ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ ಕುಮಾರ್​ ಆಸ್ಪತ್ರೆಗೆ ದಾಖಲು: ತೂಕ ಇಳಿಸಿಕೊಂಡದ್ದೇ ಕಾರಣವಾಯ್ತಾ?  

ತಮಿಳು (Tamil) ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಖ್ಯಾತಿ ಪಡೆದಿರುವ ನಟ ಅಜಿತ್ ಕುಮಾರ್​ ಇನ್ನೆರಡು ತಿಂಗಳಿನಲ್ಲಿ ಅಂದ್ರೆ ಮೇ ತಿಂಗಳಿನಲ್ಲಿ 53 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ವಯಸ್ಸಿನಲ್ಲಿಯೂ ಟಾಲಿವುಡ್​ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ ನಟ ಅಜಿತ್​. ಸದ್ಯ ಇವರು, ತಮ್ಮ 62ನೇ ಚಿತ್ರ ‘ವಿದಾ ಮುಯರ್ಚಿ’ (Vidaa Muyarchi) ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಮಾಗಿಳ್ ತಿರುಮೇನಿ ನಿರ್ದೇಶಿಸುತ್ತಿದ್ದಾರೆ. ಇದರ ಒಂದು ವಿಶೇಷತೆ ಎಂದರೆ, ಚಿತ್ರಕ್ಕಾಗಿ ನಟ ತಮ್ಮ 15 ಕೆ.ಜಿ ತೂಕವನ್ನು ಇಳಿಸಿಕೊಂಡಿರುವ ವಿಷಯ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಇದರ ನಡುವೆಯೇ ಇದೀಗ ಆತಂಕ ವಿಷಯವೊಂದು ತಿಳಿದುಬಂದಿದೆ. ಅದೇನೆಂದರೆ, ಅಜಿತ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಎದುರಾದ ಆರೋಗ್ಯ ಸಮಸ್ಯೆ ಏನೆಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅವರ ಎಲ್ಲಾ ಚಿತ್ರಗಳ ಶೂಟಿಂಗ್​ ನಿಲ್ಲಿಸಲಾಗಿದೆ. 

ಫೋನೇ ಬಳಸದ ಸೂಪರ್​ಸ್ಟಾರ್​ ಅಜಿತ್​ 15 ಕೆಜಿ ತೂಕ ಕಳೆದುಕೊಂಡ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

ಅಜಿತ್, ಕೆಲವು ದಿನಗಳ ಹಿಂದೆಯಷ್ಟೆ ಪತ್ನಿ ಹಾಗೂ ಕುಟುಂಬದ ಆಪ್ತರೊಡನೆ ತಮ್ಮ ಪುತ್ರನ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಅಜಿತ್, ತಮ್ಮ ವಾರಗೆಯ ಇತರೆ ನಟರಂತಲ್ಲದೆ ವೈಯಕ್ತಿಕ ಆರೋಗ್ಯ, ವೈಯಕ್ತಿಕ ಹವ್ಯಾಸಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೈಕರ್ ಸಹ ಆಗಿರುವ ಅಜಿತ್ ಕುಮಾರ್, ದೇಶ-ವಿದೇಶಗಳಲ್ಲಿ ಬೈಕಿಂಗ್ ಮಾಡಿದ್ದಾರೆ. ಶಿಸ್ತಿನ ಜೀವನ ಮಾಡುತ್ತಿರುವ ಅಜಿತ್​ಗೆ ಹಠಾತ್ತನೆ ಏನಾಯ್ತು ಎಂಬುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಸೈಕಲ್, ಬೈಕ್ ಏರಿ ಏಕಾಏಕಿ ನೂರಾರು ಕೀಲೋ ಮೀಟರ್ ಪ್ರವಾಸ ಮಾಡುವ ಅಜಿತ್ ಅವರಿಗೆ ಏನಾಯಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ ಫ್ಯಾನ್ಸ್​. ಚಿತ್ರಕ್ಕಾಗಿ ಏಕಾಏಕಿ ಇಷ್ಟೊಂದು ತೂಕ ಇಳಿಸಿಕೊಂಡಿರುವುದೇ ಕಾರಣವಾಯ್ತಾ ಎಂಬುದು ಹಲವರ ಪ್ರಶ್ನೆ. ಅಜಿತ್ ಆಗಾಗ್ಗೆ ಅವರು ವೈದ್ಯರನ್ನು ಭೇಟಿ ಮಾಡಿ, ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಅದರಲ್ಲೂ ಬೈಕ್ ಸವಾರಿಗೆ ಹೊರಟರೆ, ಅದಕ್ಕೂ ಮುನ್ನ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಾರಂತೆ. ಹೀಗಿರುವಾಗಿ ತೂಕಕಳೆದುಕೊಂಡದ್ದೇ ಕಾರಣವಾಗಿರಬಹುದೇ ಎನ್ನುವ ಚರ್ಚೆ ಶುರುವಾಗಿದೆ.

ಅಷ್ಟಕ್ಕೂ ಅಜಿತ್​ ಅವರು, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ತಾಧವು ಚಿತ್ರದಲ್ಲಿ ಗಡ್ಡವನ್ನು ಬೆಳೆಸಿದ್ದರು. ಮಾತ್ರವಲ್ಲದೇ ತೂಕವನ್ನೂ ಹೆಚ್ಚಿಸಿಕೊಂಡಿದ್ದರು. ಇದೀಗ ಮುಂಬರುವ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ತಾವು ತೂಕ ಇಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ನಟ, ಮಾಂಸಹಾರ ತ್ಯಜಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಾವು ಹೆಚ್ಚಾಗಿ ಮಾಂಸಾಹಾರವನ್ನೇ ಸೇವಿಸುತ್ತಿದ್ದು, ಈಗ ತೂಕ ಇಳಿಸಿಕೊಳ್ಳಲು ಸಸ್ಯಾಹಾರದ ಮೊರೆ ಹೋಗಿರುವುದಾಗಿ ಹೇಳಿದ್ದಾರೆ. ಹಸಿರೆಲೆ ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಅಗತ್ಯ ವ್ಯಾಯಾಮ ಮಾಡಿದ್ದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಚಿಕ್ಕ ವಯಸ್ಸಲ್ಲೇ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಆರಾಧ್ಯ ಬಚ್ಚನ್​? ಐಶ್​ ಪುತ್ರಿಯ ಕುರಿತು ಏನಿದು ಸುದ್ದಿ?

ಅಷ್ಟಕ್ಕೂ ಇವರ ಕುರಿತು ಇನ್ನೊಂದು ಇಂಟರೆಸ್ಟಿಂಗ್ ವಿಷಯ ಇದೆ. ಅದೇನೆಂದರೆ, ಅಜಿತ್​ ಅವರು ಮೊಬೈಲ್​ ಫೋನ್​ ಬಳಸುವುದೇ ಇಲ್ಲ ಎನ್ನುವುದು. ಇವರ ಬಳಿ ಇದುವರೆಗೂ ಒಂದೇ ಒಂದು ಮೊಬೈಲ್​ ಫೋನ್​ ಇಲ್ಲ. ಇದು ಅವರಿಗೆ ಇಷ್ಟವಿಲ್ಲವಂತೆ. ಇವರನ್ನು ಯಾರಾದರೂ ಸಂಪರ್ಕಿಸುವುದಾದರೆ, ಅವರ ಆಪ್ತರ ಬಳಿ ಹೇಳಬೇಕಷ್ಟೇ. ಇದು ತುಂಬಾ ವಿಚಿತ್ರ ಎನಿಸಿದರೂ ನಿಜವೂ ಹೌದು. ನನಗೆ ಇದರಲ್ಲಿ ಆಸಕ್ತಿ ಇಲ್ಲ ಎನ್ನುತ್ತಾರೆ ನಟ. ಪೊನ್ನಿಯಿನ್ ಸೆಲ್ವನ್ ಪ್ರಚಾರದ ವೇಳೆ ಈ ಕುರಿತು ನಟಿ ತ್ರಿಶಾ ಕೂಡ ಮಾತನಾಡಿದ್ದರು. ಅಜಿತ್ ಕುಮಾರ್ ಹೆಸರನ್ನು ನಿಮ್ಮ ಮೊಬೈಲ್​ನಲ್ಲಿ ಏನೆಂದು ಸೇವ್ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ಉತ್ತರ ಕೊಟ್ಟಾಗಲೇ ಅಜಿತ್​ ಅವರು ಫೋನ್​ ಬಳಸುವುದಿಲ್ಲ ಎನ್ನುವ ವಿಷಯ ಬಹಿರಂಗಗೊಂಡಿತ್ತು. ನಟಿ ತಮಗೆ ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅಜಿತ್ ತಮ್ಮ ಬಳಿ ಫೋನ್ ಹೊಂದಿಲ್ಲ ಎಂದಿದ್ದರು. ನಾನು ಅವರೊಂದಿಗೆ ಮಾತಾಬೇಕು ಅಂದ್ರೆ ಮೊದಲು ಅವರ ಆಪ್ತರನ್ನು ಸಂಪರ್ಕಿಸಬೇಕು ನಟಿ ಹೇಳಿದ್ದರು. ಅಜಿತ್ ಫೋನ್ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಅಜಿತ್ ಕುಮಾರ್ ಅವರು ಭಾರತದ ಐರನ್ ಮ್ಯಾನ್​ನಂತೆ ಎಂದು ನಟಿ ಹೇಳಿದ್ದರು. ಇದೀಗ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದಾರೆ.