ಕಾಲಿವುಡ್‌ ಸೂಪರ್‌ ಸ್ಟಾರ್‌ ಸೂರ್ಯ ಹಾಗೂ ಪತ್ನಿ ಜೋತಿಕಾ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಈ ಕಾಲಿವುಡ್‌ ನ ಆದರ್ಶ  ದಂಪತಿಗಳು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. 

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಜೋತಿಕಾ ಈ ಹಿಂದೆ ಪಾಲ್ಗೊಂಡ  ಅವಾರ್ಡ್ ಕಾರ್ಯಕ್ರಮದಲ್ಲಿ ಹಿಂದೂ  ದೇವಾಲಯ ಹಾಗೂ ಸಂಪ್ರದಾಯಗಳ ಬಗ್ಗೆ ಬೋಲ್ಡ್‌ ಹೇಳಿಕೆ ನೀಡಿ ವಿವಾದಕ್ಕೆ  ಗುರಿಯಾಗಿದ್ದಾರೆ.  ರಾಜಕಾರಣಿಗಳು ಅಥವಾ ಸೆಲೆಬ್ರಿಟಿಗಳು ತಾವು ಮಾಡಿದ ಪಾಪ ಕರ್ಮಗಳಿಗೋ ಅಥವಾ ಪುಣ್ಯಕ್ಕೋ, ಅಂದುಕೊಂಡ ಕೆಲಸ ನೆರವೇರಲಿ ಎಂದು ಹುಂಡಿಗೆ ಲಂಚದ ರೀತಿಯಲ್ಲಿ ಹಣ ಹಾಕುತ್ತಾರೆ. ಅದರ ಬದಲು ಆಸ್ಪತ್ರೆಗೆ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಿ ಎಂದು ಹೇಳಿರುವ ವಿಡಿಯೋ ಈಗ ವೈರಲ್‌ ಆಗುತ್ತಿದ್ದು ಕೆಲ ಅಭಿಮಾನಿಗಳಿಗೆ  ಜೋತಿಕಾಳ  ನೇರ ಮಾತು ಹಿಂದೂ ಧರ್ಮಕ್ಕೆ ಮಾಡಿದ  ಅವಮಾನದ ರೀತಿ ಕಾಣಿಸಿದೆ.

ಚಿತ್ರರಂಗ ಕಾರ್ಮಿಕರಿಗೆ 10 ಲಕ್ಷ ರೂ ಪರಿಹಾರ ನೀಡಿದ ಕಾಲಿವುಡ್‌ ಬ್ರದರ್ಸ್!

ಅಷ್ಟೇ ಅಲ್ಲದೆ ' ಹಿಂದಿನ ಕಾಲದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಯಾಕೆ ಅಷ್ಟೊಂದು ಹಣ ಖರ್ಚು ಮಾಡಿದ್ದಾರೆ ಎಂದು ಯೋಚಿಸುತ್ತಲೇ  ಇರುವೆ' ಎಂದು ಮಾತನಾಡಿದ್ದಾರೆ.  ಜೋತಿಕಾಳ ಮಾತು ಕೇಳಿ ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಕ್ಷಮೆ ಕೇಳಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.ಈ ಮಧ್ಯೆ ಎಲ್ಲೆಡೆ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಜೋತಿಕಾ ಪತಿ ನಟ ಸೂರ್ಯ 10ಲಕ್ಷ ರೂ. ನೇರವು ನೀಡಿದ್ದಾರೆ.