ವ್ಯಾಲೆಂಟೈನ್ಸ್ ವಾರದಲ್ಲಿ ಅತ್ಯಂತ ಇಂಟ್ರೆಸ್ಟಿಂಗ್ ಆದ ದಿನ ಕಿಸ್ ಡೇ. ಇದು ಈ ವಾರದಲ್ಲಿಯೇ ಹೆಚ್ಚು ರೊಮ್ಯಾಂಟಿಕ್ ಆಗಿರುವ ದಿನ. ಜಗತ್ತಿನಾದ್ಯಂತ ಫೆಬ್ರವರಿ 13ರಂದು ಕಿಸ್ಸಿಂಗ್ ಡೇ ಆಚರಿಸಲಾಗುತ್ತದೆ. 

ಹ್ಯಾಪಿ ಕಿಸ್‌ ಡೇ.. ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಬಹಳಷ್ಟು ಐಕಾನಿಕ್ ಕಿಸ್ಸಿಂಗ್ ಸೀನ್‌ಗಳು ಬಂದು ಹೋಗಿವೆ. ಅವುಗಳಲ್ಲಿ ಹೆಚ್ಚು ವೈರಲ್ ಆಗಿ, ಎಂದೂ ನೆನಪಿನಲ್ಲಿ ಉಳಿಯುವಂತಹ ಅತ್ಯಂತ ರೊಮ್ಯಾಂಟಿಕ್ ಕಿಸ್ಸಿಂಗ್ ಸೀನ್‌ಗಳಿವು

Happy ಚಾಕಲೇಟ್ ಡೇ: ಈ ವಿಶೇಷ ದಿನದ ಬಗ್ಗೆ ನೀವರಿಯದ ವಿಚಾರಗಳಿವು

ಟೈಟಾನಿಕ್ ಕಿಸ್ಸಿಂಗ್ಸ ಸೀನ್: ಕಿಸ್ಸಿಂಗ್ ಸೀನ್ ವಿಚಾರಕ್ಕೆ ಬಂದರೆ ಟೈಟಾನಿಕ್ ಸಿನಿಮಾಗೆ ವಿವರಣೆಯ ಅಗತ್ಯವೇ ಇಲ್ಲ. ಕೈಗಳನ್ನು ಮುಕ್ತವಾಗಿ ಗಾಳಿಯಲ್ಲಿ ಹರಡಿ ಡಾಲ್ಫಿನ್‌ಗಳು ಈಜುವುದನ್ನು ನೋಡುತ್ತಾ ನಿಂತ ರೋಸ್‌ಗೆ ತಾನೇ ಹಕ್ಕಿ ಎಂಬಷ್ಟು ಖುಷಿಯಾಗುತ್ತದೆ. ಅಲ್ಲಿಗೆ ಬರುವ ಜಾಕ್ ರೋಸ್‌ನನ್ನು ಹಿಂಭಾಗದಿಂದ ಬಳಸಿ ಹಿಡಿದು ಸಿಹಿ ಮುತ್ತನಿಡುತ್ತಾನೆ. ಇದು ಟೈಟಾನಿಕ್ ಮ್ಯಾಜಿಕ್

ಜಬ್ ವಿ ಮೆಟ್: ಗೀತ್ ಅಭಿಮನ್ಯು ಮತ್ತು ಆದಿತ್ಯ ನಡುವೆ ಡಿಲೆಮ್ಮಾದಲ್ಲಿರುತ್ತಾಳೆ. ಆದರೆ ಮೊದಲ ಬಾರಿ ಆಕೆ ತನ್ನ ಮನಸಿನ ಮಾತು ಕೇಳಲು ನಿರ್ಧರಿಸುತ್ತಾಳೆ. ಕರೀನಾ ಕಪೂರ್ ಶಾಹೀದ್ ಕಪೂರ್‌ಗೆ ನೀಡುವ ಕಿಸ್ ಆನ್‌ಸ್ಕ್ರೀನ್ ಮೇಲೆ ಮಾಡಿದ ವಿಸ್ಮಯ ಈಗಲೂ ಜನರಿಗೆ ಫೇವರೇಟ್

ಗೋಲಿಯೋಂಕಿ ರಾಸ್‌ಲೀಲಾ ರಾಮ್ ಲೀಲಾ : ಈ ಸಿನಿಮಾದ ಪ್ರೇಮ ಕಥೆ ಶುರುವಾಗೋದೇ ಮುತ್ತಿನಿಂದ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಿಸ್ಸಿಂಗ್ ಕೆಮೆಸ್ಟ್ರಿ ಇಂದಿಗೂ ಫೇಮಸ್

ರಾಜ ಹಿಂದುಸ್ತಾನಿ: ಜೋರಾಗಿ ಮಳೆ ಬರುತ್ತಿರುವಾಗ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಮಳೆಯಿಂದ ತಪ್ಪಿಸಿಕೊಳ್ಳೋಕೆ ಮರದ ಆಶ್ರಯ ಪಡೆಯುತ್ತಾರೆ. ಹಳೆಯ ಸಿನಿಮಾಗಳ ಟಿಪಿಕಲ್ ಸೀನ್‌ ಇದು. ಮರದ ಕೆಳಗೆ ಚಿತ್ರಿಸಲಾದ ಈ ಕಿಸ್ಸಿಂಗ್ ಸೀನ್ ಅಂದೂ ಇಂದೂ ಫೇಮಸ್

ಸ್ಪೈಡರ್ ಮ್ಯಾನ್ ಕಿಸ್: ಸ್ಪೈಡರ್ ಮ್ಯಾನ್ ಮತ್ತು ಮೇರಿ ಜೇನ್ ಅವರ ಸ್ಪೈಡರ್ ಮ್ಯಾನ್ ತಳೆಗೆಳಗಾದ ಕಿಸ್ ಫೇಮಸ್. ಬಿರುಸಾಗಿ ಸುರಿಯುವ ಮಳೆಯಲ್ಲಿ ತಲೆಕೆಳಗಾಗಿ ತೂಗುತ್ತಾ ಸ್ಪೈಡರ್ ಮ್ಯಾನ್ ಕಿಸ್ ಮಾಡೋದು ಎಲ್ಲರೂ ಮೆಚ್ಚಿದ ದೃಶ್ಯ