2017ರಲ್ಲಿ '8 ತೊಟ್ಟಕ್ಕಲ್'  ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೀರಾ ಮಿಥುನ್‌ ಮಾಡಿರುವ ಆರೋಪ ಇಡೀ ಚಿತ್ರರಂಗಕ್ಕೆ ಅಚ್ಚರಿ ಉಂಟು ಮಾಡಿದೆ.  ನಿಜಕ್ಕೂ ರಜನಿಕಾಂತ್ ಮತ್ತು ವಿಜಯ್, ಮೀರಾ ಮಾನಹಾನಿ ಮಾಡಲು ಯತ್ನಿಸಿದ್ದರೇ ? 

ಮೀರಾ ಟ್ಟೀಟ್:

'ತಮಿಳು ನಾಡು ಜನರು ನನ್ನನ್ನು ಬಾಯ್ಕಾಟ್‌ ಮಾಡಿದ್ದಕ್ಕೆ ಇಂದು ನಾನು ಸೂಪರ್ ಮಾಡಲ್ ಆಗಿರುವುದು. ಅದು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವುದು. ಕಾಲಿವುಡ್‌ ಚಿತ್ರರಂಗ ನನ್ನನ್ನು ದಿಕ್ಕರಿಸಿರುವುದಕ್ಕೆ ನಾನು ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವುದು. ಇಷ್ಟೆಲ್ಲಾ ಆದರೂ ತಮಿಳು ನಾಡಿನ ಜನರು ನನ್ನ ಹಿಂದೆ ಬಿದ್ದು ನನ್ನ ಬಗ್ಗೆ ಗಾಸಿಪ್ ಮಾಡುವುದನ್ನು ಬಿಟ್ಟಿಲ್ಲ.  ಕಿರುಕುಳ ನೀಡುವುದೇ ನಿಮ್ಮ ಕೆಲಸವೇ ?' ಎಂದು ಬರೆದ  ಮೊದಲ ಟ್ಟೀಟ್‌ ವೈರಲ್ ಆಗುತ್ತಿದ್ದಂತೆ ಇದಕ್ಕೆ ಕಾರಣರಾದ ನಟರ ಹೆಸರನ್ನು ಬಹಿರಂಗಪಡಿಸಿದ್ದಾರೆ.

 

ತಮಿಳು ಜನರಿಗೆ ಗೌರವವಿಲ್ಲ:

'ತಮಿಳುನಾಡಿನಲ್ಲಿ ಹಿಂದುಗಳಿಗೆ ಗೌರವ ನೀಡಬೇಕು ಆದರೆ ಇಲ್ಲಿ ಮಲಯಾಳಿ ಮತ್ತು ಕ್ರಿಶ್ಚಿಯನ್‌ಗಳ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಇತರರಿಗೆ ಅನ್ಯಾಯ ಮಾಡುತ್ತಿದ್ದಾರೆ.Why are they still behind my ass? ಮೊದಲು ಇದನ್ನು ಮಟ್ಟಹಾಕಬೇಕು' ಎಂದು ಬರೆದುಕೊಂಡಿದ್ದಾರೆ.

 

ರಜನಿ-ವಿಜಯ್ ಹೆಸರು:

'ತಮಿಳುನಾಡು ಸಾಯುತ್ತಿದೆ, ಎಲ್ಲರೂ ಎದ್ದೇಳಿ ನಿಮ್ಮ ಜೀವ ಉಳಿಸಿಕೊಳ್ಳಿ. ನನ್ನ ಬಗ್ಗೆ ಗಾಸಿಪ್‌ಗಳನ್ನು ಬರೆದು ಜೀವನ ಹಾಳು ಮಾಡುವುದರಿಂದ ಯಾವ ಪ್ರಯೋಜನವಿಲ್ಲ. ನನ್ನ ಕುಂಡಿ ತುಂಬಾ ದುಬಾರಿ ಮತ್ತು ಸೇಫ್‌ ಜಾಗದಲ್ಲಿ ಉತ್ತಮ ಜೀವನ ನೋಡುತ್ತಿದೆ. ರಜನಿಕಾಂತ್ (ಕನ್ನಡ) ಮತ್ತು ವಿಜಯ್ ದಳಪತಿ (ಕ್ರಿಸ್ಚಿಯನ್) ಇವರು ನನ್ನ ಮಾನಹಾನಿ ಮಾಡಲು ತುಂಬಾನೇ ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಸೈಬರ್‌ ಮಹಿಳಾ ಹರಾಸ್ಮೆಂಟ್‌ ಆಕ್ಟ್‌ ಮೊರೆ ಹೋಗುತ್ತೇನೆ' ಎಂದು ಟ್ಟೀಟ್ ಮಾಡಿದ್ದಾರೆ.

ನಟ ಪೊನ್ನಂಬಲ ನೆರವಿಗೆ ನಿಂತ ಸೂಪರ್ ಸ್ಟಾರ್ ರಜನಿ..! 

ನೆಟ್ಟಿಗರು ಗರಂ:

ರಜನಿಕಾಂತ್ ಮತ್ತು ವಿಜಯ್ ಹೆಸರು ಬಳಸಿರುವುದಕ್ಕೆ ಅಭಿಮಾನಿಗಳು ಕಿಡಿ ಕಾಡಿದ್ದಾರೆ. ಮಾಡಲ್ ಕಮ್ ನಟಿ ಮೀರಾ ಮಿಥುನ್ ರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಮೀರಾ ಬರೆದ ಪ್ರತಿ ಸಾಲಿನಲ್ಲೂ 'ಕುಂಡಿ' ಪದ ಬಳಸಿರುವುದಕ್ಕೆ ಅಶ್ಲೀಲ ಪದಗಳು ಬೇಕಾ? ನೀವು ಅಷ್ಟು ಸಾಚಾ ಆಗಿದ್ದರೆ ಮೊದಲು ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.