ಸ್ನಾನದ ಟವಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡ ಮಾಡಲ್ ಪೂಜಾ. ಸಾವಿನ ಹಿಂದೆ ಅನೇಕ ಅನುಮಾನಗಳು...

ಮಾಡಲಿಂಗ್ ಲೋಕದಲ್ಲಿ ಸಾಧನೆ ಮಾಡಬೇಕು, ಕಿರೀಟ ಗೆಲ್ಲಬೇಕು ಎಂದು ನೂರಾರು ಕನಸು ಕಟ್ಟಿಕೊಂಡಿದ್ದ ಕಾಲೇಜ್ ವಿದ್ಯಾರ್ಥಿನಿ ಪೂಜಾ ಸರ್ಕಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾನ್ಸ್ದ್ರೋನಿದಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿರುವ ಪೂಜೆ ಬಾಯ್‌ ಫ್ರೆಂಡ್‌ ಕರೆ ಸ್ವೀಕರಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇದಕ್ಕೆ ಆತನೇ ಕಾರಣ ಎಂದು ಆಪ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಪೂಜಾ ಬಾಯ್‌ಫ್ರೆಂಡ್ ಗೋಬರ್ದಂಗ, ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. 

ಉತ್ತರ 24 ಪರಗಣಾಸ್‌ ಜಿಲ್ಲೆಯಲ್ಲಿರುವ ಗೋಬರ್ದಂಗ ಕಾಲೇಜುನಲ್ಲಿ ಮೊದಲ ವರ್ಷ ಓದುತ್ತಿರುವ ಪೂಜಾ ಸರ್ಕಾರ್ ಮಾಡಲ್ ಅಗಬೇಕು ಎಂದು ತುಂಬಾನೇ ಆಸೆ ಹೊತ್ತಿದ್ದರು. ಈ ಕಾರಣಕ್ಕೆ ಅನೇಕ ಶೂಟ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎನ್ನಲಾಗಿದೆ. ಪೊಲೀಸರು ನೀಡಿರುವ ಪ್ರಥಮ ತನಿಖೆ ಮಾಹಿತಿ ಪ್ರಕಾರ ಪೂಜಾ ತನ್ನ ಸ್ನೇಹಿತರ ಜೊತೆ ಶನಿವಾರ ಸಂಜೆ ಹೋಟೆಲ್‌ಗೆ ಭೇಟಿ ನೀಡಿದ್ದಳು. ಊಟದ ನಂತರ ಮನೆಗೆ ಹಿಂತಿರುಗಿ ವಿಶ್ರಾಂತಿಸುತ್ತಿದ್ದ ಪೂಜಾಗೆ ಮಧ್ಯರಾತ್ರಿ ಕರೆ ಬಂದಿದೆ. ಕರೆ ಸ್ವೀಕರಿಸಿ ಮಾತನಾಡಿ ಇದ್ದಕ್ಕಿದ್ದಂತೆ ರೂಮಿಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ ಎನ್ನಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಹೇಳಿದ್ದಾರೆ. 

ತಮಿಳುನಾಡು ಬಾಲಕಿ ನಿಗೂಢ ಸಾವು: ನ್ಯಾಯಕ್ಕಾಗಿ ಆಗ್ರಹಿಸಿ ಹಿಂಸಾಚಾರ

ಪೂಜಾ ರೂಮಿಗೆ ಓಡಿ ಹೋದ ರಬದಕ್ಕೆ ಸ್ನೇಹಿತೆ ಗಾಬರಿಗೊಂಡು ಅನೇಕ ಬಾರಿ ಕರೆ ಮಾಡಿದ್ದಾಳೆ ಹಾಗೆ ಬಾಗಿಲು ತೆಗೆಯುವ ಪ್ರಯತ್ನ ಮಾಡಿದ್ದಾಳೆ. ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಪೊಲೀಸರ ಗಮನಕ್ಕೆ ತಂದಿದ್ದಾರೆ. ಬಾಯ್‌ಫ್ರೆಂಡ್ ಕರೆ ಸ್ವೀಕರಿಸಿ ಪೂಜಾ ರೂಮ್‌ ಬಾಗಿಲು ಮುಚ್ಚಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ರೂಮ್‌ ಬಾಗಿಲು ಹೊಡೆದು ನೋಡಿದರೆ ಟವಲ್‌ ಸಹಾಯದಿಂದ ಫ್ಯಾನ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 

ಇದು ಆತ್ಮಹತ್ಯೆನೇ ಇರಬಹುದು ಎಂದುಕೊಂಡಿರುವ ಪೊಲೀಸರು ಇಡೀ ಮನೆಯಲ್ಲಿ ಸೂಸೈಡ್‌ ನೋಟ್‌ ಅಥವ ಸಾಕ್ಷಿಗೆ ಹುಡುಕಾಟ ಶುರು ಮಾಡಿದ್ದಾರೆ. 'ಪೂಜಾ ಸರ್ಕಾರ ವಾಸಿಸುತ್ತಿರುವ ಗ್ರೌಂಡ್‌ ಫ್ಲೂರ್‌ ಮನೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಟವಲ್ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕಠಿಣ ತನಿಖೆ ಆರಂಭಿಸಲಿದ್ದಾರೆ.

Koppal: ಮಾನಸಿಕ ಖಿನ್ನತೆ, ರೈಲಿನಡಿ ಬಿದ್ದು ಮೆಡಿಕಲ್‌ ವಿದ್ಯಾರ್ಥಿನಿ ಆತ್ಮಹತ್ಯೆ

ನೇಣು ಬಿಗಿದ ಸ್ಥಿತಿಯಲ್ಲಿ ಮತ್ತೋರ್ವ ರೂಪದರ್ಶಿ ಶವ ಪತ್ತೆ:

ಮೇ 28ರಂದು 18 ವರ್ಷದ ಬೆಂಗಾಲಿ ಮಾಡೆಲ್ ಮತ್ತು ಮೇಕಪ್ ಕಲಾವಿದೆಯೂ ಆಗಿದ್ದ ಸರಸ್ವತಿ ದಾಸ್ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸರಸ್ವತಿ ಶವ ಕಸ್ಬಾ ಪ್ರದೇಶದ ಬೆಡಿಯಾದಂಗದಲ್ಲಿರುವ ನಿವಾಸದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಡೆಲ್ ಆಗಿ ಅನೇಕ ಆಫರ್ಸ್ ಹೊಂದಿದ್ದ ಸರಸ್ವತಿ ನಿಧನ ಮಾಡೆಲಿಂಗ್ ಲೋಕಕ್ಕೆ ಆಘಾತ ತಂದಿದೆ. ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಈ ಮಾಹಿತಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.

ಈ ಘಟನೆ ಮಾಹಿತಿ ನೀಡಿದ ಪೊಲೀಸರು, 'ಇದು ಆತ್ಮಹತ್ಯೆ ಎಂದು ತೋರುತ್ತದೆ. ಆದರೆ ನಾವು ಬೇರೆ ಬೇರೆ ಕೋನಗಳಿಂದ ತನಿಖೆ ಮಾಡುತ್ತಿದ್ದೇವೆ. ಸರಸ್ವತಿ ಅಜ್ಜಿ ಮೊದಲು ಆಕೆಯನ್ನು ನೋಡಿದರು. ಬಳಿಕ ಹತ್ತರಿದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮರಣೋತ್ತರ ವರದಿಗಾಗಿ ನಾವು ಕಾಯುತ್ತಿದ್ದೇವೆ' ಎಂದು ಹೇಳಿದ್ದಾರೆ.

ಇನ್ನು ಇತ್ತೀಚಿಗಷ್ಟೆ ಸಾವನ್ನಪ್ಪಿದ ಮಾಡೆಲ್‌ಗಳಾದ ಮಂಜಷಾ ನಿಯೋಗಿ, ಬಿದಿಶಾ ಡಿ ಮಜುಂದಾರ್ ಮತ್ತು ನಟಿ ಪಲ್ಲವಿ ಡೇ ಅವರೊಂದಿಗೆ ಸಂಪರ್ಕ ಹೊಂದಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮೂವರು ಮಾಡೆಲ್‌ಗಳ ಸಾವು ಸಹ ನಿಗೂಢವಾಗಿದೆ.