ಕಾಲಿವುಡ್‌ ಚಿತ್ರರಂಗದಲ್ಲಿ ನೇಮ್‌ ಮತ್ತು ಫೇಮ್‌ ಎರಡನ್ನೂ ಸಮಾನವಾಗಿಗಳಿಸಿರುವ ನಟ ವಿಶಾಲ್‌ ಈಗ ಒಂದಾದ ಮೇಲ್ಲೊಂದು ಎಡವಟ್ಟಿನಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.  ಇತ್ತೀಚಿಗೆ ಮ್ಯಾನೇಜರ್‌ ರಮ್ಯಾ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಅದರ ಬೆನ್ನಲ್ಲೇ ಮ್ಯಾನೇಜರ್‌ಗೂ ಅಪಾಯ ತಂದಿಟ್ಟಿದೆ.

ನಟ ವಿಶಾಲ್‌ಗೆ ವಂಚನೆ ಮಾಡಿದ ಮಹಿಳೆ; 45 ಲಕ್ಷ ಕುಟುಂಬಸ್ಥರ ಖಾತೆಯಲ್ಲಿ!

ವಿಶಾಲ್ ಫಿಲ್ಮಂ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಎಂಬ ಮಹಿಳೆ ಆರು ವರ್ಷಗಳಿಂದ ಯಾರಿಗೂ ಟಿಡಿಎಸ್ ಹಣ ನೀಡದೆ ವಂಚಿಸಿದ್ದಾರೆ. ಒಟ್ಟು 45 ಲಕ್ಷ ರೂಪಾಯಿಗಳನ್ನು ನೇರವಾಗಿ ತಮ್ಮ ಕುಟುಂಬಸ್ಥರ ಖಾತೆಗೆ  ರವಾನೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಕಟ್ಟುವ ವೇ ಮ್ಯಾನೇಜರ್‌  ಹರಿಕೃಷ್ಣ ಅವರ ಗಮನಕ್ಕೆ ರಮ್ಯಾ ಮಾಡಿರುವ ವಂಚನೆ ಬೆಳಕಿಗೆ ಬಂದಿತ್ತು, ವಿಚಾರ ತಿಳಿಯುತ್ತಿದ್ದಂತೆ ನಟಿ ರಮ್ಯಾ ಪರಾರಿ ಆಗಿದ್ದಾರೆ. 

ಮ್ಯಾನೇಜರ್ ಕಾರಿಗೆ ಹಾನಿ:

ಹರಿಕೃಷ್ಣ ದೂರು ನೀಡಿದ ವಿಚಾರ ತಿಳಿಯುತ್ತಿದಂತೆ ರಮ್ಯಾ ಪರಾರಿ ಆಗಿದ್ದಾರೆ. ಇದಾದ ಕೆಲ ದಿನಗಳ ನಂತರ ಪ್ರೊಡಕ್ಷನ್ ಹೌಸ್ ಮ್ಯಾನೇಜರ್ ಕಾರಿಗೆ ಹಾನಿಯಾಗಿದೆ. ಕೊಡಂಬಕ್ಕಂನ ನಿವಾಸ ಎದುರು ನಿಲ್ಲಿಸಿದ್ದ ಕಾರಿನ ಗ್ಲಾಸನ್ನು ಯಾರೋ ಪುಡಿ ಪುಡಿ ಮಾಡಿದ್ದಾರೆ. ಪರಾರಿ ಆಗಿರುವ ರಮ್ಯಾಗೂ ಇದಕ್ಕೂ ಸಂಬಂಧವಿದೆಯಾ ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಈ ಹಿಂದೆ ರಮ್ಯಾ, ನಟ ವಿಶಾಲ್ ಮತ್ತು ಮ್ಯಾನೇಜರ್ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ. ಇವರಿಬ್ಬರು ಅವ್ಯವಹಾರದಲ್ಲಿ ತೊಡಗಿಕೊಂಡು ಹಣ ಸಂಪಾದಿಸುತ್ತಿದ್ದಾರೆ ತನ್ನ ಬಳಿ ಈ ಬಗ್ಗೆ ಸಾಕಷ್ಟು ಸಾಕ್ಷಿ ಇದೆ ಎಂದು ಹೇಳಿದ್ದಾರೆ ಅಷ್ಟಲ್ಲದೆ ವಿಶಾಲ್ ಗೂಂಡಗಳನ್ನು ಕಳುಹಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.  ಈ ಕಾರಣಕ್ಕೆ ವಿಶಾಲ್ ಮತ್ತು ಮ್ಯಾನೇಜರ್ ಹರಿ ಅವರಿಂದ ಜೀವ ಬೆದರಿಕೆ ಇದೆ ಎಂದು ಪೊಲೀಸರ ರಕ್ಷಣೆ ಕೇಳಿಕೊಂಡಿದ್ದಾರೆ.

ದಿನೇ ದಿನೆ ವಿಭಿನ್ನ ತಿರುವು ಪಡೆದುಕೊಳ್ಳುತ್ತಿರವ ಕಾರಣ ಪೊಲೀಸರು  ಹೆಚ್ಚಿನ ನಿಗ ವಹಿಸಿ ತನಿಖೆ ಪ್ರಾರಂಭಿಸಿದ್ದಾರೆ.