ಹಾಲಿವುಡ್‌ನ ಖ್ಯಾತ ನಟಿ ಏಂಜಲಿನಾ ಜೋಲಿ(Angelina Jolie) ಯುದ್ಧ ಪೀಡಿತ ಉಕ್ರೇನ್‌ನ(Ukraine) ಲೀವ್ ನಗರಕ್ಕೆ ಭೇಟಿ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ಉಕ್ರೇನ್ ನಲ್ಲಿ ಕಾಣಿಸಿಕೊಂಡ ಏಂಜಲಿನಾ ಜೋಲಿ ನೋಡಿ ವಿಶ್ವವೇ ಬೆರಗಾಗಿದೆ. ಉಕ್ರೇನ್ ನಾಗರೀಕರನ್ನು ಭೇಟಿಯಾಗಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

ಹಾಲಿವುಡ್‌ನ ಖ್ಯಾತ ನಟಿ ಏಂಜಲಿನಾ ಜೋಲಿ(Angelina Jolie) ಯುದ್ಧ ಪೀಡಿತ ಉಕ್ರೇನ್‌ನ(Ukraine) ಲೀವ್ ನಗರಕ್ಕೆ ಭೇಟಿ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ಉಕ್ರೇನ್ ನಲ್ಲಿ ಕಾಣಿಸಿಕೊಂಡ ಏಂಜಲಿನಾ ಜೋಲಿ ನೋಡಿ ವಿಶ್ವವೇ ಬೆರಗಾಗಿದೆ. ಉಕ್ರೇನ್ ನಾಗರೀಕರನ್ನು ಭೇಟಿಯಾಗಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಕಾಫಿ ಶಾಪ್ ಒಂದರಲ್ಲಿ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದೆ. ಯುದ್ಧಪೀಡಿತ ಪ್ರದೇಶದಿಂದ ಸ್ಥಳಾಂತರಗೊಂಡಿರುವ ನಿರಾಶ್ರಿತರ ತಾಣಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ಮಾತನಾಡಿದ್ದಾರೆ. ರೈಲ್ವೆ ನಿಲ್ದಾಣ, ಗಾಯಗೊಂಡ ಮಕ್ಕಳನ್ನು ಏಂಜಲಿನಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಧೈರ್ಯ ತುಂಬಿದ್ದಾರೆ.

46 ವರ್ಷದ ನಟಿ ಏಂಜಲಿನಾ ಜೋಲಿ 2011ರಿಂದ ಯುನೈಟೆಡ್ ನೇಷನ್ಸ್ ನಿರಾಶ್ರಿತರ ಏಜೆನ್ಸಿಯ ವಿಶೇಷ ಪ್ರತಿನಿಧಿಯಾಗಿದ್ದಾರೆ. ಇದರ ಪ್ರಕಾರ 12.7 ಮಿಲಿಯನ್‌ಗೂ ಅಧಿಕ ಜನರು ಮನೆತೊರೆದಿದ್ದಾರೆ ಎಂದು ವರದಿ ನೀಡಿದೆ. ಏಂಜಲಿನಾ ಜೋಲಿ ನಿರಾಶ್ರಿತರ ತಾಣದ ಸ್ವಯಂಸೇವಕರನ್ನು ಭೇಟಿಯಾಗಿದ್ದಾರೆ. ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದ ಪ್ರಕಾರ ಮನೋವೈದ್ಯರು ಪ್ರತೀದಿನ 15 ಜನರ ಜೊತೆಗೆ ಮಾತನಾಡುತ್ತಾರೆ ಎಂದು ಜೋಲಿಗೆ ಹೇಳಿದರು. ನಿರಾಶ್ರಿತರ ತಾಣದಲ್ಲಿ ಇರುವ ಹೆಚ್ಚಿನವರು 2 ರಿಂದ 10 ವರ್ಷದ ಮಕ್ಕಳು ಎಂದು ಅಲ್ಲಿನ ಸ್ವಯಂಸೇವಕರು ಏಂಜಲಿನಾ ಜೋಲಿ ಅವರಿಗೆ ಮಾಹಿತಿ ನೀಡಿದ್ದಾರೆ.

Most Admired Women 2021- ಏಂಜಲೀನಾ ಜೋಲಿ ಜೊತೆ ಸ್ಥಾನ ಪಡೆದ ಐಶ್ವರ್ಯಾ, ಪ್ರಿಯಾಂಕಾ!

ಆಗ ಮಾತನಾಡಿದ ಏಂಜಲಿನಾ, 'ಅವರು ಆಘಾತಕ್ಕೊಳಗಾಗಿದ್ದಾರೆ. ಆಘಾತ ಮಕ್ಕಳಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂದು ನನಗೆ ಗೊತ್ತಿದೆ. ಅವರ ದನಿ ಎಷ್ಟು ಮುಖ್ಯ ಎನ್ನುವುದು ನನಗೆ ಗೊತ್ತಿದೆ. ಅವರ ಜೊತೆ ಯಾರಾದರೂ ಇರುವುದು ತುಂಬಾ ಮುಖ್ಯಾ. ಅವರನ್ನು ಸಹಜ ಸ್ಥಿತಿಗೆ ತರುವುದು ಎಷ್ಟು ಕಷ್ಟ ಎನ್ನುವುದು ಗೊತ್ತು' ಎಂದು ಹಾಲಿವುಡ್ ಸ್ಟಾರ್ ಹೇಳಿದ್ದಾರೆ. ಏಂಜಲಿನಾ ನಿರಾಶ್ರಿತರ ತಾಣಕ್ಕೆ ಭೇಟಿ ಮಾಡುತ್ತಿದ್ದಂತೆ ಅಲ್ಲಿನ ಮಗುವನ್ನು ಮುದ್ದಾಡಿದ್ದಾರೆ. ಏಂಜಲಿನಾ ನೋಡಿ ಆ ಮಗು ಸಂತೋಷದಿಂದ ನಕ್ಕಿದೆ. ಬಳಿಕ ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮತ್ತೆ ಬರುವುದಾಗಿ ಹೇಳಿ ಅಲ್ಲಿಂದ ಹೊರಟಿದ್ದಾರೆ.

Scroll to load tweet…

ಜೋಲಿ ನಿರಾಶ್ರಿತರ ತಾಣದಲ್ಲಿರುವಾಗಲೇ ಆಗಸದಲ್ಲಿ ದಾಳಿಯ ಸಾಧ್ಯತೆಯ ಸೈರನ್ ಮೊಳಗಿದ್ದರಿಂದ ಜೋಲಿ ಮತ್ತು ಅವರ ಸಹವರ್ತಿಗಳು ಕೂಡಲೇ ಅಲ್ಲಿಂದ ಹೊರಟರು. ವಿಶೇಷ ರಾಯಭಾರಿಯಾಗಿರುವ ಏಂಜಲಿನಾ ಅವರು ಕಳೆದ ತಿಂಗಳು ಯೆಮೆನ್‌ಗೆ ಭೇಟಿ ನೀಡಿದ್ದರು. ಅಲ್ಲಿಯೂ ಯುದ್ಧದಿಂದಾಗಿ ಮಿಲಿಯನ್ ಗಟ್ಟಲೇ ಜನ ಮನೆ ತೊರೆದಿದ್ದಾರೆ.

6 ಮಕ್ಕಳ ತಾಯಿಯಾದ್ರೂ ನಾನು ಪರ್ಫೆಕ್ಟ್ ಅಮ್ಮನಲ್ಲ ಎಂದ ನಟಿ ಏಂಜಲೀನಾ

ಉಕ್ರೇನ್ ಗೆ ಭೇಟಿ ನೀಡಿರುವುದರಲ್ಲಿ ಏಂಜಲಿನಾ ಮಾತ್ರವಲ್ಲ ಈ ಮೊದಲು ಮತ್ತೋರ್ವ ಹಾಲಿವುಡ್ ಸ್ಟಾರ್ ಭೇಟಿ ನೀಡಿದ್ದರು. ಅಲ್ಲದೆ ಸಾಕಷ್ಟು ಮಂದಿ ಯುದ್ಧ ಪೀಡಿತ ಉಕ್ರೇನ್‌ ನಿರಾಶ್ರಿತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ವಿಶ್ವದಾದ್ಯಂತ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ. ಈ ಮೊದಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಯುಕ್ರೇನ್ ನಿರಾಶ್ರಿತರ ಪರ ನಿಂತಿದ್ದರು. ಮಕ್ಕಳ ರಕ್ಷಣೆಗೆ ಸಹಾಯಮಾಡುವಂತೆ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಮನವಿ ಮಾಡಿದ್ದರು.