ಆಕ್ಷನ್ ಹೀರೋ ಅಜಿತ್ ಅಂದ್ರೆ ಡಿಶ್ಯೂಂ ಡಿಶ್ಯೂಂ ಸಿನಿಮಾಗಳ ಜೊತೆಗೇ 'ವಿಸ್ವಾಸಂ'ನಂಥಾ ತಂದೆ ಪ್ರೀತಿಯ ಸಿನಿಮಾಗಳೂ ನೆನಪಾಗ್ತವೆ. ಇವತ್ತು 51ನೇ ವರ್ಷದ ಹ್ಯಾಪಿ ಬರ್ತ್ ಡೇ ಆಚರಿಸಿಕೊಳ್ತಿರೋ ಅಜಿತ್ ಪ್ರೇಮ ಕಥೆ ಸಖತ್ ಇಂಟರೆಸ್ಟಿಂಗ್. 

ಶಾಲಿನಿ.. ಕ್ಯೂಟ್ ಲುಕ್‌, ಚಂದದ ಆಕ್ಟಿಂಗ್ ಮೂಲಕ ತಮಿಳು ಸಿನಿಮಾ ಇಂಡಸ್ಟ್ರಿ ಮನಸ್ಸು ಗೆದ್ದ ಚೆಲುವೆ. ಆದರೆ ಈ ಗುಳಿ ಕೆನ್ನೆ ಚೆಲುವೆಯ ಮನ ಕದ್ದ ಹುಡುಗನೂ ಚಿತ್ರರಂಗದವನೇ. ಆತ ಮತ್ಯಾರೂ ಅಲ್ಲ, ಇಂದು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿರುವ ಅಜಿತ್. ಇಂದು ಅಜಿತ್ ಅವರ ಹ್ಯಾಪಿ ಬರ್ತ್ ಡೇ. ಐವತ್ತೊಂದನೇ ವಯಸ್ಸಿಗೆ ಈ ಸ್ಟಾರ್ ನಟ ಅಡಿ ಇಡುತ್ತಿದ್ದಾರೆ.

'ನನ್ನ ಸಿನಿಮಾವನ್ನು ಹೊಗಳೋರೂ ಇದ್ದಾರೆ, ಟೀಕಿಸೋರೂ ಇದ್ದಾರೆ. ಆದರೆ ನನ್ನ ಸಿನಿಮಾಗಳಿಗೆ ಒಬ್ಬ ವರ್ಸ್ಟ್ ಕ್ರಿಟಿಕ್ ಇದ್ದಾರೆ. ಅವರು ಮಾಡೋ ಟೀಕೆಯನ್ನು ಜೀರ್ಣಿಸಿಕೊಳ್ಳೋಕೆ ತುಂಬ ಟೈಮ್ ಬೇಕು.ಆ ದೊಡ್ಡ ವ್ಯಕ್ತಿ ನಮ್ಮನೇಲೇ ಇದ್ದಾರೆ. ಆಕೆಯೇ ನನ್ ಹೆಂಡ್ತಿ ಶಾಲಿನಿ' ಅಂತ ಹೆಂಡತಿ ಕಾಲೆಳೀತಾರೆ ಅಜಿತ್. ಇಲ್ಲಿ ಅಜಿತ್ ಅವರ ಮಾತು ಬರೀ ತಮಾಷೆನಾ ಅಂದರೆ ಖಂಡಿತಾ ಅಲ್ಲ. ಸಿನಿಮಾ ರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಶಾಲಿನಿ ಸದ್ಯಕ್ಕೆ ಚಿತ್ರರಂಗದಿಂದ ದೂರ ಇದ್ದಾರೆ. ಆದರೆ ಒಳ್ಳೆ ಸಿನಿಮಾಗಳ ನಾಡಿಮಿಡಿತ ಅವರಿಗೆ ಚೆನ್ನಾಗಿ ಗೊತ್ತಾಗುತ್ತೆ. ಸಿನಿಮಾ ಅಂತ ಬಂದಾಗ ಇದು ಅಜಿತ್ ಸಿನಿಮಾ ಅಂತ ಯಾವ ಕರುಣೆಯನ್ನೂ ತೋರದೇ ಆಕೆ ವಿಮರ್ಶೆ ಮಾಡುತ್ತಾರೆ. ಸಿನಿಮಾದ ಕೆಲವು ಡೈಲಾಗ್ ಇಟ್ಟುಕೊಂಡು ದಿನ ಇಡೀ ಗಂಡನ ಕಾಲೆಳೆಯುತ್ತಾ ರೇಗಿಸುತ್ತಿರುತ್ತಾರೆ. ಇದನ್ನೆಲ್ಲ ಅಜಿತ್ ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


ಕರಿಷ್ಮಾ ಕಪೂರ್ ಮತ್ತೆ ಮದುವೆಯಾಗುತ್ತಾರಾ? 2ನೇ ಮದುವೆ ಬಗ್ಗೆ ನಟಿ ಹೇಳಿದ್ದಿಷ್ಟು

ಈ ಮಧ್ಯ ವಯಸ್ಸಿನಲ್ಲಿ ಹೀಗೆಲ್ಲ ಕಾಲೆಳೆದುಕೊಂಡು ನಗುತ್ತಿರುವ ಈ ದಂಪತಿ ಒಂದು ಕಾಲದ ಅಪ್ಪಟ ಪ್ರೇಮಿಗಳು. ಅದು 1999ನೇ ಇಸವಿ. 'ಅಮರಕಾಲಮ್' ಅನ್ನೋ ರೊಮ್ಯಾಂಟಿಕ್ ಸಿನಿಮಾ ಆಗಷ್ಟೇ ಸೆಟ್ಟೇರಿತ್ತು. ಆ ಚಿತ್ರದ ನಾಯಕ ಅಜಿತ್, ನಾಯಕಿ ಶಾಲಿನಿ. ಆಗ ಏನು ನಡೀತು ಅನ್ನೋ ಇಂಟರೆಸ್ಟಿಂಗ್ ಸ್ಟೋರಿಯನ್ನು ಅಜಿತ್ ಬಾಯಿಯಿಂದಲೇ ಕೇಳಿ;

'ಅಮರಕಾಲಮ್ ಸಿನಿಮಾದ ನಿರ್ಮಾಪಕರು ಈ ಸಿನಿಮಾದಲ್ಲಿ ನಟಿಸೋದಕ್ಕೆ ಅಂತ ನಟಿ ಶಾಲಿನಿ ಅವರನ್ನು ಮಾತನಾಡಿಸಿದಾಗ ಆಕೆ ನಂಗೆ ಸಿನಿಮಾ ನಟನೆಯಲ್ಲಿ ಆಸಕ್ತಿಯೇ ಹೊರಟು ಹೋಗಿದೆ ಅಂತಾರೆ. ಆದರೆ ನಿರ್ಮಾಪಕರಿಗೆ ಶಾಲಿನಿ ಅವರೇ ಆ ಪಾತ್ರ ಮಾಡಬೇಕೆಂಬ ಆಸೆ. ಅವರು ನನ್ನ ಹತ್ರ ವಿನಂತಿ ಮಾಡ್ತಾರೆ, ನೀವೊಮ್ಮೆ ಶಾಲಿನಿ ಅವರನ್ನು ಮಾತಾಡಿಸಿ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಸೋಕೆ ಆಗುತ್ತಾ ಅಂತ. ನಾನೂ ಒಂದು ಟ್ರೈ ಮಾಡೋಣ ಅಂತ ಶಾಲಿನಿಗೆ ಕಾಲ್ ಮಾಡಿದೆ. ನಾನು ಅಜಿತ್ ಕುಮಾರ್ ಅಂತ. ನನಗೆ ನಿಮ್ಮ ಜೊತೆಗೆ ಈ ಸಿನಿಮಾದಲ್ಲಿ ನಟಿಸಬೇಕು ಅಂತಿದೆ. ನಿರ್ಮಾಪಕರೂ ಕೇಳ್ಕೊಳ್ತಾ ಇದ್ದಾರೆ ಅಂದೆ.

ಯುದ್ಧ ಪೀಡಿತ ಉಕ್ರೇನ್‌ಗೆ ಭೇಟಿ ನೀಡಿದ ಹಾಲಿವುಡ್ ಸ್ಟಾರ್ ಏಂಜಲಿನಾ ಜೋಲಿ

ಆ ಕಡೆಯಿಂದ ಶಾಲಿನಿ, ಇಲ್ಲ, ನಂಗೆ ಸಿನಿಮಾದಲ್ಲಿ ನಟಿಸೋಕೆ ಇಷ್ಟ ಇಲ್ಲ. ನಾನು ಓದ್ಬೇಕು' ಅಂದರು. ಸರಿ ಹಾಗಾದ್ರೆ ಅಂತ ನಾನು ಸುಮ್ನಾದೆ. ಆದರೆ ನಿರ್ಮಾಪಕರು ಬಿಡಲಿಲ್ಲ. ಅವಳ ಬೆನ್ನು ಬಿದ್ದು ಈ ಸಿನಿಮಾದಲ್ಲಿ ನಟಿಸುವಂತೆ ಮಾಡಿದರು. ಬಹುಶಃ ನಾವು ಹೀಗೆ ಭೇಟಿ ಆಗೋದು ವಿಧಿ ಲಿಖಿತ ಇರ್ಬೇಕು.. ಸೆಟ್ ನಲ್ಲಿ ಆಕೆಯನ್ನು ನೋಡಿದ ತಕ್ಷಣವೇ ಬೇರೆ ಯಾವ ಹುಡುಗಿಯಲ್ಲೂ ಹುಟ್ಟದ ಭಾವ ಆಕೆಯ ಬಗ್ಗೆ ಹುಟ್ಟಿತು. ಮೊದಲ ಶಾಟ್ ನಾವಿಬ್ಬರೂ ಜೊತೆಯಾಗಿ ನಟಿಸಬೇಕಿತ್ತು. ಆಕಸ್ಮಿಕವಾಗಿ ನಾನು ಅವಳ ಮುಂಗೈ ಮೇಲೆ ಗಾಯ ಮಾಡಿದೆ. ಆದರೆ ಆಕೆ ತಲೆ ಕೆಡಿಸಿಕೊಳ್ಳದೇ ಆಕ್ಟಿಂಗ್ ಮುಂದುವರಿಸಿದಳು. ಆ ಹಂತದಲ್ಲಿ ಆಕೆ ಸೀನ್‌ಗಾಗಿ ಅಳುತ್ತಿದ್ದಾಳೆ, ಅಂದುಕೊಂಡೆ, ಅವಳು ನಿಜಕ್ಕೂ ಅಳುತ್ತಿದ್ದಳು. ನನಗೆ ಹೃದಯವೇ ಕರಗಿದಂಥಾ ಫೀಲ್. ಅವಳನ್ನು ಸಮಾಧಾನಿಸಿದೆ. ಅಲ್ಲಿಂದ ನಮ್ಮಿಬ್ಬರ ನಡುವೆ ಹೊಸ ಬಂಧ ಬೆಳೆಯಿತು. ಆಪ್ತರಾಗುತ್ತಾ ಹೋದ ನಾವು ಪ್ರೇಮಿಗಳಾದೆವು. ಮದುವೆಯೂ ಆದೆವು. ಈಗ ಇಬ್ಬರು ಮಕ್ಕಳ ಪೇರೆಂಟ್ಸ್ ಆಗಿದ್ದೇವೆ' ಅಂತ ನಗುತ್ತಾರೆ ಅಜಿತ್.

ಇಂಥಾ ಫ್ಯಾಮಿಲಿ ಮ್ಯಾನ್ ಅಜಿತ್ ಕುಮಾರ್‌ಗೆ ಮತ್ತೊಮ್ಮೆ ಹ್ಯಾಪಿ ಬರ್ತ್ ಡೇ.

ಬಲವಂತವಾಗಿ ತುಟಿಗೆ ಕಿಸ್ ಮಾಡಲು ಯತ್ನಿಸಿದ; ನಟ ವಿಜಯ್ ವಿರುದ್ಧ ಮತ್ತೊಬ್ಬ ಮಹಿಳೆ ದೂರು