ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ (Kangana Ranaut) ಆಗಿಂದಾಗೆ ಯಡವಟ್ಟು ಹೇಳಿಕೆಗಳನ್ನು ನೀಡಿ ವಿವಾದ ಮಾಡಿಕೊಳ್ತಾನೆ ಇರ್ತಾರೆ. ಸದ್ಯ ತಲೈವಿ ನಟಿ ಶಾಹೀದ್ ಕಪೂರ್ (Shahid Kapoor) ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಕಬೀರ್ ಸಿಂಗ್ ನಟನಿಗೆ ಕಿಸ್ (Kiss) ಮಾಡುವುದು ಒಂದು ರೀತಿಯಲ್ಲಿ ಟ್ರ್ಯಾಜಿಡಿ ಎಂದಿದ್ದಾರೆ.
ಬಾಲಿವುಡ್ (Bollywood)ನ ಕಾಂಟ್ರವರ್ಸಿ ಕ್ವೀನ್ ನಟಿ ಕಂಗನಾ ರಣಾವತ್ (Kangana Ranaut). ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ತಮ್ಮ ಅದ್ಭುತ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿರುವ ಕಂಗನಾ ಪದ್ಮಶ್ರೀ ಪ್ರಶಸ್ತಿ (Padma Shri Award)ಗೂ ಭಾಜನಾಗಿದ್ದಾರೆ. ಎಂಥಾ ಪಾತ್ರ ನಟಿಸಲೂ ಸೈ ಎಂದೆನಿಸಿಕೊಂಡಿರುವ ಈ ನಟಿ ಆಗಿಂದಾಗೆ ವಿವಾದಗಳನ್ನು ಮಾಡಿಕೊಳ್ಳುತ್ತಾರೆ. ಇತಿಹಾಸ, ದೇಶದ ಬಗ್ಗೆ, ನಟರ ಬಗ್ಗೆ ಕಾಮೆಂಟ್ ಮಾಡಿ ಸದ್ಯ ಬೋಲ್ಡ್ ಹೇಳಿಕೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಬಿಟೌನ್ ಮಂದಿ ಬೋಲ್ಡ್ ಲುಕ್, ಬೋಲ್ಡ್ ಹೇಳಿಕೆ ನೀಡುವುದರಲ್ಲಿ ಮೊದಲಿಗರು. ಕಾಂಟ್ರವರ್ಸಿ ಆದ್ರೂ ನೋ ಪ್ರಾಬ್ಲಂ ಅಂತಾರೆ. ಹೀಗಿರುವಾಗ್ಲೇ ಎಲ್ರಿಗೂ ಡೋಂಟ್‍ಕೇರ್ ಅನ್ನೋ ತಲೈವಿ ನಟಿ ಶಾಹೀದ್ ಕಪೂರ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್ ನಟರಲ್ಲಿ ಶಾಹೀದ್ ಕಪೂರ್‌ಗೆ ಕಿಸ್ ಮಾಡುವುದು ಅತಿ ದೊಡ್ಡ ಅಸಹ್ಯ ಕೆಲಸ ಎಂದಿದ್ದಾರೆ.
ಅಲ್ಲು, ಯಶ್ ಫೋಟೋ ಶೇರ್ ಮಾಡಿ Bollywoodನಿಂದ ದೂರವಿರಿ ಎಂದ ಕಂಗನಾ!
ಬಾಲಿವುಡ್‍ನಲ್ಲಿ ಕೆಲವೊಬ್ಬರು ನಟ-ನಟಿಯರಿಗೆ ಪರಸ್ಪರ ಆಗಿ ಬರಲ್ಲ. ಆ ಲಿಸ್ಟ್‌ನಲ್ಲಿ ಶಾಹೀದ್ ಕಪೂರ್ ಹಾಗೂ ಕಂಗನಾ ರಣಾವತ್ ಫಸ್ಟ್ ಬರುತ್ತಾರೆ. ಅದೆಷ್ಟೋ ವರ್ಷಗಳಿಂದಲೂ ಇಬ್ಬರಿಬ್ಬರಿಗೆ ಆಗಿ ಬರಲ್ಲ. ಕಂಗನಾ ರಣಾವತ್ ಯಾವುದೇ ಸಂದರ್ಶನಲ್ಲಿ ಮಾತನಾಡಿದರೂ ಶಾಹಿದ್ ಕಪೂರ್ ಜೊತೆ ಕೋಲ್ಡ್ ವಾರ್ ಇರುವುದು ನಿಜ. ನನಗೆ ಕಬೀರ್ ಸಿಂಗ್ (Kabir Singh) ನಟ ಇಷ್ಟವಿಲ್ಲ, ಎಂದು ಹೇಳುತ್ತಿದ್ದರು. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದಾಗ ಅವರೊಟ್ಟಿಗೆ ಬೇರೆ ನಟಿಯರು ಕೆಲಸ ಮಾಡಲಿ, ಸತ್ಯ ಗೊತ್ತಾಗುತ್ತದೆ ಎನ್ನುತ್ತಿದ್ದರು.ಈಗ ಮತ್ತೊಮ್ಮೆ ಶಾಹೀದ್ ಕಪೂರ್ ಕುರಿತಾಗಿ ಕಂಗನಾ ರಣಾವತ್ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಶಾಹೀದ್ ಕಪೂರ್ ಚುಂಬಿಸುವುದು ಟ್ರ್ಯಾಜಿಡಿ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ವಿಶಾಲ್ ಭಾರದ್ವಾಜ್ (Vishal Bharadwaj) ನಿರ್ದೇಶನ ಮಾಡಿದ 2017ರ ವಾರ್ ಕಂ ರೋಮ್ಯಾನ್ಸ್ ಸಿನಿಮಾ ರಂಗೂನ್‌ನಲ್ಲಿ (Rangoon) ಕಂಗನಾ ಮತ್ತು ಶಾಹೀದ್ ಕಪೂರ್ ಜೋಡಿಯಾಗಿ ನಟಿಸಿದ್ದರು. ಚಿತ್ರೀಕರಣದ ವೇಳೆ ಇಬ್ಬರೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಜಗಳ ಮಾಡುತ್ತಾರೆ. ಯಾವುದೇ ರೀತಿ ಹೊಂದಾಣಿಕೆ ಇಲ್ಲ ಎಂದು ತಂಡದವರು ಮಾತನಾಡಿಕೊಳ್ಳುತ್ತಿದ್ದರು. ಶಾಹೀದ್ ಜೊತೆ ಒಂದು ದಿನ ಕಳೆಯುವುದೆಂದರೆ ನೈಟ್‍ಮೇರ್ ಎಂದು ಕಂಗನಾ ಹೇಳಿದ್ದರು.
ಹಾಗೆಯೇ ಈಗ ಮತ್ತೊಮ್ಮೆ ಕಂಗನಾ, ಶಾಹೀದ್ ಜತೆಗಿನ ಅಭಿನಯದ ಕುರಿತಾದ ಅನುಭವವನ್ನು ಮಾತನಾಡಿದ್ದಾರೆ. ಶಾಹೀದ್ ಕಪೂರ್ ಜೊತೆಗಿನ ತನ್ನ ಚುಂಬನದ ದೃಶ್ಯವನ್ನು ಅವರು ಅಸಹ್ಯಕರವೆಂದು ವಿವರಿಸಿದರು. ರಂಗೂನ್‌ನಲ್ಲಿ ಚುಂಬನದ ದೃಶ್ಯದ ಬಗ್ಗೆ ಮಾತನಾಡಿರುವ ಕಂಗನಾ ರಣಾವತ್, ದೊಡ್ಡ ಮೀಸೆಯ ಶಾಹಿದ್ ಕಪೂರ್ ಅವರನ್ನು ಚುಂಬಿಸುವುದು ಒಂದು ಒಂದು ರೀತಿಯಲ್ಲಿ ಟ್ರ್ಯಾಜಿಡಿ ಎಂದಿದ್ದಾರೆ.
ಒಂದೇ ರೂಮಲ್ಲಿ Kangana Ranaut ಮತ್ತು ಶಾಹಿದ್ ಕಪೂರ್; ಕೆಟ್ಟ ದಿನದ ಬಗ್ಗೆ ನಟಿ ಮಾತು!
ರಂಗೂನ್‌ನಲ್ಲಿ, ಶಾಹೀದ್ ಮತ್ತು ಕಂಗನಾ ಕಿಸ್ ಮಾಡುವ ದೃಶ್ಯವಿದೆ. ಮಣ್ಣಿನಲ್ಲಿ ಉರುಳಾಡಿಕೊಂಡು ಲಿಪ್ ಲಾಕ್ ಮಾಡುವ ದೃಶ್ಯ ಇದಾಗಿದೆ. ಈ ಬಗ್ಗೆ ಮಾತನಾಡಿದ ಕಂಗನಾ ರಣಾವತ್, ‘ನನಗೆ ಚಿತ್ರದಲ್ಲಿನ ಇಂಟಿಮೇಟ್ ದೃಶ್ಯಗಳನ್ನು ಮಾಡುವುದು ಇಷ್ಟವಿಲ್ಲ. ಅವುಗಳನ್ನು ಶೂಟ್ ಮಾಡುವುದು ಅತ್ಯಂತ ಕಷ್ಟಕರವಾಗಿದೆ. ಅದು ಕೂಡಾ ನಿಮಗಿಷ್ಟ ಇಲ್ಲದವರೊಂದಿಗೆ ಲಿಪ್ ಲಾಕ್ ಮಾಡಬೇಕೆಂದರೆ ಅದೊಂದು ದುರಂತವೇ ಸರಿ’ ಎಂದರು.
ಕಂಗನಾ ಹೇಳಿಕೆಯಿಂದ ಶಾಹೀದ್ ನಿಜವಾಗಿಯೂ ಸಂತಸಗೊಂಡಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಹೀದ್ ಕಪೂರ್, ನಾನು ಸಿನಿಮಾದತ್ತ ಗಮನ ಹರಿಸುತ್ತೇನೆ. ಸಕಾರಾತ್ಮಕತೆಯನ್ನು ಇಷ್ಟಪಡುತ್ತೇನೆ. ನಾವು ವೃತ್ತಿಪರ ಸಮೀಕರಣವನ್ನು ಹಂಚಿಕೊಂಡಿದ್ದೇವೆ. ಹಾಗಾಗಿ ಇಂಥಾ ಕಾಮೆಂಟ್‌ನಿಂದ ನನಗೂ ಆಶ್ಚರ್ಯವಾಯಿತು ಎಂದರು.
