ಕಾಲಿವುಡ್‌ ಲೋಕದ ಸುಂದರಿ ಕಾಜಲ್‌ ಅಗರ್ವಾಲ್ ವೃತ್ತಿ ಜೀವನದಲ್ಲಿ ಮರೆಯಲಾಗದ ಕಹಿ ಘಟನೆಯೊಂದು ನಡೆದಿದೆ. ಅದು ಇಂಡಿಯಾ 2 ಶೂಟಿಂಗ್‌ ಸೆಟ್‌ನಲ್ಲಿ. ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಹೌದು. ಕಮಲ್ ಹಾಸನ್‌ ಹಾಗೂ ಕಾಜಲ್‌ ಅಗರ್ವಾಲ್‌ ಅಭಿನಯದ ಇಂಡಿಯಾ 2 ಚಿತ್ರ ಶೂಟಿಂಗ್‌ ಸೆಟ್‌ನಲ್ಲಿ ಕೆಲವು ದಿನಗಳ ಹಿಂದೆ 150 ಅಡಿ ಎತ್ತರದ ಕ್ರೇನ್‌ ಕುಸಿದು, ಈ ದುರ್ಘನೆಯಲ್ಲಿ ಮೂವರ ಅಸುನೀಗಿದರು. ನಟಿ ಕಾಜಲ್‌ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಈ ಘಟನೆ ಕಣ್ಣೆದುರೇ ನಡೆದ ಕಾರಣ ಕಾಜಲ್‌ ಮನಸ್ಸು ಕದಡಿದೆ. ಮನಸ್ಸಿಗೆ ನೋವಾಗಿದೆ.

ಸಿಂಗಾಪೂರ್‌ನಲ್ಲಿ ಅನಾವರಣಗೊಂಡಿತು ರಣಧೀರ ಚೆಲುವೆ ಮೇಣದ ಪ್ರತಿಮೆ

ಈ ಘಟನೆ ಬಳಿಕ ಕಾಜಲ್‌ ಎಲ್ಲಿಯೂ ಹೋಗುತ್ತಿಲ್ಲವಂತೆ. ಚಿತ್ರತಂಡದವರು ನೀಡಿರುವ ಮಾಹಿತಿ ಪ್ರಕಾರ ಕಾಜಲ್‌ ಕೆಲವು ದಿನಗಳ ಕಾಲ ಶೂಟಿಂಗ್‌ಗೂ ಬರುವುದಿಲ್ಲ. ಮನೆಯಿಂದ ಹೊರ ಬರಲು ಹೆದರುತ್ತಿದ್ದಾರಂತೆ. ಆದರೆ ಗಟ್ಟಿ ಮನಸ್ಸು ಮಾಡಿ, ಮಹಾ ಶಿವರಾತ್ರಿಯಂದು ಇಶಾ ಪೌಂಡೇಷನ್‌ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲೂ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದು, ತುಸು ನಿರಾಳವಾದಂತೆ ಕಾಣಿಸುತ್ತಾರೆ.

ಮೂವತ್ತಾದರೂ ಮದುವೆ ಆಗಿಲ್ಲ; ಫ್ಯಾನ್ಸ್‌ಗೆ ಕಾಜಲ್‌ ಅಗರ್ವಾಲ್‌ ಖಡಕ್‌ ಉತ್ತರ!

ಇನ್ನು 34 ವರ್ಷಕ್ಕೆ ಕಾಲಿಟ್ಟಿರುವ ಕಾಜಲ್‌ಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆಯೂ ಇದೆ. ಪೋಷಕರು ಗಂಡು ಹುಡುಕುತ್ತಿದ್ದಾರಂತೆ! ಆದರೆ ಕಾಜಲ್‌ ಉದ್ಯಮಿಯೊಬ್ಬರ ಜೊತೆ ಓಡಾಡುತ್ತಿದ್ದಾರೆಂಬ ಗುಸು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಈ ನಟಿಗೆ ಒಳ್ಳೆಯದಾಗಲಿ....

ಫೆಬ್ರವರಿ 28ರ ಟಾಪ್ 10 ಸುದ್ದಿಗಾಗಿ  ಇಲ್ಲಿ ಕ್ಲಿಕ್ ಮಾಡಿ: