ಕೋಲ್ಕತ್ತಾದಲ್ಲಿ ಅಲ್ಲು ಅರ್ಜುನ್ ಹವಾ! ಪುಷ್ಪ ಸಿನಿಮಾ ನೋಡಿದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಮಾಡಿದ ಕಿತಾಪತಿ ನೋಡಿ...
ಟಾಲಿವುಡ್ ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿರುವ ಪುಷ್ಪ ದಿ ಫೈಯರ್ ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ ಕೋಟಿಗಟ್ಟಲೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಸಿನಿಮಾ ಕ್ರೇಜ್ ಹೆಚ್ಚಾಗುತ್ತಿದ್ದಂತೆ ನಿರ್ದೇಶಕರು ಭಾಗ ಎರಡು ಮಾಡಲು ಮುಂದಾಗಿದ್ದಾರೆ. ಕಲಾವಿದರ ಸಂಭಾವನೆ ಮಾತುಕತೆ ನಡೆಸಿ ಚಿತ್ರೀಕರಣ ಆರಂಭಿಸಿದ್ದಾರೆ.
ಪುಷ್ಪ ಸಿನಿಮಾದಲ್ಲಿ ಸಿನಿ ರಸಿಕರ ಗಮನ ಸೆಳೆದಿದ್ದು ಅಲ್ಲು ಅರ್ಜುನ್ ಪ್ರತಿಯೊಂದು ಡೈಲಾಗ್. ಹಾಡುಗಳು ಸೂಪರ್ ಹಿಟ್ ಅದರ ಬಗ್ಗೆ ಮಾತನಾಡುವುದೇ ಬೇಡ ಆದರೆ ಡೈಲಾಗ್ ಹವಾ ಇನ್ನೂ ಕಮ್ಮಿ ಆಗಿಲ್ಲ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಮಾತ್ರ ಹಿಟ್ ಅಂದುಕೊಳ್ಳಬೇಡಿ ಕೋಲ್ಕತ್ತಾದಲ್ಲೂ ಹವಾ ಜೋರಾಗಿದೆ ಎನ್ನುವದಕ್ಕೆ ಸಾಕ್ಷಿ ಇಲ್ಲಿದೆ.
ವೆಸ್ಟ್ ಬೆಂಗಾಲ್‌ನಲ್ಲಿ 10ನೇ ತರಗತಿ ಪರೀಕ್ಷೆ ಮಾರ್ಚ್7 ರಿಂದ ಆರಂಭವಾಗಿ ಮಾರ್ಚ್ 16ರ ವರೆಗೂ ನಡೆದಿದೆ. ಮೌಲ್ಯಮಾಪನ ಪ್ರಕ್ರಿಯೆ ಶುರುವಾಗಿದ್ದು ಒಬ್ಬ ವಿದ್ಯಾರ್ಥಿ ಪುಷ್ಪ ಸಿನಿಮಾದ ಡೈಲಾಗ್ ಬರೆದಿದ್ದಾನೆ. ಉತ್ತರ ಪತ್ರಿಕೆಯ ಉತ್ತರ ಬರೆಯದೆ ಉದ್ದಕ್ಕೂ ದೊಡ್ಡದಾಗಿ ದಪ್ಪ ಅಕ್ಷರಗಳಲ್ಲಿ ಬರೆದಿರು ಪುಷ್ಪ ಡೈಲಾಗ್ ನೋಡಿ ಶಿಕ್ಷಕರು ಶಾಕ್ ಆಗಿದ್ದಾರೆ ತಕ್ಷಣವೇ ಫೋಟೋ ಕ್ಲಿಕ್ ಮಾಡಿಕೊಂಡು ಸಂಬಂದಪಟ್ಟ ಅಧಿಕಾರಿಗಳ ಬೆಳಕಿಗೆ ತಂದಿದ್ದಾರೆ. ಫೋಟೋದಲ್ಲಿ ಇರುವ ಪ್ರಕಾರ 'Pushpa Pushpa raz apum likhega nahi sala' ಎಂದ ಯುವಕ ಬರೆದಿದ್ದಾನೆ.
Allu Arjun Birthday; ವಿದೇಶಕ್ಕೆ ಹಾರಿದ ಸ್ಟೈಲಿಶ್ ಸ್ಟಾರ್, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಇಂದು (ಏಪ್ರಿಲ್ 8) ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ಅಲ್ಲು ಅರ್ಜುನ್ ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಅಲ್ಲು ಅರ್ಜುನ್ ಕುಟುಂಬದ ಜೊತೆ ಯೂರೋಪ್ ನಲ್ಲಿದ್ದಾರೆ.ಅಲ್ಲು ಅರ್ಜುನ್ ಸದ್ಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ ಪಾರ್ಟ್-2 ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಬಂದಿದ್ದ ಫಹಾದ್, ಪಾರ್ಟ್-2ನಲ್ಲಿ ಅಬ್ಬರಿಸಲಿದ್ದಾರೆ. ಪುಷ್ಪ ಸಿನಿಮಾ ಬಳಿಕ ಅಲ್ಲು ಅರ್ಜುನ್ ಮಾರುಕಟ್ಟೆ ಕೂಡ ದೊಡ್ಡದಾಗಿದೆ. ಹಿಂದಿಯಲ್ಲೂ ಅತೀ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.
ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ರಶ್ಮಿಕಾ ಮಂದಣ್ಣ ಅಭಿನಯ ಮಾತ್ರವಲ್ಲ ಡ್ಯಾನ್ಸ್‌ನಲ್ಲೂ ಸೂಪರ್ ಎಂದು ಪ್ರೂವ್ ಮಾಡಿದ್ದಾರೆ. ಅವರ ಸಾಮಿ ಸಾಮಿ ಡ್ಯಾನ್ಸ್ ಮಕ್ಕಳು, ಹಿರಿಯರೆನ್ನದೆ ಎಲ್ಲರಿಗೂ ಫೇವರೇಟ್ ಆಗಿಬಿಟ್ಟಿದೆ.. ಈ ಹಾಡು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟ್ರೆಂಡ್ ಆಗಿದೆ.ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ಸ್ಟೆಪ್ ಹಾಕಿ ಟ್ರೆಂಡ್‌ಗೆ ಜೊತೆಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಸಾಮಿ ಸಾಮಿ ಡ್ಯಾನ್ಸ್ ಅತ್ತುತ್ತಮ ರೀತಿಯಲ್ಲಿ ನೀಡಲು ದೀರ್ಘ ಗಂಟೆಗಳ ಕಾಲ ಪ್ರಾಕ್ಟೀಸ್ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.ಸಾಮಿ ಮತ್ತು ನಾನು ಪೆಪ್ಪಿ ನಂಬರ್‌ಗೆ ನನ್ನ ಕೈಲಾದದ್ದನ್ನು ನೀಡಲು ಹಲವು ಗಂಟೆಗಳ ಕಾಲ ಪ್ರಾಕ್ಟೀಸ್ ಮಾಡಿದ್ದು ನೆನಪಿದೆ. ಕಳೆದ ಕೆಲವು ದಿನಗಳಲ್ಲಿ ನಿಮ್ಮಲ್ಲಿ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಹುಕ್ ಸ್ಟೆಪ್ ಮಾಡುವುದನ್ನು ನಾನು ನೋಡಿದ್ದೇನೆ. ಅದು ನನ್ನನ್ನು ಮತ್ತೆ ಶೂಟಿಂಗ್ ದಿನಗಳಿಗೆ ಕರೆದೊಯ್ಯುತ್ತದೆ. ಪ್ರಪಂಚದಾದ್ಯಂತದ ಜನರಿಂದ ನಾನು ಪಡೆದ ಎಲ್ಲಾ ಪ್ರೀತಿಯು ಈ ಹಾಡನ್ನು ಸೂಪರ್ ಸ್ಪೆಷಲ್ ಮತ್ತು ಸ್ಮರಣೀಯವಾಗಿಸುತ್ತದೆ ಎಂದಿದ್ದಾರೆ.
