Onomatomania: ನಾಸಿರುದ್ದೀನ್ ಶಾಗೆ ಈ ವಿಚಿತ್ರ ಕಾಯಿಲೆ ಇದೆಯಂತೆ!

ಸಾಮಾನ್ಯವಾಗಿ ನಾವು ನಮಗೆ ಇಷ್ಟವಾದ ಕೆಲವು ಹಾಡು (Song)ಗಳನ್ನು ಮತ್ತೆ ಮತ್ತೆ ಗುನುಗುತ್ತಿರುತ್ತೇವೆ. ಅದೇ ರೀತಿ ಕೆಲವು ಪದ (Word)ಗಳನ್ನು, ವಾಕ್ಯಗಳನ್ನು ಮತ್ತೆ ಮತ್ತೆ ಉಚ್ಚರಿಸುವವರಿದ್ದಾರೆ. ಆದ್ರೆ ಇದೇ ರೀತಿ ಯಾವಾಗ್ಲೂ ಮಾಡ್ತಾ ಇದ್ರೆ ಇದೂ ಒಂದು ಕಾಯಿಲೆ (Disease) ಅನ್ನೋದು ನಿಮ್ಗೆ ಗೊತ್ತಾ ?

Know About This Rare Mental Disease Of Naseeruddin Shah

ಬಾಲಿವುಡ್ (Bollywood) ನಟ (Actor) ನಾಸಿರುದ್ದೀನ್ ಶಾ (Naseeruddin Shah) ಅವರು ಒಂದು ವಿಚಿತ್ರ ಕಾಯಿಲೆಯಿಂದ ಆಗಾಗ ಬಳಲುತ್ತಾರೆ. ಇದು ಅಪರೂಪದಲ್ಲಿ ಅಪರೂಪದ ಕಾಯಿಲೆ. ಲಕ್ಷ ಮಂದಿಯಲ್ಲಿ ಒಬ್ಬರಿಗೆ ಬರಬಹುದು. ಇದು ಮಾತಿಗೆ ಸಂಬಂಧಪಟ್ಟ ಸಮಸ್ಯೆ. ಅದರ ಹೆಸರು 'ಓನೋಮಾಟೋಮೇನಿಯಾ' (Onomatomania). ಹಾಗೆಂದರೆ ಕೆಲವು ಪದಗಳನ್ನು ಮತ್ತೆ ಮತ್ತೆ ಉಚ್ಚರಿಸುತ್ತಲೇ ಇರುವುದು. ಥಟ್ಟನೆ ಇದೊಂದು ನಿರುಪಾಯಕಾರಿ ಸಮಸ್ಯೆ ಎನಿಸಬಹುದು. ಆದರೆ ಇದೊಂದು ವಿಚಿತ್ರ ಕಾಯಿಲೆ.

ಉದಾಹರಣೆಗೆ ನೀವು 'ಯುಫೋರಿಯಾ' ಎಂಬ ಪದವನ್ನು ಒಮ್ಮೆ ಇಷ್ಟಪಟ್ಟರೆ, ನೀವು ಸಾಧ್ಯವಾದಾಗಲೆಲ್ಲಾ ಅದನ್ನು ಬಳಸಲು ಒಲವು ತೋರುತ್ತೀರಿ. ಓನೊಮಾಟೋಮೇನಿಯಾ ಒಂದು ನಿರ್ದಿಷ್ಟ ಪದದ ಗೀಳು. ಡಿಕ್ಷನರಿಯಲ್ಲಿ ಇದನ್ನು ಕೆಲವು ಪದಗಳ ಮೇಲೆ ಅಸಹಜವಾದ ಏಕಾಗ್ರತೆ ಮತ್ತು ಅವುಗಳ ಪ್ರಸ್ತುತತೆ ಅಗತ್ಯವಿಲ್ಲದಲ್ಲೂ ಮತ್ತೆ ಮತ್ತೆ ಬಳಸುವಿಕೆ ಎಂದು ವ್ಯಾಖ್ಯಾನಿಸಲಾಗಿದೆ. ಸ್ವತಃ ನಾಸಿರುದ್ದೀನ್ ಶಾ ಒಂದು ಇಂಟರ್‌ವ್ಯೂನಲ್ಲಿ ಈ ವಿಚಾರದ ಬಗ್ಗೆ ಹೇಳಿದ್ದಾರೆ.

'ನಾನು ಓನೊಮಾಟೋಮೇನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ಇದು ಒಂದು ವೈದ್ಯಕೀಯ ಸ್ಥಿತಿ. ನೀವು ನಿಘಂಟಿನಲ್ಲಿ ಪರಿಶೀಲಿಸಬಹುದು. ಒನೊಮಾಟೋಮೇನಿಯಾ ಒಂದು ಮಾನಸಿಕ ಕಾಯಿಲೆ. ಇದರಲ್ಲಿ ನೀವು ಯಾವುದೇ ಕಾರಣವಿಲ್ಲದೆ ಒಂದು ಪದ ಅಥವಾ ಪದಗುಚ್ಛ, ವಾಕ್ಯ ಅಥವಾ ಪದ್ಯ ಅಥವಾ ಭಾಷಣವನ್ನು ಪುನರಾವರ್ತಿಸುತ್ತೀರಿ.

ನೀವು ಅದನ್ನು ಕೇಳಲು ಇಷ್ಟಪಡುತ್ತೀರಿ ಎಂಬುದನ್ನು ಹೊರತುಪಡಿಸಿ ಅದನ್ನು ಹೇಳಲು ಬೇರ್ಯಾವುದೇ ಕಾರಣವಿರೋಲ್ಲ. ನಾನು ಅದನ್ನು ಎಲ್ಲಾ ಸಮಯದಲ್ಲೂ ಮಾಡುತ್ತಿರುತ್ತೇನೆ. ಹೀಗಾಗಿ ನನ್ನ ಮನಸ್ಸಿಗೆ ವಿಶ್ರಾಂತಿ ಎಂಬುದೇ ಇಲ್ಲ. ಕೆಲವೊಮ್ಮೆ ನಾನು ಮಲಗಿರುವಾಗಲೂ, ನಿದ್ರೆಯಲ್ಲೂ ಏನೋ ಉದ್ಗರಿಸುತ್ತಿರುತ್ತೇನೆ' ಎಂದು ನಾಸಿರುದ್ದೀನ್ ಶಾ ಸಂದರ್ಶನದಲ್ಲಿ ಹೇಳಿಕೊಂಡರು.

Aamir Khan; ಕುಡಿತದ ಚಟದಿಂದ ಹೊರಬಂದ ಬಗ್ಗೆ ಬಹಿರಂಗ ಪಡಿಸಿದ ಮಿಸ್ಟರ್ ಪರ್ಫೆಕ್ಷನಿಸ್ಟ್

ಒನೊಮಾಟೋಮೇನಿಯಾ ಒಂದು ವರ್ತನಾ ಸಮಸ್ಯೆ (Behaviour). ಅದು ಮಾನಸಿಕ (Mental Illness) ಸಮಸ್ಯೆಯೂ ಹೌದು. ಸಾಮಾನ್ಯವಾಗಿ ಇದು ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್‌ (Obseccive Compulsive Disorder) ನೊಂದಿಗೆ ಸಂಬಂಧ ಹೊಂದಿದೆ.  ಓನೊಮಾಟೋಮೇನಿಯಾವನ್ನು ಜೀನ್-ಮಾರ್ಟಿನ್ ಚಾರ್ಕೋಟ್, ವ್ಯಾಲೆಂಟಿನ್ ಮ್ಯಾಗ್ನಾನ್ ಎಂಬ ವಿಜ್ಞಾನಿಗಳು ಪೂರ್ವಗ್ರಹೀತ ಪರಿಕಲ್ಪನೆಗಳಿಂದ ಪೀಡಿತರಾದ ರೋಗಿಗಳಲ್ಲಿ ಮೊದಲು ಗಮನಿಸಿದರು.

ಜೀನ್-ಮಾರ್ಟಿನ್ ಚಾರ್ಕೋಟ್ ಅವರನ್ನು ಆಧುನಿಕ ನರವಿಜ್ಞಾನದ ಪಿತಾಮಹ ಎಂದು ಪರಿಗಣಿಸಲಾಗಿದೆ. ಚಾರ್ಕೋಟ್‌ ಅವರ ಇತರ ಮಹತ್ವದ ಸಾಧನೆಗಳೆಂದರೆ ಮೆದುಳಿನ ನಾಳದ ಸಂಪರ್ಕದ ವಿವರಣೆ, ಮಲ್ಟಿಪಲ್ ಸ್ಕ್ಲೆರೋಸಿಸ್ ಹಾಗೂ ಪಾರ್ಕಿನ್ಸನ್ ಕಾಯಿಲೆಗಳ ನಡುಕದ ಪ್ರತ್ಯೇಕಿಸುವಿಕೆ, ಅಪಸ್ಮಾರ (Epilepsy) ದಿಂದ ಹಿಸ್ಟೀರಿಯಾ (Hysteria) ವನ್ನು ಪ್ರತ್ಯೇಕಿಸಿದ್ದು ಇತ್ಯಾದಿ. 

1890ರಲ್ಲಿ ಮತ್ತೊಬ್ಬ ಸಂಶೋಧಕ ಕುಲೆರೆ ಅವರು ಅಪಸ್ಮಾರ ಮತ್ತು ಒನೊಮೆಟೋಮೇನಿಯಾ ನಡುವಿನ ಸಂಬಂಧವನ್ನು ಗಮನಿಸಿದರು. ಜರ್ಮನ್ ಮನೋವೈದ್ಯ ರುಡಾಲ್ಫ್ ಗಾಟ್‌ಫ್ರೈಡ್ ಅರ್ಂಡ್ಟ್ ಅವರು ಒನೊಮಾಟೋಮೇನಿಯಾವನ್ನು ಮಾನಸಿಕ ಕಾಯಿಲೆ ಎಂದೇ ಕರೆದಿದ್ದಾರೆ.

The Kashmir Files ಚಿತ್ರದ ಬಗ್ಗೆ ವ್ಯಂಗ್ಯವಾಡಿದ ಸ್ವರಾ ಭಾಸ್ಕರ್ ಹಿಗ್ಗಾಮುಗ್ಗಾ ಟ್ರೋಲ್

ನಿಮ್ಮಲ್ಲೂ ಇರಬಹುದಾ?
ಸಾಮಾನ್ಯವಾಗಿ ನಾವು ನಮಗೆ ಇಷ್ಟವಾದ ಕೆಲವು ಪದಗಳನ್ನು, ವಾಕ್ಯಗಳನ್ನು ಮತ್ತೆ ಮತ್ತೆ ಉಚ್ಚರಿಸುತ್ತಿರುತ್ತೇವೆ. ಕೆಲವೊಮ್ಮೆ, ವಿಚಾರವನ್ನು ವಿವರಿಸಲು ಸೂಕ್ತ ಪದಗಳು ದೊರಕದೆ ಹೋದಾಗಲೂ, ಅಪ್ರಸ್ತುತ ಎನಿಸುವ ಪದವೊಂದನ್ನು ಅಲ್ಲಿ ಬಳಸುತ್ತೇವೆ. ಇದು ಸಾಮಾನ್ಯ ಹಾಗೂ ಎಲ್ಲರಿಗೂ ಆಗುವ ಅನುಭವ. ಪದೇ ಪದೇ ಒಂದೇ ಪದವನ್ನು ಯಾವಾಗಲೂ, ಕಾರಣವಿಲ್ಲದೇ, ಅಪ್ರಸ್ತುತ ಸನ್ನಿವೇಶದಲ್ಲೂ ಮರುಕಳಿಸುವುದು. ನಿಮಗದು ಇದೆಯೇ ಇಲ್ಲವೇ ಎಂಬುದನ್ನು ಮಾನಸಿಕ ತಜ್ಞರು ಸೂಕ್ತ ಪರೀಕ್ಷೆಗಳ ಮೂಲಕ ನಿರ್ಣಯಿಸುತ್ತಾರೆ. 

Latest Videos
Follow Us:
Download App:
  • android
  • ios