Asianet Suvarna News Asianet Suvarna News

ವಿರಾಟ್ ಕೊಹ್ಲಿ ಮಡದಿ, ನಟಿ ಅನುಷ್ಕಾ ಶರ್ಮಾರ ಮಾಸಿಕ ಆದಾಯ ಎಷ್ಟು ಗೊತ್ತಾ?

ನಟನೆ, ಜಾಹೀರಾತು, ಸಾಮಾಜಿಕ ಜಾಲತಾಣ, ರೂಪದರ್ಶಿ... ಹೀಗೆ ಹಲವು ಕ್ಷೇತ್ರಗಳಲ್ಲಿ ಆದಾಯ ಗಳಿಸುತ್ತಿರುವ ನಟಿ ಅನುಷ್ಕಾ ಶರ್ಮಾ ಅವರು ತಿಂಗಳಿಗೆ ಸರಾಸರಿ ಎಷ್ಟು ದುಡಿಯುತ್ತಾರೆ ಗೊತ್ತಾ?
 

Know how much Anushka Sharma earns per month
Author
First Published May 4, 2023, 6:12 PM IST | Last Updated May 4, 2023, 6:12 PM IST

ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ (Anushka Sharma) ಅವರ ಪರಿಚಯ ಇಂದು ಅಗತ್ಯವಿಲ್ಲ.  ಮೊನ್ನೆಯಷ್ಟೇ ಅಂದರೆ ಮೇ 1ರಂದು  35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ, ಪತಿ ವಿರಾಟ್ ಕೊಹ್ಲಿ (Virat Kohli) ಜೊತೆ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ವಿರಾಟ್​ ಕೊಹ್ಲಿ ಅವರ ಜೊತೆಗೂಡಿ ವಿರುಷ್ಕಾ ಆಗಿದ್ದಾರೆ. ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ  ಈ ಜೋಡಿ  ಅವರ ಅಪರೂಪದ ಜೋಡಿ  2017 ರ ಡಿಸೆಂಬರ್​ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.  ಸಿನಿಮಾದ ಉತ್ತುಂಗದಲ್ಲಿರುವಾಗಲೇ ಮದುವೆಯಾಗುವ ಮನಸ್ಸು ಮಾಡಿದ್ದರು ಅನುಷ್ಕಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ವಿರಾಟ್​ ಕೊಹ್ಲಿ ಅವರ ಜೊತೆ ಇವರ ಮದುವೆಯಾಗಿದ್ದು, ಈ ರೊಮಾಂಟಿಕ್​ ಜೋಡಿಗೆ  2021ರಲ್ಲಿ ವಾಮಿಕಾ ಎಂಬ ಮಗಳು ಜನಿಸಿದಳು. ಇಂತಿಪ್ಪ ಅನುಷ್ಕಾ ಶರ್ಮಾ ಅವರ ಆದಾಯದ ಮೇಲೆ ಈಗ ನೆಟ್ಟಿಗರ ಕಣ್ಣು ಬಿದ್ದಿದೆ. ಇವರ ಆದಾಯವೆಷ್ಟು? ಅವರ ಆಸ್ತಿ ಎಷ್ಟು ಎಂದು ಲೆಕ್ಕ ಹಾಕಿದ್ದು, ಅದೀಗ ಬಹಿರಂಗಗೊಂಡಿದೆ.  

ಅದರಲ್ಲೂ ಈ ದಂಪತಿ ಸೆಲೆಬ್ರಿಟಿಗಳು, ಅನುಷ್ಕಾ ಸಿನಿಮಾ ಕ್ಷೇತ್ರದಲ್ಲಿದ್ದರೆ, ಪತಿ ಕ್ರಿಕೆಟಿಗ. ಇನ್ನು ಕೇಳಬೇಕೆ? ಸಾಲದು ಎಂಬುದಕ್ಕೆ ಜಾಹೀರಾತುಗಳಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತೆ ಈ ಜೋಡಿ. ಜೊತೆಗೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಮಾಡುವ ಪೋಸ್ಟ್​ಗಳಿಗೂ ದುಡ್ಡು ಬರುತ್ತದೆ. ಎಲ್ಲಾ ಮೂಲಗಳಿಂದಲೂ ಆದಾಯ ಬಂದ ಮೇಲೆ ಅದನ್ನು ಲೆಕ್ಕ ಹಾಕುವುದೇ ಬಹುಶಃ ಅವರಿಗೆ ಸವಾಲು ಎನಿಸಬಹುದೇನೋ. ಇನ್ನು ನಟಿ ಅನುಷ್ಕಾ ಕುರಿತು ಮಾತನಾಡುವುದಾದರೆ, ಇವರು ತಮ್ಮ  ಪ್ರತಿ ಚಿತ್ರಗಳಿಗೆ 10-15 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಆದ್ದರಿಂದ ದುಬಾರಿ ಸಂಭಾವನೆ ಪಡೆಯುವ ನಟಿ ಎಂದೂ ಇವರು ಎನಿಸಿಕೊಂಡಿದ್ದಾರೆ. 

ವಿರಾಟ್​ ಕೊಹ್ಲಿಜೀ... ಪ್ಲೀಸ್​ ಹೆಂಡ್ತಿಗೆ ಒಂದು ಚಡ್ಡಿ ಕೊಡಿಸಿ ಅಂತಿದ್ದಾರೆ ನೆಟ್ಟಿಗರು​!

ಇದರ ಜೊತೆ, ನಟಿ  ಉದ್ಯಮಿಯೂ ಹೌದು. ಅವರು ನಶ್ (Nash) ಎಂಬ ತಮ್ಮದೇ ಆದ ಬಟ್ಟೆ ಅಂಗಡಿ ಹೊಂದಿದ್ದಾರೆ. ಕ್ಲೀನ್ ಸ್ಲೇಟ್ ಫಿಲ್ಮ್ಸ್ ಎಂಬ ನಿರ್ಮಾಣ ಕಂಪೆನಿ ಇವರ ಹೆಸರಿನಲ್ಲಿ ಇದೆ. ಈ ಕಂಪೆನಿಯ ಮೂಲಕ ಇದಾಗಲೇ  ಎನ್ಎಚ್ 10, ಫಿಲ್ಲೌರಿ ಮತ್ತು ಪರಿಯಂತಹ ಹಿಟ್ ಚಲನಚಿತ್ರಗಳ ನಿರ್ಮಾಣವಾಗಿದೆ. ಅವರು ಹಲವಾರು ಪ್ರಮುಖ ಬ್ರ್ಯಾಂಡ್ ಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

 ಅನುಷ್ಕಾ ಅವರ ಸರಾಸರಿ ಮಾಸಿಕ ಆದಾಯ ಲೆಕ್ಕ ಹಾಕುವುದಾದರೆ ಒಂದು  ಕೋಟಿ ರೂಪಾಯಿ ಎನ್ನಲಾಗಿದೆ. ಇದರ ಜೊತೆಗೆ  ವಿವಿಧ ಆದಾಯ ಮೂಲಗಳಿಂದ ತಿಂಗಳಿಗೆ 1 ಕೋಟಿ ರೂಪಾಯಿ ಹಣವನ್ನು ಸಂಪಾದಿಸುತ್ತಿದ್ದಾರೆ. ಆದರೆ ಹಲವು ಸೆಲೆಬ್ರಿಟಿಗಳು ಸರ್ಕಾರಕ್ಕೆ ತೆರಿಗೆ (Income Tax) ಕಟ್ಟದೇ ವಂಚನೆ ಮಾಡುವ ಘಟನೆಗಳು ನಡೆಯುತ್ತಿವೆ. ಅದೇ ರೀತಿಯ ಒಂದು ಆರೋಪ ಅನುಷ್ಕಾಮೇಲೆಯೂ ಇತ್ತು. ಅದು ಹೈಕೋರ್ಟ್​ ಬಾಗಿಲಿಗೂ ಹೋಗಿತ್ತು. 2012ರಿಂದ 2016ರವರೆಗಿನ ಬಾಕಿ ತೆರಿಗೆ ಪಾವತಿ ಮಾಡುವಂತೆ ತೆರಿಗೆ ಇಲಾಖೆ ಇವರಿಗೆ ನೋಟಿಸ್​ ನೀಡಿತ್ತು. ಈ ಆದೇಶದ ವಿರುದ್ಧ  ಅನುಷ್ಕಾ ಶರ್ಮಾ ಬಾಂಬೆ ಹೈಕೋರ್ಟ್​ಗೆ (Bombay HC) ಅರ್ಜಿ ಸಲ್ಲಿಸಿದ್ದರು.  ಈ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿತ್ತು. ಇದಾಗಿದ್ದು ಕಳೆದ ಮಾರ್ಚ್​ ತಿಂಗಳಿನಲ್ಲಿ. 

VIRUSHKA: ಮದ್ವೆಗೂ ಮುಂಚೆಯೇ ಬ್ರೇಕಪ್​! ಇವರದ್ದು ಕುತೂಹಲದ Love Story

ಅನುಷ್ಕಾ ಅವರು ನಡೆಸಿಕೊಡುವ ಕಾರ್ಯಕ್ರಮಗಳು, ಜಾಹೀರಾತುಗಳು ಡ್ಯಾನ್ಸ್ ಶೋಗಳಿಂದ ಪಡೆಯುವ ಆದಾಯಕ್ಕೆ ಅವರು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಇಲಾಖೆ ಹೇಳಿತ್ತು. ಈ ಕುರಿತು 2021–22ರ ಅವಧಿಯಲ್ಲಿ ಅನುಷ್ಕಾ ಅವರಿಗೆ ಬಾಕಿ ಪಾವತಿಸುವಂತೆ ಆದೇಶ ನೀಡಿತ್ತು. ಇಲಾಖೆ ಪ್ರಕಾರ, 2012–13ರ ಅವಧಿಯಲ್ಲಿ ಅವರ ಆದಾಯವನ್ನು 12.3 ಕೋಟಿ ರೂಪಾಯಿ ಎಂದು ಪರಿಗಣಿಸಲಾಗಿದೆ. ಆದರೆ ಅದನ್ನು ಅವರು ಕಟ್ಟಿರಲಿಲ್ಲ.  ಈ ಮೊತ್ತದ ತೆರಿಗೆಯು ಬಡ್ಡಿ ಸೇರಿ ₹1.2 ಕೋಟಿ. 2013–14ರ ಅವಧಿಯ ತೆರಿಗೆ ₹1.6 ಕೋಟಿ ಎನ್ನಲಾಗಿದೆ.

ಇನ್ನು,  ಕೆಲಸದ ವಿಷಯಕ್ಕೆ ಬಂದರೆ ಅನುಷ್ಕಾ ಶರ್ಮಾ ಮುಂದಿನ ಗ್ಯಾಂಗ್ಸ್ಟರ್ ಕಾಮಿಡಿ 'ಕನೆಡಾ' ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್ ಮತ್ತು ಅರ್ಜುನ್ ಕಪೂರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
 

Latest Videos
Follow Us:
Download App:
  • android
  • ios