಚಿರಾಗ್ ಬಟ್ಲಿವಾಲಾ (Chirag Batliwala) ಅವರನ್ನು ಕೆಲವು ಸಮಯದ ಹಿಂದೆ ವಿವಾಹವಾಗಿದ್ದಾರೆ. ಸದ್ಯ ಈ ಜೋಡಿ ಹನಿಮೂನ್​ ಖುಷಿಯಲ್ಲಿದೆ.  ಹನಿಮೂನ್​ನಲ್ಲಿದ್ದರೂ ಸೋಷಿಯಲ್​ ಮೀಡಿಯಾವನ್ನು ಕೃಷ್ಣಾ ಅವರು ಬಿಟ್ಟಿಲ್ಲ.  ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಕೃಷ್ಣಾ, ಹನಿಮೂನ್​  ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದೇ ಈಗ ಬಹಳ ಟ್ರೋಲ್​ ಆಗುತ್ತಿದೆ.  ಇದರಿಂದ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕೃಷ್ಣಾ.

ಅಷ್ಟಕ್ಕೂ ಹನಿಮೂನ್​ ಫೋಟೋ ಶೇರ್​ (Photo Share) ಮಾಡಿಕೊಂಡರೆ ಟ್ರೋಲ್​ಗೆ ಒಳಗಾಗುವುದು ಏಕೆ ಎಂದು ಕೇಳಬಹುದು. ಇಲ್ಲೇ ಇರೋದು ಅಸಲಿ ಕಾರಣ. ಹನಿಮೂನ್​ ವೇಳೆ ಕೃಷ್ಣಾ ಬಿಕಿನಿ ಡ್ರೆಸ್​ ಧರಿಸಿದ್ದಾರೆ. ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಇತ್ತೀಚಿನ ದಿನಗಳಲ್ಲಿ ನಟಿಯರು ತಮ್ಮೆಲ್ಲಾ ದೇಹವನ್ನು ಪ್ರದರ್ಶನ ಮಾಡುತ್ತಾ ಜಾಲತಾಣದಲ್ಲಿ ಫೋಟೋ ಶೇರ್​ ಮಾಡಿಕೊಳ್ಳುತ್ತಿರುವುದಾದಗಲೀ ಅಥವಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ವಿಷಯವೇನಲ್ಲ. ಪೈಪೋಟಿಗೆ ಬಿದ್ದವರಂತೆ ನಟಿಯರು ದೇಹ ಪ್ರದರ್ಶನಕ್ಕೆ ಇಂತು ಮುಂದಾಗುತ್ತಿದ್ದಾರೆ. ಆದರೆ ದುರದೃಷ್ಟವಶಾತ್​ ಕೆಲವರು ಟ್ರೋಲ್​ಗೆ ಒಳಗಾಗುತ್ತಾರೆ.

NANI: 20 ವರ್ಷ ಹಿರಿಯವರಾದ್ರೂ ನಟಿ ಶ್ರೀದೇವಿ ಜೊತೆ ಡೇಟಿಂಗ್​ ಆಸೆಯಿತ್ತು ಎಂದ ನಟ

ಇದಕ್ಕೆ ಕಾರಣವೂ ಇದೆ. ಸೀದಾ ಸಾದಾ ಡ್ರೆಸ್​ ಮೂಲಕ ಅಭಿಮಾನಿಗಳನ್ನು ಗಳಿಸಿರುವಾಗ, ಈ ರೀತಿ ಡ್ರೆಸ್​ ಧರಿಸಿದಾಗ ತಮ್ಮ ನೆಚ್ಚಿನ ನಾಯಕಿಯನ್ನು ಈ ರೀತಿ ನೋಡಲು ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ. ಎಲ್ಲರಿಗಿಂತ ಭಿನ್ನ ಎಂದು ತಮ್ಮದೇ ಒಂದು ಪರಿಕಲ್ಪನೆಯನ್ನು ಅಭಿಮಾನಿಗಳು (Fans) ಹೊಂದಿರುತ್ತಾರೆ. ಇಂಥ ಡ್ರೆಸ್​ ಧರಿಸಿದಾಗ ಅದು ಅಶ್ಲೀಲತೆ ಎಂದು ಎನಿಸುವುದು ಉಂಟು. ಇದೇ ಕಾರಣಕ್ಕೆನಟಿ ಕೃಷ್ಣಾ ಮುಖರ್ಜಿಯನ್ನು ಫ್ಯಾನ್ಸ್​ ಸಕತ್​ ಟ್ರೋಲ್​ ಮಾಡುತ್ತಿದ್ದಾರೆ.
 
ಈ ಫೋಟೋಗಳಲ್ಲಿ ಕೃಷ್ಣಾ ಬಹಳ ಆಕರ್ಷಕವಾಗಿ ಕಾಣುತ್ತಿದ್ದಾರೆ ಎಂದು ಕೆಲವರು ಹೇಳುವುದೂ ಉಂಟು. ನಟಿ ಹಸಿರು ಬಣ್ಣದ ಬಿಕಿನಿ ಸೆಟ್ ಧರಿಸಿದ್ದು, ಫೋಟೋಗಳಲ್ಲಿ ಅವರು ಸನ್ ಬಾತ್ ಮಾಡುತ್ತಿರುವುದನ್ನು ನೋಡಬಹುದು.  ವಿವಿಧ  ಭಂಗಿಗಳಲ್ಲಿ ಇವರು ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಬಿಕಿನಿಯಲ್ಲಿಯೇ ಸಾಕಷ್ಟು ಫೋಟೋಗಳನ್ನು ಅವರು ಶೇರ್​ ಮಾಡಿದ್ದಾರೆ. ಆದರೆ, ಹೆಚ್ಚಿನ ಅಭಿಮಾನಿಗಳು ಕೃಷ್ಣಾ ಮುಖರ್ಜಿ ಅವರ ಈ ನೋಟವನ್ನು  ಇಷ್ಟಪಡುತ್ತಿಲ್ಲ.  ಇದರಿಂದಾಗಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.  ನೀವು  'ಬಂಗಾಳಿ ಉರ್ಫಿ' (Bengali Urfi) ಥರ ಕಾಣಿಸುತ್ತಿದ್ದೀರಿ ಎಂದು ಬಂಗಾಳಿ ಮೂಲದ ನಟಿ ಕೃಷ್ಣಾ ಅವರನ್ನು ಉರ್ಫಿ ಜಾವೇದ್​ಗೆ ಕೆಲವರು ಹೋಲಿಸಿದ್ದಾರೆ.  

ಇನ್ನು ಕೆಲವರು, 'ರೀ ಮೇಡಂ... ಸ್ವಲ್ಪನಾದರೂ ನಿಮ್ಮ ಬಗ್ಗೆ ನಾಚಿಕೆಪಡಿರಿ' ಎಂದು ಬರೆದಿದ್ದಾರೆ. ಅದೇ ರೀತಿ ಮತ್ತೊಬ್ಬ ಬಳಕೆದಾರ, 'ಯಾವ ಮದುವೆಯಾದ ಹುಡುಗಿ ಇಂತಹ ಬಟ್ಟೆಗಳನ್ನು ಧರಿಸುತ್ತಾಳೆ' ಎಂದು ಪ್ರಶ್ನಿಸಿದ್ದಾರೆ. ಇವರ ಈ ಫೋಟೋಗೆ ಕಿಡಿ ಕಾರಿರುವ ಕೆಲವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ದೇಹ ಪ್ರದರ್ಶನವಂತೂ ಮಾಡಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾಯ್ತು, ಈಗ ಹನಿಮೂನ್​ ವಿಡಿಯೋ ಮಾತ್ರ ಶೇರ್​ ಮಾಡಬೇಡಿ ಪ್ಲೀಸ್​ ಎಂದಿದ್ದರೆ, ಅದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದು, ಅದಾದರೂ ಮಾಡಿದ್ದರೆ ಚೆನ್ನಾಗಿ ವೈರಲ್​ ಆಗ್ತಿತ್ತು ಎಂದು ಕಾಲೆಳಿದಿದ್ದಾರೆ.

Vivian Dsena: 'ಮತಾಂತರವಾಗಿದ್ದೇನೆ, ಪ್ರಶ್ನೆ ಕೇಳಬೇಡಿ ಪ್ಲೀಸ್​...' ಎಂದ ನಟ ವಿವಿಯನ್​
 
ಅಂದಹಾಗೆ, ಕೃಷ್ಣಾ ಮುಖರ್ಜಿ ಮತ್ತು ಚಿರಾಗ್ ಬಟ್ಲಿವಾಲಾ ತಮ್ಮ ಹನಿಮೂನ್‌ಗಾಗಿ ಫ್ರಾನ್ಸ್‌ನ ಪ್ರಸ್ಲಿನ್‌ಗೆ ಹೋಗಿದ್ದಾರೆ.  ನಟಿ ಬಿಕಿನಿ ಫೋಟೋ ಮಾತ್ರವಲ್ಲದೇ  ಪತಿಯೊಂದಿಗೆ ಅನೇಕ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಹೆಚ್ಚಿನ ಫೊಟೋಗಳಲ್ಲಿ ನಟಿ ಗಂಡನ ಮೇಲೆ ಪ್ರೀತಿಯನ್ನು ಸುರಿಸುತ್ತಿರುವುದು ಕಂಡುಬಂದಿದೆ. ಆದರೆ ಗಮನ ಹೋಗಿರುವುದು  ಕೃಷ್ಣಾ ಮತ್ತು ಚಿರಾಗ್ ಅವರ ಬಟ್ಟೆಗಳ ಮೇಲೆ.  ನಟಿ ನೇರಳೆ ಬಣ್ಣದ ಟಾಪ್ ಮತ್ತು ಶಾರ್ಟ್ಸ್ ಧರಿಸಿದ್ದರು. ಮತ್ತೊಂದೆಡೆ, ಚಿರಾಗ್ ಕೂಡ ಅದೇ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಫೋಟೋಗಳಲ್ಲಿ ಕೃಷ್ಣಾ ಮತ್ತು ಚಿರಾಗ್ ಅವರನ್ನು ನೋಡಿದ ಅಭಿಮಾನಿಗಳು ಇಬ್ಬರನ್ನೂ ಕ್ಯೂಟ್ ಕಪಲ್ ಎಂದು ಟ್ಯಾಗ್ ಮಾಡಿದ್ದಾರೆ. ಇದಲ್ಲದೆ, ಬಹಳಷ್ಟು ಹೃದಯ ಮತ್ತು ಬೆಂಕಿಯ ಎಮೋಜಿಗಳನ್ನು ಸಹ ಫೋಟೋಗಳಲ್ಲಿ ಕಳುಹಿಸಲಾಗಿದೆ.

Latest Videos
Follow Us:
Download App:
  • android
  • ios