ಟಾಪ್‌ ನಟಿಯರ ಲಿಸ್ಟ್‌ನಲ್ಲಿದ ಕೀರ್ತಿ ಇದ್ದಕ್ಕಿದ್ದಂತೆ ಫ್ಲಾಪ್ ನಟಿ ಪಟ್ಟಿಗೆ ಸೇರಲು ಕಾರಣವೇನು? 

ಬಹುಭಾಷಾ ನಟಿ, ಮಹಾನಟಿ ಕೀರ್ತಿ ಸುರೇಶ್‌ (Keerthy Suresh) ಸಣ್ಣ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಪಟ್ಟಿಯಲ್ಲಿರುವ ಸುಂದರಿ. ಒಂದು ಸಿನಿಮಾಗಾಗಿ ಎರಡು ಸಿನಿಮಾ ಕೈ ಬಿಟ್ಟು, ಈಗ ಫ್ಲಾಪ್ ನಟಿಯರ ಪಟ್ಟಿ ಸೇರಿಕೊಂಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ (Social Media) ಕೀರ್ತಿ ವೃತ್ತಿ ಜೀವನದ ಬಗ್ಗೆ ಚರ್ಚೆ ಹೆಚ್ಚಾಗಿದೆ. 

ಇತ್ತೀಚಿಗೆ ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಬಿಡುಗಡೆ ಆದ 'ಜಾತಿ ರತ್ನಲು' (Jathi Rathna) ಸಿನಿಮಾದಲ್ಲಿ ಕೀರ್ತಿ ಸಣ್ಣ ಪಾತ್ರ ಮಾಡಿದ್ದರು. ನಾಗ ಅಶ್ವಿನ್ (Nag Ashwin) ನಿರ್ದೇಶನ ಮಾಡಿರುವ ಈ ಚಿತ್ರ ಹಳ್ಳಿ ಹುಡುಗನ ಕಥೆ ಹೇಳುತ್ತದೆ. ಕೆಲಸ ಹುಡುಕಿಕೊಂಡು ಪೇಟೆಗೆ ಬರುವ ಹುಡುಗ ಮೊಬೈಲ್ (Mobile) ಕಳೆದುಕೊಂಡು, ಮಿನಿಸ್ಟರ್‌ ಕೈಯಲ್ಲಿ ಸಿಕ್ಹಾಕಿಕೊಂಡು, ಹೇಗೆ ಪಜೀತಿ ಪಡುತ್ತಾನೆ ಅನ್ನೋದೇ ಕಥೆ. ಹಲವು ಸಿನಿಮಾಗಳಲ್ಲಿ ಈ ಕಾನ್ಸೆಪ್ಟ್‌ (Concept) ಈಗಾಗಲೇ ಬಳಸಿರುವ ಕಾರಣ ಸಿನಿಮಾ ವೀಕ್ಷಕರ ಗಮನ ಸೆಳೆಯಲಿಲ್ಲ. So....ಕೀರ್ತಿ ಸಿನಿಮಾ ಫ್ಲಾಪ್.

Rajinikanth ಸಹೋದರಿ ಪಾತ್ರ ಮಾಡಲು ಕೀರ್ತಿ ಸುರೇಶ್ ಪಡೆದ ಸಂಭಾವನೆ ಇಷ್ಟು!

ಕೊರೋನಾ (Covid19) ಮೊದಲ ಅಲೆ ಸಮಯದಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ಕೀರ್ತಿ ನಟನೆಯ 'ಪೆಂಗ್ವಿನ್' (Penguin) ಸಿನಿಮಾ ರಿಲೀಸ್ ಆಗಿತ್ತು. ಕೀರ್ತಿ ಮೊದಲ ಮಗುವನ್ನು ಕಿಡ್ನ್ಯಾಪ್ (Kidnap) ಮಾಡಲಾಗುತ್ತದೆ. ಸಣ್ಣ ಸುಳಿವೂ ಇಲ್ಲದೆ ಕೀರ್ತಿ ಹೇಗೆ ತನ್ನ ಮಗನನ್ನು ಹುಡುಕುತ್ತಾಳೆ ಅನ್ನೋದು ಕಥೆ. ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಐವರು ನಿರ್ದೇಶಕರಿದ್ದಾರೆ. 3.5/5 ರೇಟಿಂಗ್ ಪಡೆದುಕೊಂಡು ಫ್ಲಾಪ್‌ ಲಿಸ್ಟ್‌ ಸೇರಿಕೊಂಡಿತ್ತು.

ಕೊರೋನಾ ಎರಡನೇ ಅಲೆ ಸಮಯದಲ್ಲಿ ಮಿಸ್ ಇಂಡಿಯಾ (Miss India) ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆ ಕಂಡಿತ್ತು. ಭಾರತ ಖ್ಯಾತ ಉದ್ಯಮಿ ಬ್ಯುಸಿನೆಸ್ ಮಾಡಲು ಯಎಸ್‌ಎಗೆ (USA) ತೆರಳಿದಾಗ ಹೇಗೆ ಸೆಕ್ಸಿಸಮ್‌, ಕ್ರಿಟಿಸಿಸಮ್ ಮತ್ತು ರೈವರ್ಲಿ ಎದುರಿಸಬೇಕು ಎನ್ನುವುದು ಈ ಸಿನಿಮಾ. ಅದು ಟೀ (Tea) ವ್ಯಾಪಾರ ಶುರು ಮಾಡಲು ನಿರ್ಧಾರ ಮಾಡಿದ್ದಾಗ. ನರೇಂದ್ರ ನಾಥ್ (Narendra Nath) ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಮಹೇಶ್ ಬಂಡವಾಳ ಹಾಕಿದ್ದಾರೆ. ಸಿನಿಮಾ ತೆಲುಗು ಭಾಷೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಆದರೆ 3/5 ಪಡೆದುಕೊಂಡ ಕಾರಣ ಹಿಂದಿಯಲ್ಲಿ ಡಬ್ ಮಾಡಿದ್ದರು. ಆಗ 2/5 ಪಡೆದು ಮತ್ತೆ ಫ್ಲಾಪ್ ಪಟ್ಟಿ ಸೇರಿತ್ತು.

ನಟನೆ ಜೊತೆ ಬ್ಯುಸಿನೆಸ್ ಶುರು ಮಾಡಿದ ಕೀರ್ತಿ ಸುರೇಶ್

ಜನವರಿ 28,2022ರಲ್ಲಿ ಗುಡ್‌ ಲಕ್ ಶಶಿ (Good Luck Shashi) ಸಿನಿಮಾ ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಕೀರ್ತಿ ಜೊತೆ ಆದಿ, ಜಗಪತಿ ಬಾಬು (Jagapathi Babu) ನಟಿಸಿದ್ದಾರೆ. ಹಳ್ಳಿ ಹುಡುಗಿ ಶಶಿಯನ್ನು ಅನಿಷ್ಠ ಎಂದು ಇಡೀ ಊರು ಕರೆಯುತ್ತದೆ ಆದರೆ ಊರಿಗೆ ಒಂದು ದಿನ ಮಿಲಿಟ್ರಿ ಅವರು ಆಗಮಿಸಿ ಅದಲ್ಲಿದ್ದ ಹೆಣ್ಣು ಮಕ್ಕಳಿಗೆ ಶಾರ್ಪ ಶೂಟಿಂಗ್ ಹೇಳಿಕೊಡುತ್ತಾರೆ ಆಗ ಅದೇ ಸಮಯಲ್ಲಿ ನಟ ಆಗಮಿಸಿ ಆಕೆಯ ಪ್ರತಿಭೆ ಗುರುತಿಸಿ ಕ್ರೀಡೆಯಲ್ಲಿ ಭಾಗವಹಿಸಲು ಸಹಾಯ ಮಾಡುತ್ತಾರೆ. ಚಾಂಪಿಯನ್ ಶಿಪ್ ಟ್ರೋಫಿ ಪಡೆದುಕೊಂಡು ಇಡೀ ಊರಿಗೆ ಶೂಟಿಂಗ್ ಹೇಳಿಕೊಟ್ಟು ಲಕ್ಕಿ ಹುಡುಗಿ ಆಗುತ್ತಾರೆ. ಇಷ್ಟೇ ಸಿನಿಮಾ ಕತೆ ಆಗಿದ್ದು, 2.5/5 ಪಡೆದುಕೊಂಡಿದೆ. ಹೀಗಾಗಿ ಕೀರ್ತಿ ಲಿಸ್ಟ್‌ಗೆ ಮತ್ತೊಂದು ಫ್ಲಾಪ್ ಸಿನಿಮಾ ಸೇರಿಕೊಂಡಿದೆ.

ತಲೈವಾ ರಜನಿಕಾಂತ್ (Rajanikanth) ಜೊತೆ ನಟಿಸಬೇಕು ಎಂದು ಕೀರ್ತಿ ಅಣ್ಣಾಥೆ (Annaatthe) ಸಿನಿಮಾ ಒಪ್ಪಿಕೊಂಡರು. ಈ ವೇಳೆ ಹಿಟ್ ಆಗುವಂತ ಎರಡು ಸಿನಿಮಾಗಳ ಕೈ ಬಿಟ್ಟರು. ಅದರೆ ಅಣ್ಣಾಥೆ ದೊಡ್ಡ ಫ್ಲಾಪ್ ಆಯ್ತು. ಅದಲ್ಲದೆ ಮೋಹನ್ ಲಾಲ್ (Mohanlal) ಜೊತೆ ಮರಕ್ಕರ್ (Marakkar) ಸಿನಿಮಾದಲ್ಲಿ ನಟಿಸಿದ್ದರು, ಆಸ್ಕರ್‌ನಲ್ಲಿ ಸಿನಿಮಾ ಪ್ರದರ್ಶನವಾದರೂ ನಿರ್ಮಾಪಕರಿಗೆ ಹಾಕಿದ ಬಂಡವಾಳ ಬಾರದ ಫ್ಲಾಪ್ ಆಗಿತ್ತು.