ಸ್ಟಾರ್ ನಟ ಎನ್ನುವುದಕ್ಕಿಂತಲೂ ತನ್ನ ಸರಳತೆ ಹಾಗೂ ವಿನಯತೆಯಿಂದ ಜನರ ಮನಸ್ಸಿನಲ್ಲಿ ಮನೆ ಮಾಡಿರುವ ಕಾಲಿವುಡ್‌ ನಟ ಅಜಿತ್ ಕೆಲ ದಿನಗಳಿಂದ ಆಟೋದಲ್ಲಿ ಓಡಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಬೈಕ್‌ ಪಕ್ಕಕ್ಕಿಟ್ಟು ಸೈಕಲ್ ಏರಿದ ನಟ ಅಜಿತ್; 30 ಸಾವಿರಕ್ಕೂ ಅಧಿಕ ಕಿಮೀ. ಸವಾರಿ! 

ಸ್ಪೋರ್ಟ್ಸ್ ಬೈಕ್, ಐಷಾರಾಮಿ ಕಾರುಗಳನ್ನು ಹೊಂದಿರುವ ನಟ ಅಜಿತ್ ಇದ್ದಕ್ಕಿದ್ದಂತೆ ಆಟೋ ಬಳಸಿದ್ದು ಯಾಕೆ? ಎಂದು ಕೆಲ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಿಖರವಾದ ಕಾರಣವಿಲ್ಲ ಆದರೆ ಅಜಿತ್ ಶ್ರೀಸಾಮಾನ್ಯನಂತೆ ಜೀವನ ನಡೆಸಲು ಇಷ್ಟ ಪಡುವ ವ್ಯಕ್ತಿ ಎಂದು ಮಾತ್ರ ಹೇಳಬಹುದು.  ಸೈಕಲ್ ರೈಡ್‌ ಬೈಕ್‌ ರೈಡ್‌ ಎಂದು ಸಾವಿರಾರು ಕಿಲೋ ಮೀಟರ್ ಊರೂರು ಸುತ್ತಾಡುತ್ತಿರುವ ನಟನನ್ನು ಆಟೋದಲ್ಲಿ ನೋಡಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. 

ಟ್ಟಿಟರ್‌ನಲ್ಲಿ ಅಜಿತ್ ಫೋಟೋ ಶೇರ್ ಮಾಡಿಕೊಂಡು # ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಅಲ್ಲದೆ ಇತ್ತೀಚಿಗೆ ನಡೆದ 46ನೇ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅಜಿತ್ 6 ಚಿನ್ನದ ಪದಕಗಳನ್ನು ಗೆದಿದ್ದಾರೆ. ಅಜಿತ್ ಸಾಧನೆಗೆ ಅಭಿಮಾನಿಗಳಿಂದ ಅಭಿನಂದನೆ ಹರಿದುಬಂದಿದೆ. 

ರಸ್ತೆ ಬದಿ ಇಡ್ಲಿ ಮಾರುತ್ತಿದ್ದ ವ್ಯಕ್ತಿಗೆ 1 ಲಕ್ಷ ರೂ ನೀಡಿದ ಅಜಿತ್, ಕಾರಣ ಸಖತ್ ಟ್ರೆಂಡಿಂಗ್! 

ಇನ್ನು ಅಜಿತ್ ಬಹುನಿರೀಕ್ಷಿತ ಸಿನಿಮಾ 'ವಲಿಮೈ' ಬಿಡುಗಡೆದೆ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಹೇಳುವ ಪ್ರಕಾರ 'ವಲಿಮೈ' ಪ್ರಚಾರಕ್ಕೆ ಅಜಿತ್ ಆಟೋ ಸವಾರಿ ಮಾಡಿದ್ದರು ಎಂದು. ಆದರೆ ಸತ್ಯ ಏನೆಂದು ಅಜಿತ್ ಸ್ಪಷ್ಟನೆ ನೀಡಿದ ಬಳಿಕ ತಿಳಿದು ಬರುತ್ತದೆ.